Gandhadagudi Movie : ನಾಳೆ ತೆರೆಗೆ ಪುನೀತ್ ರಾಜ್ ಕುಮಾರ್ “ಗಂಧದ ಗುಡಿ” : ಟಿಕೇಟ್ ಸೋಲ್ಡ್ ಔಟ್

(Gandhadagudi Movie)ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಗಲಿ ಅಕ್ಟೋಬರ್‌ 29ಕ್ಕೆ ಒಂದು ವರ್ಷ ತುಂಬಲಿದೆ. ಆದರೆ ಅಪ್ಪು ಅಭಿಮಾನಿಗಳ ಎದೆಯಲ್ಲಿ ಎಂದಿಗೂ ಚಿರಸ್ಥಾಯಿ. ಇದೀಗ ಡಾ. ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಗಂಧದ ಗುಡಿ ನಾಳೆ ರಿಲೀಸ್ ಆಗಲಿದೆ. ಸಿನಿಮಾ ನೋಡಲು ಕೋಟ್ಯಾಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನಾಳೆಯ ಶೋನ ಬಹುತೇಕ ಟಿಕೇಟ್ ಸೋಲ್ಡ್ ಔಟ್ ಆಗಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

ಕನ್ನಡದ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ “ಗಂಧದಗುಡಿ” ಭಾರತೀಯ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಸಿನಿಮಾದಲ್ಲಿ ನಟರಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ತಮ್ಮ ನೈಜತೆಯ ಜೊತೆಗೆ ಕರ್ನಾಟಕದ ನೈಜ ಚಿತ್ರಣವನ್ನು ಈ ಸಿನಿಮಾದ ಮೂಲಕ ತೋರಿಸಲು ಹೊರಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕನಸು ಕಂಡಿರುವ ದೊಡ್ಮನೆ ಹುಡುಗ ಪುನೀತ್‌ ರಾಜ್‌ಕುಮಾರ್‌ ತಮ್ಮದೇ ಪಿಆರ್‌ಕೆ ಪ್ರೋಡಕ್ಷನ್‌ ಸಂಸ್ಥೆಯನ್ನು ಸ್ಥಾಪಿಸಿ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಸಿದ್ದಾರೆ. ಅಲ್ಲದೇ “ಗಂಧದಗುಡಿ” ಸಿನಿಮಾ ಕೂಡ ಪಿಆರ್‌ಕೆ ಪ್ರೋಡಕ್ಷನ್‌ ಸಂಸ್ಥೆಯಡಿಯಲ್ಲಿ ನಿರ್ಮಾಣವಾಗಿದೆ. ಈ ಸಿನಿಮಾದ ತಯಾರಿಯಲ್ಲೇ ಬಾರದ ಲೋಕಕ್ಕೆ ತೆರಳಿದ ದೊಡ್ಮನೆ ಹುಡುಗ ಅಪ್ಪು ಇಲ್ಲದೇ ಸಿನಿಮಾ ತೆರೆ ಕಾಣಲಿರುವುದು ಅಪಾರ ಅಭಿಮಾನಿಗಳಿಗೆ ನೋವು ತರಿಸಿದೆ.

ಈಗಾಗಲೇ”ಗಂಧದಗುಡಿ” (Gandhadagudi Movie)ಸಿನಿಮಾದ ಫ್ರೀ ರಿಲೀಸ್‌ ಇವೆಂಟ್‌ ಬಹಳ ಅದ್ದೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದೆ. ಈ ಇವೆಂಟ್‌ಗೆ “ಪುನೀತ್‌ ಪರ್ವ” ಎನ್ನುವ ಹೆಸರಿನ ಮೂಲಕ ಕನ್ನಡ ಚಿತ್ರರಂಗದ ಜೊತೆಗೆ ದಕ್ಷಿಣ ಭಾರತೀಯ ಸಿನಿ ದಿಗ್ಗಜರು ಸ್ಮರಿಸಿ ಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಅಪ್ಪು ಸಿನಿಮಾದ ಹಾಡು ಮತ್ತು ನೃತ್ಯಗಳ ಮೂಲಕ ನಮನವನ್ನು ಸಲ್ಲಿಸುವ ಮೂಲಕ “ಗಂಧದಗುಡಿ” ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ.

ಅಪ್ಪು ಅಭಿನಯದ ಬಹು ನಿರೀಕ್ಷಿತ ಸಿನಿಮಾವಾದ “ಗಂಧದಗುಡಿ” ನಾಳೆ ಅಕ್ಟೋಬರ್‌ 28 ರಂದು ದೇಶದಾದ್ಯಂತ ತೆರೆ ಕಾಣಲಿದೆ. ಇಂದು ಗಂಧದಗುಡಿ ಸಿನಿಮಾದ ಪ್ರೀಮಿಯರ್‌ ಶೋ ಸಂಜೆ 7 ಗಂಟೆಗೆ ಆಯೋಜಿಸಲಾಗಿದೆ. ಈ ಸಿನಿಮಾದ ಪ್ರೀಮಿಯರ್‌ ಶೋಗೆ ಸೋಮವಾರದಿಂದಲೇ ಬುಕಿಂಗ್‌ ಆರಂಭವಾಗಿದ್ದು ಸ್ವತಃ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ “ಗಂಧದಗುಡಿಯ ಪ್ರೀಮಿಯರ್‌ ಶೋಗಾಗಿ ಬುಕಿಂಗ್ಸ್‌ ಈಗ ಆರಂಭವಾಗಿದೆ” ಎಂದು ಪೋಸ್ಟ್‌ ಮಾಡಿದ್ದರು. ಅದರಂತೆ ಗಂಧದಗುಡಿ ಸಿನಿಮಾದ ಪ್ರೀಮಿಯರ್‌ನ ಟಿಕೆಟ್‌ಗಳು ಸಂಪೂರ್ಣವಾಗಿ ಬುಕಿಂಗ್‌ ಆಗಿರುತ್ತದೆ. ನಾಳೆ ಗಂಧದಗುಡಿ ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲಿದ್ದು, ಸಿನಿಮಾಕ್ಕಾಗಿ ಬಹಳಷ್ಟು ಕಾತರದಿಂದ ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ : Archana Joyis Photoshoot : ದೀಪಾವಳಿ ಪ್ರಯುಕ್ತ ಹೊಸ ಫೋಟೋಶೂಟ್ – ಬೆಳಕಿನ ನಡುವೆ ಕಂಗೊಳಿಸಿದ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್

ಇದನ್ನೂ ಓದಿ : A hat-trick hero : ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಮಿಂಚಲಿದ್ದಾರೆ ಹ್ಯಾಟ್ರಿಕ್ ಹೀರೋ ; ತೆಲುಗು ನಿರ್ದೇಶಕ ಕಾರ್ತಿಕ್ ಅದ್ವೈತ್ ಚಿತ್ರಕ್ಕೆ ಗ್ರೀನ್ ಸಿಗ್ನಲ್

ಇದನ್ನೂ ಓದಿ : Rajinikanth Reviews ‘Kantara’:‘ಕಾಂತಾರ’ ಭಾರತೀಯ ಸಿನಿರಂಗದ ಮಾಸ್ಟರ್​ ಪೀಸ್​ ಸಿನಿಮಾ : ತಲೈವಾ ರಜನಿಕಾಂತ್​​

“ಗಂಧದಗುಡಿ” ಸಿನಿಮಾದಲ್ಲಿ ಸ್ವತಃ ಪುನೀತ್‌ ರಾಜ್‌ಕುಮಾರ್‌ ಮತ್ತು ಅಮೋಘವರ್ಷ ಕೈಯಲ್ಲಿ ಕ್ಯಾಮರಾ ಹಿಡಿದು ಕರುನಾಡಿನ ವನ್ಯಜೀವಿ, ಪ್ರಕೃತಿ ಸಂಪತ್ತು, ಕಾಡು, ಬೆಟ್ಟ-ಗುಡ್ಡ ಸೇರಿದಂತೆ ಅನೇಕ ಅಧ್ಬುತಗಳನ್ನು ಸೆರೆ ಹಿಡಿದಿರುತ್ತಾರೆ. “ಗಂಧದಗುಡಿ” ಡ್ಯಾಕುಮೆಂಟರಿ ಸಿನಿಮಾವಾಗಿ ತೆರೆ ಕಾಣಲಿದೆ. ಡ್ಯಾಕುಮೆಂಟರಿ ಸಿನಿಮಾವು ಹೆಚ್ಚಾಗಿ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡುವುದಿಲ್ಲ. ಆದರೆ ಗಂಧದಗುಡಿ ಚಿತ್ರಮಂದಿರಗಳಲ್ಲಿ 1 ಗಂಟೆ 37 ನಿಮಿಷಗಳ ಕಾಲ ಸಿನಿಮಾವಾಗಿ ತೆರೆ ಕಾಣಲಿರುವುದು ವಿಶೇಷ.

Puneeth Rajkumar’s “Gandhad Gudi” to hit the screens tomorrow: Tickets sold out

Comments are closed.