ನಿಮಗಿನ್ನೂ ಗೃಹಲಕ್ಷ್ಮೀ ಯೋಜನೆ ಹಣ ಬಂದಿಲ್ವಾ?! ಹಣ ಪಡೆಯೋಕೆ ಏನು ಮಾಡ್ಬೇಕು? ಇಲ್ಲಿದೆ ಡಿಟೇಲ್ಸ್

ಲಕ್ಷಾಂತರ ಹೆಣ್ಣುಮಕ್ಕಳು (Ration Card) ಪಡಿತರ ಚೀಟಿಯ ಸಮಸ್ಯೆಯಿಂದ ಗೃಹಲಕ್ಷ್ಮೀ ವಂಚಿತರಾಗಿದ್ದಾರೆ. ಹಾಗಿದ್ದರೇ ಗೃಹಲಕ್ಷ್ಮೀ (Gruha Lakshmi Scheme) ವಂಚಿತರು ಏನು ಮಾಡ್ಬೇಕು? ಇಲ್ಲಿದೆ ಡಿಟೇಲ್ಸ್.

ಬೆಂಗಳೂರು : ರಾಜ್ಯದಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ಚುನಾವಣೆಗೂ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಮೂರನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆಯನ್ನು (Gruha Lakshmi Scheme) ಅದ್ದೂರಿಯಾಗಿ ಜಾರಿಗೆ ತಂದಿದೆ.‌ ಇನ್ನೇನು ಮಹಿಳೆಯರ ಅಕೌಂಟ್ ಗೆ ಹಣ ಬೀಳೋದಿಕ್ಕೆ ಕ್ಷಣಗಣನೆ ನಡೆದಿದ್ದು, ಬಹುತೇಕ ಅಕೌಂಟ್ ಗೆ ಹಣ ಸಂದಾಯವಾಗಿದೆ. ಆದರೆ ಲಕ್ಷಾಂತರ ಹೆಣ್ಣುಮಕ್ಕಳು (Ration Card) ಪಡಿತರ ಚೀಟಿಯ ಸಮಸ್ಯೆಯಿಂದ ಗೃಹಲಕ್ಷ್ಮೀ ವಂಚಿತರಾಗಿದ್ದಾರೆ. ಹಾಗಿದ್ದರೇ ಗೃಹಲಕ್ಷ್ಮೀ ವಂಚಿತರು ಏನು ಮಾಡ್ಬೇಕು? ಇಲ್ಲಿದೆ ಡಿಟೇಲ್ಸ್.

ಒಂದು ಅಂದಾಜು ಸರ್ವೇ ಪ್ರಕಾರ ರಾಜ್ಯದಲ್ಲಿ‌ ಇನ್ನೂ ಆರು ಲಕ್ಷಕ್ಕೂ ಅಧಿಕ ಮಹಿಳೆಯರು ಗೃಹಲಕ್ಷ್ಮೀ ಸೌಲಭ್ಯದಿಂದ ವಂಚಿತರಾಗಿದ್ದಾರೆ‌. ಈ ಆರು ಲಕ್ಷ ಮಹಿಳೆಯರು ಗೃಹಲಕ್ಷ್ಮೀಯಿಂದ ವಂಚಿರಾಗ್ತಿರೋದಿಕ್ಕೆ ಮೂಲಕ ಕಾರಣ ಪಡಿತರ ಚೀಟಿ. ಹಲವು ಕುಟುಂಬಗಳಲ್ಲಿ ಪಡಿತರ ಚೀಟಿಯಲ್ಲಿ ಹೆಸರು ಪುರುಷರದ್ದಿದೆ. ಗಂಡಸರನ್ನೇ, ಅಂದ್ರೆ ತಂದೆ, ಪತಿ, ಸಹೋದರನೇ ಮನೆಯ ಯಜಮಾನ ಅಂತಿರೋದರಿಂದ ಲಕ್ಷಾಂತರ ‌ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಸಿಗ್ತಿಲ್ಲ.

Have you got Gruha Lakshmi Yojana money too?! What to do to get paid? Here are the details
Image Credit To Original Source

ಇದನ್ನೂ ಓದಿ : ಮಹಿಳೆಯರಿಗೆ ಬಿಗ್‌ ಶಾಕ್‌ ಕೊಟ್ಟ ಸರಕಾರ : ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಯಲ್ಲಿ ಬಾರೀ ಬದಲಾವಣೆ

ಇನ್ನೊಂದೆಡೆ ಇನ್ನಷ್ಟು ಕುಟುಂಬಗಳಲ್ಲಿ ಮನೆಯ ಯಜಮಾನನ ಸ್ಥಾನದಲ್ಲಿದ್ದ ಅತ್ತೆ, ಮಾವ, ತಂದೆ, ಗಂಡ ಸಾವನ್ನಪ್ಪಿದ್ದಾರೆ. ಆದರೆ ಅವರ ಸಾವು ದಾಖಲೆಗಳಲ್ಲಿ ಎಂಟ್ರಿಯಾಗಿಲ್ಲ. ಹೀಗಾಗಿ ಬಹುತೇಕರಿಗೆ ಗೃಹಲಕ್ಷ್ಮೀ ಸಿಕ್ಕಿಲ್ಲ ‌. ಈ ಸಮಸ್ಯೆ ಮನಗಂಡ ಸರ್ಕಾರ ಇದೇ ಸಪ್ಟೆಂಬರ್ 1 ರಿಂದ ಗೃಹಲಕ್ಷ್ಮೀ ಯೋಜನೆ ವಂಚಿತರಿಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ಸಪ್ಟೆಂಬರ್ 1 ರಿಂದ ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಹತ್ತು ದಿನಗಳ ಡೆಡ್ ಲೈನ್ ನೀಡಲಾಗಿದೆ. ಆದರೆ ವಿಪರ್ಯಾಸವೆಂದರೇ, ತಿದ್ದುಪಡಿಗೆ ಅವಕಾಶ ನೀಡಿದ ಆರಂಭದಲ್ಲೇ ಸರ್ವರ್ ಸಮಸ್ಯೆ ಆರಂಭವಾಗಿದೆ. ಇದನ್ನೂ ಓದಿ : ಉಡುಪಿ ಜಿಲ್ಲೆಯಾದ್ಯಂತ ಸೆಪ್ಟಂಬರ್ 5, 6 ರಂದು ವಿದ್ಯುತ್ ವ್ಯತ್ಯಯ

ಸೆ. 1 ರಿಂದ 10 ರ ವರೆಗೆ ಹತ್ತು ದಿನಗಳ ಕಾಲಾವಕಾಶ ನೀಡಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರಾರಂಭದಲ್ಲೇ ಜನರು ಸರ್ವರ್ ಸಮಸ್ಯೆ ಎದುರಾಗಿದ್ದು, ಮಹಿಳೆಯರು ಬೆಂಗಳೂರು ಒನ್ ಹಾಗೂ ಗ್ರಾಮ ಪಂಚಾಯತ್ ಗಳ ಎದುರು ಕ್ಯೂ ನಿಂತು ಕೆಲಸವಾಗದೇ ನಿರಾಸೆಯಿಂದ ಮನೆಗೆ ಹಿಂತಿರುಗುತ್ತಿದ್ದಾರೆ. ಅಲ್ಲದೇ ಸರ್ಕಾರ ಸರ್ವರ್ ಸಮಸ್ಯೆ ಪರಿಹರಿಸಿಪಡಿತರ ಚೀಟಿ ತಿದ್ದುಪಡಿಗೆ ಹೆಚ್ಚಿನ ಕಾಲಾವಕಾಶವನ್ನು ನೀಡುವಂತೆಯೂ ಜನ ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ : ಮಹಿಳೆಯರಿಗೆ ಬಿಗ್‌ ಶಾಕ್‌ ಕೊಟ್ಟ ಸರಕಾರ : ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಯಲ್ಲಿ ಬಾರೀ ಬದಲಾವಣೆ

ಇನ್ನೂ ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆ ಪ್ರಕ್ರಿಯೆ ಹಾಗೂ ತಿದ್ದುಪಡಿ ಮಾಡಿಸೋದು ಹೇಗೆ ಅನ್ನೋದನ್ನು ಗಮನಿಸೋದಾದರೇ,

  • ಇಲಾಖೆಯ ಅಧಿಕೃತ ವೆಬ್ ಸೈಟ್ https://ahara.kar.nic.in/home ಭೇಟಿ ನೀಡಬೇಕು.
  • ಮುಖ್ಯ ಪುಟದಲ್ಲಿ ಇ-ಸೇವೆಗಳನ್ನು ಆಯ್ಕೆ ಮಾಡಬೇಕು.
  • ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  • ಹೊಸ ಪೇಜ್ ನಲ್ಲಿ ಫಾರ್ಮ್ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.
  • ದಾಖಲೆಗಳನ್ನು ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಬೇಕು.
  • ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್ಮೀಟ್ ಮಾಡಬೇಕು.

    Have you got Gruha Lakshmi Yojana money too?! What to do to get paid? Here are the details
    Image Credit To Original Source

ಅರ್ಜಿ ಸಲ್ಲಿಸುವ ವೇಳೆ ನೀವು ನೀಡಿರುವಂತಹ ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನೆಗೆ ಅಪ್ಡೇಟ್ ಆಗಿರುವ ಹೊಸ ಪಡಿತರ ಚೀಟಿಯನ್ನೂ ಕಳಿಸಲಾಗುತ್ತದೆ. ಒಂದೊಮ್ಮೆ ನಿಮಗೆ ಪಡಿತರ ಚೀಟಿಯ ತಿದ್ದುಪಡಿಗೆ ಯಾವುದೇ ರೀತಿಯ ಸಮಸ್ಯೆಯಾದಲ್ಲಿ ಸರಕಾರದ ಸಹಾಯವಾಣಿಗೆ ಕರೆ ಮಾಡಿ ಇಲ್ಲವೇ ದೂರು ನೀಡಿ ಎಂದು ಹೇಳಲಾಗ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಸರ್ವರ್ ಸಮಸ್ಯೆ ಜನರನ್ನು ಇನ್ನಿಲ್ಲದಂತೆ ಕಾಡ್ತಿದೆ. ಕೂಲಿಗೆ ಹೋಗುವ ಕಾರ್ಮಿಕ ವರ್ಗದ ಹೆಣ್ಣುಮಕ್ಕಳು ಸರಕಾರ ಕೊಟ್ಟಿರುವ ಈ ಸೌಲಭ್ಯ ತಮ್ಮದಾಗಿಸಿಕೊಳ್ಳಲು ದಾಖಲಾತಿ ಪಡೆಯುವ ಸರ್ಕಸ್ ನಲ್ಲೇ ಸೋತು ಹೋಗ್ತಿದ್ದಾರೆ.

Have you got Gruha Lakshmi Yojana money too?! What to do to get paid? Here are the details

Comments are closed.