Shiradi Ghat Landslide : ಸಕಲೇಶಪುರ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ವ್ಯಾಪ್ತಿಯ ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ದೊಡ್ಡತಪ್ಲೆ ಬಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 25 ರಲ್ಲಿ ಭೂ ಕುಸಿತ ಉಂಟಾಗಿದ್ದು, ಟ್ಯಾಂಕರ್ ಸೇರಿ ಹಲವು ವಾಹನಗಳು ಮಣ್ಣಿನಡಿಯಲ್ಲಿ ಸಿಲುಕಿವೆ. ಭೂಕುಸಿತದ ಬೆನ್ನಲ್ಲೇ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಶಿರಾಡಿ ಘಾಟ್‌ನ ದೊಡ್ಡತಪ್ಲೆ ಗ್ರಾಮದಲ್ಲಿ ಕಳೆದ 15 ದಿನಗಳಿಂದಲೂ ಮಣ್ಣು ಕುಸಿಯುತ್ತಿದೆ. ಇಂದು ಸಂಭವಿಸಿದ ಭೂ ಕುಸಿತದಿಂದಾಗಿ ಟ್ಯಾಂಕರ್, ಎರಡು ಕಾರುಗಳು ಮಣ್ಣಿನಡಿಯಲ್ಲಿ ಸಿಲುಕಿದ್ದು, ಸದ್ಯ ಜೆಸಿಬಿ ಯಂತ್ರಗಳ ಮೂಲಕ ಮಣ್ಣುಗಳನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದೆ.
ಭೂಕುಸಿತ ಉಂಟಾಗಿರುವ ಬೆನ್ನಲ್ಲೇ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ವಾಹನಗಳನ್ನು ಗುಂಡ್ಯದಲ್ಲೇ ತಡೆಯುವ ಕಾರ್ಯ ನಡೆಯುತ್ತಿದೆ. ಪ್ರಸಕ್ತ ವರ್ಷದಲ್ಲಿ ಈ ಬಾರಿ ಎರಡನೇ ಬಾರಿಗೆ ಶಿರಾಡಿ ಘಾಟ್ ಬಂದ್ ಆಗುತ್ತಿದೆ.
ಇದನ್ನೂ ಓದಿ : 7ನೇ ವೇತನ ಆಯೋಗದ ಶಿಫಾರಸ್ಸು ಅಗಸ್ಟ್ 1ರಿಂದಲೇ ಜಾರಿ : ಸರಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್
ಶಿರಾಡಿ ಘಾಟ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರು – ಮಂಗಳೂರು ಸಂಪರ್ಕ ಬಂದ್ ಆಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ವಾಹನಗಳು ಇದೀಗ ಸಂಪಾಜೆ ಘಾಟ್ ಹಾಗೂ ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ಸಂಚರಿಸುತ್ತಿವೆ.
ಇದನ್ನೂ ಓದಿ : ಕೋಟ ಉದ್ಯಮಿ ಮನೆಗೆ ಬಂದ ಆಗಂತುಕರು ! ಪೊಲೀಸರಿಂದ ತನಿಖೆ ಆರಂಭ
ಮಂಗಳೂರಿನಿಂದ ಮೈಸೂರು, ಬೆಂಗಳೂರು ಸಂಪರ್ಕ ಕಲ್ಪಿಸಲು ಸಂಪಾಜೆ ಘಾಟ್ ಸದ್ಯ ಇರುವ ಏಕೈಕ ಮಾರ್ಗವಾಗಿದ್ದು, ಬೆಂಗಳೂರಿಗೆ ತೆರಳುವವರು ಚಾರ್ಮಾಡಿ ಘಾಟ್, ಹಾಸನ ಮಾರ್ಗವಾಗಿಯೂ ಬೆಂಗಳೂರಿಗೆ ಪ್ರಯಾಣಿಸಬಹುದಾಗಿದೆ. ಇನ್ನೊಂದೆಡೆಯಲ್ಲಿ ಬೆಂಗಳೂರು – ಮಂಗಳೂರು ರೈಲ್ವೆ ರಸ್ತೆಯಲ್ಲಿಯೂ ಭೂ ಕುಸಿತ ಉಂಟಾಗಿದೆ.

ಇದನ್ನೂ ಓದಿ : ಕುಂದಾಪುರ ಚಿನ್ನ ಬೆಳ್ಳಿ ಕೆಲಸಗಾರರ ಸಂಘ : ಅಧ್ಯಕ್ಷರಾಗಿ ಕುಶಕುಮಾರ್ ಪದಗ್ರಹಣ
ಸಕಲೇಶಪುರ – ಸುಬ್ರಹ್ಮಣ್ಯ ನಡುವಿನ ಎಡಕುಮೇರಿಯಲ್ಲಿಯೂ ಭೂ ಕುಸಿತ ಉಂಟಾಗಿದ್ದು, ಬೆಂಗಳೂರು – ಮಂಗಳೂರು- ಕಾರವಾರ ನಡುವಿನ ರೈಲುಗಳ ಸಂಚಾರವು ರದ್ದಾಗಿದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಶಿರಾಡಿ ಘಾಟ್‌ನಲ್ಲಿ ಸದ್ಯ ವಾಹನ ಸಂಚಾರ ಆರಂಭವಾಗುವ ಯಾವುದೇ ಸೂಚನೆ ದೊರೆಯುತ್ತಿಲ್ಲ.
Hassan Shiradi Ghat Landslide Bangalore Mangalore Road Closed