head bush controversy : ಡಾಲಿ ಧನಂಜಯ್ ನಿರ್ಮಾಣ ಮಾಡಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಹೆಡ್ಬುಷ್ ಸಿನಿಮಾ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಸ್ಯಾಂಡಲ್ವುಡ್ನಲ್ಲಿ ಸದ್ಯ ಸಾಲು ಸಾಲು ಹಿಟ್ ಸಿನಿಮಾಗಳು ಬರುತ್ತಿರುವ ಹಿನ್ನೆಲೆಯಲ್ಲಿ ಹೆಡ್ಬುಷ್ ಸಿನಿಮಾದ ಮೇಲೆಯೂ ಸಾಕಷ್ಟು ನಿರೀಕ್ಷೆಗಳಿತ್ತು. ಆದರೆ ಹೆಡ್ಬುಷ್ ಸಿನಿಮಾ ರಿಲೀಸ್ ಆದ ಬಳಿಕ ವೀರಗಾಸೆ ಕಲಾವಿದರ ಮೇಲೆ ಸಿನಿಮಾದಲ್ಲಿ ಹಲ್ಲೆ ಮಾಡಿ ಅಗೌರವ ತೋರಲಾಗಿದೆ ಎಂದು ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧವನ್ನು ವ್ಯಕ್ತಪಡಿಸಲಾಗ್ತಿದೆ. ಈ ವಿಚಾರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದರು. ವೀರಗಾಸೆ ಕಲಾವಿದರ ಪರವಾಗಿ ಮಾತನಾಡಲು ಹೋದ ಸಚಿವ ಸುನೀಲ್ ಕುಮಾರರೇ ಇದೀಗ ಸೋಶಿಯಲ್ ಮೀಡಿಯಾದ ತೀವ್ರ ವಿರೋಧವನ್ನು ಎದುರಿಸುತ್ತಿದ್ದಾರೆ.
ರೌಡಿ ಶೀಟರ್ ಜಯರಾಜ್ ಜೀವನಾಧಾರಿತ ಈ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ವೀರಗಾಸೆ ವೇಷವನ್ನು ಧರಿಸಿದ್ದ ಕಲಾವಿದರ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ವಿವಾದದ ಕೇಂದ್ರಬಿಂದುವಾಗಿದ್ದು ಡಾಲಿ ಧನಂಜಯ್ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಿದ್ದರು ಎಂದು ಆರೋಪಿಸಲಾಗ್ತಿದೆ. ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ವೀರಗಾಸೆಗೆ ಅವಮಾನ ಮಾಡಿದ್ದರೆ , ಚಿತ್ರತಂಡ ಅದನ್ನು ಸರಿಪಡಿಸಬೇಕು ಎಂದು ಹೇಳಿದ್ದರು. ಈ ಟ್ವೀಟ್ಗೆ ಇದೀಗ ನೆಟ್ಟಿಗರು ಪ್ರತಿಕ್ರಿಯೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದು ನಿಮ್ಮ ಸರ್ಕಾರ ಕೇವಲ ಒಂದು ಸಮುದಾಯಕ್ಕೆ ಮಾತ್ರ ಮಾಸಾಶನ ನೀಡಿದೆ. ವೀರಗಾಸೆ, ಕಂಸಾಳೆ ಹೀಗೆ ಎಲ್ಲಾ ಜಾನಪದ ಕಲಾವಿದರಿಗೂ ಸರ್ಕಾರದಿಂದ ಗೌರವ ಧನ ಸಿಗಬೇಕು ಎಂದು ಆಗ್ರಹಿಸುತ್ತಿದ್ದಾರೆ.
ನೀವು ಟ್ವೀಟ್ನಲ್ಲಿ ಮಾತ್ರ ವೀರಗಾಸೆ ಕಲಾವಿದರ ಮೇಲೆ ಕಾಳಜಿ ತೋರಿದ್ದೀರಿ. ಆದರೆ ಸರ್ಕಾರದ ಸೌಲಭ್ಯ ಕೇವಲ ನಿಮ್ಮ ಭಾಗದ ಕಲಾವಿದರಿಗೆ ಮಾತ್ರ ಕೊಡಿಸಿದ್ದೀರಿ. ನಿಮಗೂ ವೀರಗಾಸೆ ಹಾಗೂ ಕಂಸಾಳೆ ಸೇರಿದಂತೆ ರಾಜ್ಯದ ಇತರೆ ಭಾಗದ ಕಲಾವಿದರ ಮೇಲೆ ನಿಜವಾಗಿಯೂ ಗೌರವವಿದ್ದರೆ ದೈವ ನರ್ತಕರಿಗೆ ಮಾಸಾಶನ ನೀಡಿದಂತೆ ರಾಜ್ಯದ ಇತರೆ ಭಾಗದ ಕಲಾವಿದರಿಗೂ ನಿಮ್ಮ ಸರ್ಕಾರದಿಂದ ಮಾಸಾಶನ ಕೊಡಿಸಿ ಎಂದು ಆಗ್ರಹಿಸಿದ್ದಾರೆ.
ಟ್ವಿಟರ್ನಲ್ಲಿ ಸಾಕಷ್ಟು ವಿರೋಧಗಳನ್ನು ಎದುರಿಸಿದ ಬಳಿಕವೂ ಸಚಿವ ಸುನೀಲ್ ಕುಮಾರ್,ಸರ್ಕಾರದ ಜೊತೆ ಈ ಸಂಬಂಧ ಮಾತನಾಡುತ್ತೇನೆ ಎಂಬ ಭರವಸೆಯನ್ನು ಈವರೆಗೆ ನೀಡಿಲ್ಲ. ಕಾಂತಾರ ಸಿನಿಮಾದ ಯಶಸ್ಸಿನ ಬಳಿಕ ರಾಜ್ಯದಲ್ಲಿ ದೈವ ನರ್ತಕರಿಗೆ ವರದಾನ ಎಂಬಂತೆ 60 ವರ್ಷ ಮೇಲ್ಪಟ್ಟ ದೈವ ಕಟ್ಟುವವರಿಗೆ 2 ಸಾವಿರ ರೂಪಾಯಿ ಮಾಸಾಶನ ನೀಡುವುದಾಗಿ ಸರ್ಕಾರ ಹೇಳಿತ್ತು. ಇದೀಗ ಹೆಡ್ ಬುಷ್ ಸಿನಿಮಾದಿಂದಾಗಿ ವೀರಗಾಸೆ ಹಾಗೂ ಕಂಸಾಳೆ ಕಲಾವಿದರಿಗೆ ಸರ್ಕಾರದಿಂದ ಈ ಭಾಗ್ಯ ಸಿಗುತ್ತಾ ಅಂತಾ ಕಾದು ನೋಡ್ಬೇಕಿದೆ.
ಇದನ್ನೂ ಓದಿ : India vs Netherland: ಟಿ20 ವಿಶ್ವಕಪ್: ಭಾರತಕ್ಕೆ ನಾಳೆ ನೆದರ್ಲೆಂಡ್ಸ್ ಎದುರಾಳಿ, ಇಲ್ಲಿದೆ ಪಂದ್ಯದ ಪಿನ್ ಟು ಪಿನ್ ಡೀಟೇಲ್ಸ್
head bush controversy trouble for the government