ಭಾನುವಾರ, ಏಪ್ರಿಲ್ 27, 2025
Homekarnatakaಮೋಚಾ ಚಂಡಮಾರುತ ಅಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಕೂಡ ಭಾರೀ ಮಳೆ ಸಾಧ್ಯತೆ

ಮೋಚಾ ಚಂಡಮಾರುತ ಅಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಕೂಡ ಭಾರೀ ಮಳೆ ಸಾಧ್ಯತೆ

- Advertisement -

ಬೆಂಗಳೂರು : ಮೋಚಾ ಚಂಡಮಾರುತದ ಅಲೆಯಿಂದಾಗಿ ಕರಾವಳಿಯಲ್ಲಿ (Heavy Rainfall in Coastal) ಬೆಳ್ಳಂಬೆಳಗ್ಗೆ ಮಳೆ ಬಂದಿದೆ. ಮಳೆರಾಯನ ಆಗಮನದಿಂದ ತಂಪು ಗಾಳಿ ಬೀಸುತ್ತಿದ್ದು, ಮೋಡ ಕವಿದ ವಾತಾವರಣವಿದ್ದು, ಸಂಜೆಯು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಇನ್ನೂ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಸದ್ಯದಲ್ಲೇ ಮುಂಗಾರು ಮಳೆ ಶುರುವಾಗಲಿದ್ದು, ರಾಜ್ಯದಲ್ಲಿ ರೈತರು ತಮ್ಮ ವ್ಯವಸಾಯದ ಪೂರ್ವಭಾವಿ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ವರುಣನ ಆಗಮನದಿಂದ ಸಂತಸಗೊಂಡಿದ್ದು, ಗುಡುಗು ಮಿಂಚಿನಿಂದ ಆತಂಕಕ್ಕೆ ಒಳಗಾಗಿದ್ದಾರೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಮತ್ತು ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ಇಂದಿನಿಂದ 2 ದಿನಗಳ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ. ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳಬಾಡಿನ ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ರಾಣೆಬೆನ್ನೂರು, ಹಳಿಯಾಳ, ಆಳಂದ, ಬಾಳೆಹೊನ್ನೂರು, ಶಿವನಿ, ಎನ್‌ಆರ್‌ಪುರ, ಚನ್ನರಾಯಪಟ್ಟಣ, ಹುಂಚದಕಟ್ಟೆ, ಟಿ ನರಸೀಪುರ, ಮಂಠಾಳ, ಶಿಗ್ಗಾಂವ್, ರಬಕವಿ, ಭಾಲ್ಕಿ, ಅಣ್ಣಿಗೆರೆ, ಚಿಕ್ಕಮಗಳೂರು, ಕೊಳ್ಳೇಗಾಲ, ಭಾಗಮಂಡಲ, ಲಕ್ಷ್ಮೇಶ್ವರ, ಗದಗ, ಕಳಸ, ಅಜ್ಜಂಪುರ, ಆನವಟ್ಟಿ, ಪೊನ್ನಂಪೇಟೆ, ಬೆಳ್ಳೂರು, ತಿಪಟೂರು, ಬಂಡೀಪುರ, ಶಿವಮೊಗ್ಗ, ಚಾಮರಾಜನಗರ, ಬಸವಾಸಿ, ಜೇವರ್ಗಿ, ಖಜೂರಿ, ಧಾರವಾಡ, ಹಾನಗಲ್‌, ಕುಂದಗೋಳ, ಸೈದಾಪುರ, ಬಸವನ ಬಾಗೇವಾಡಿ, ಕಲಬುರಗಿ, ಸಂಕೇಶ್ವರ, ಶ್ರವಣಬೆಳಗೊಳ, ದಾವಣಗೆರೆ, ಸೋಮವಾರಪೇಟೆ, ಹೆಸರಘಟ್ಟ, ರಾಮನಗರಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ವರದಿ ತಿಳಿಸಿದೆ.

ಇದನ್ನೂ ಓದಿ : ಕರ್ನಾಟಕ ವಿಧಾನಸಭೆ ಚುನಾವಣೆ : ಹೇಗೆ ನಡೆಯುತ್ತೆ ಮತ ಎಣಿಕೆ ?

ಇದನ್ನೂ ಓದಿ : ಕರ್ನಾಟಕ ಚುನಾವಣಾ ಫಲಿತಾಂಶ 2023 : ಜೆಡಿಎಸ್ ನಾಯಕರಿಗೆ ಡಿಕೆ ಶಿವಕುಮಾರ್ ಬಹಿರಂಗ ಆಹ್ವಾನ

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಸಾಧಾರಣ ಮಳೆಯಾಗಲಿದೆ. ಶನಿವಾರದಿಂದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ. ರಾಮನಗರ, ಕೋಲಾರ, ಯಾದಗಿರಿ, ತುಮಕೂರಿನ ಹಲವಡೆಯೂ ಮಳೆ ಆಗಿದೆ. ಬೀದರ್‌, ರಾಯಚೂರು, ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರಿನ ಅಲ್ಲಲ್ಲಿ ಮಳೆ ಆಗುವ ಸಂಭವ ಇರುತ್ತದೆ.

Heavy Rainfall in Coastal : Mocha storm wave is likely to rain heavily in various districts of the state today

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular