ಮುಂದಿನ 24 ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯದಲ್ಲಿ ಮೋಚಾ ಚಂಡಮಾರುತ ಅಲೆಯಿಂದ ಒಂದಷ್ಟು ಭಾಗಗಳಲ್ಲಿ ಸರಾಸರಿ (Heavy rainfall alert in Karnataka) ಮಳೆಯಾಗಿದ್ದರೆ, ಇನ್ನುಳಿದ ಭಾಗಗಳಲ್ಲಿ ತುಂತುರು ಮಳೆ ಆಗಿದೆ. ಹೀಗಾಗಿ ವಾಡಿಕೆಯಂತೆ ಮುಂಗಾರು ಮಳೆಯ ಆಗಮನಕ್ಕಾಗಿ ರೈತರು ಕಾದಿದ್ದು, ಇದೀಗ ಬಂದ ಹವಾಮಾನ ವರದಿ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು, ಕೊಡುಗು, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳು ಹಾಗೂ ಕರಾವಳಿ, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ 24 ಗಂಟೆಗಳ ಹವಾಮಾನ ಬಗ್ಗೆ ತಿಳಿಯುವುದಾದರೆ, ದಕ್ಷಿಣ ಹರಿಯಾಣದಲ್ಲಿ ಸಣ್ಣ ಮಟ್ಟದಲ್ಲಿ ಧೂಳಿನಿಂದ ಅವೃತಗೊಂಡ ಬಿರುಗಾಳಿ ಬೀಸಿದೆ. ಕರಾವಳಿ ಆಂಧ್ರಪ್ರದೇಶ, ಪೂರ್ವ ಮಧ್ಯಪ್ರದೇಶ ಮತ್ತು ಆಗ್ನೇಯ ಉತ್ತರ ಪ್ರದೇಶ ಮತ್ತು ಹರಿಯಾಣದ ಕೆಲವೆಡೆ ತುಂತು ಮಳೆ ಆಗಿದೆ. ಇಂದು ಮತ್ತು ನಾಳೆ ಮೇ 19ರಂದು ಮಳೆಯಾಗುವ ಸಾಧ್ಯತೆ ಇದ್ದು, ತಂಪಾದ ವಾತವಾರಣ ಸಿಗಬಹುದು. ಇನ್ನುಳಿದಂತೆ 20 ಹಾಗೂ 21 ರಂದು ಬಲವಾದ ಬಿಸಿಲು ಇರುತ್ತದೆ. ಮೇ 22ರಂದು ಹಗಲಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಮೇ 23ರಂದು ಕೂಡ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಈ ಭಾರೀ ಜೂನ್‌ 1ರ ಮಾನ್ಸೂನ್‌ ಮಳೆ ಮೇಲೆ ಆಗಮನ :
ವರ್ಷಂಪ್ರತಿ ಮುಂಗಾರು ಮಳೆ ಜೂನ್‌ 1 ರಂದು ಕೇರಳ ಪ್ರವೇಶಿಸುತ್ತದೆ. ಅಲ್ಲಿ ಮಳೆ ಸುರಿದ ಮೂರು ಅಥವಾ ನಾಲ್ಕು ದಿನಗಳಲ್ಲಿ ಕರ್ನಾಟಕದಲ್ಲಿ ಮಳೆಯಾಗುತ್ತದೆ. ಈ ಸಲ ಮಳೆ ವಿಳಂಬದಿಂದ ರೈತರಿಗೆ ತೊಡಕಾಗಬಹುದು. ಇನ್ನೇನು ಮುಂದಿನ ವರ್ಷದ ಭತ್ತದ ಬೆಳೆಗೆ ಬಿತ್ತನೆ ಕೆಲಸ ಶುರು ಮಾಡಲಿದ್ದು, ವರುಣನ ಆಗಮನಕ್ಕಾಗಿ ಮುಗಿಲು ನೋಡುತ್ತಿದ್ದಾರೆ. ಇನ್ನುಳಿದಂತೆ ರೈತರು ಅದಕ್ಕಾಗಿಯೇ ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಸಿಎಂ, ಡಿಕೆ ಡಿಸಿ : ಹೈಕಮಾಂಡ್ ಸಂಧಾನ ಸಕ್ಸಸ್‌

ಇದನ್ನೂ ಓದಿ : ಕಟೀಲು ದೇವಸ್ಥಾನದ ಎದುರು ಹೊತ್ತಿ ಉರಿದ ಬಸ್‌

ಮಾನ್ಸೂನ್‌ ಮಾರುತದ ವಿಳಂಬವಾಗುವ ನಿರೀಕ್ಷೆ ಇರುವುದರಿಂದ ಜೂನ್‌ 4ರಂದು ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ನೈಋತ್ಯ ಮುಂಗಾರು ಸಾಮಾನ್ಯವಾಗಿ ಜೂನ್‌ 1 ರಂದು ಕೇರಳ ಪ್ರವೇಶಿಸುತ್ತದೆ ಮತ್ತು ಸುಮಾರು ಒಂದು ವಾರ ಏರುಪೇರು ಆಗುವ ಸಾಧ್ಯತೆ ಕೂಡ ಇರುತ್ತದೆ. ಅದರಲ್ಲೂ ನಮ್ಮ ದೇಶ ಕೃಷಿ ಆಧರಿತವಾಗಿದ್ದು, ಭಾರತದ ಆರ್ಥಿಕತೆಯು ಮಳೆಯನ್ನು ಅವಲಂಬಿಸಿದೆ. ದೇಶದ ಒಟ್ಟಾರೆ ವಾರ್ಷಿಕ ಮಳೆ ಪ್ರಮಾಣದಲ್ಲಿ ಶೇ.75ರಷ್ಟು ಮುಂಗಾರು ಮಳೆ ಒಳಗೊಂಡಿದೆ. ಹೀಗಾಗಿ ಈ ಮಳೆಯೇ ಸಕಾಲದಲ್ಲಿ ಬರದೇ ಇದ್ದಲ್ಲಿ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾದ್ಯತೆ ಇದೆ ಎಂದು ಮೂಲಗಳು ವರದಿ ಮಾಡಿದೆ.

Heavy rainfall alert in Karnataka : Heavy rainfall is likely in these districts in the next 24 hours

Comments are closed.