Heavy Rainfall in Karnataka : ರಾಜ್ಯದಲ್ಲಿ ಎರಡು ದಿನ ಭಾರೀ ಮಳೆ ಸಾಧ್ಯತೆ : ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು : ಏಪ್ರಿಲ್‌ ಹಾಗೂ ಮೇ ತಿಂಗಳ ಸೂರ್ಯನ ತಾಪಮಾನ ಏರಿಕೆಗೆ ಜನರು ದಿನದಿಂದ ದಿನಕ್ಕೆ ತತ್ತರಿಸಿ ಹೋಗುತ್ತಿದ್ದಾರೆ. ಹೀಗಾಗಿ ವರುಣನ ಆಗಮನಕ್ಕೆ ಕಾದಿದ್ದಾರೆ. ಅಷ್ಟೇ ಅಲ್ಲದೇ ಕರಾವಳಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಭತ್ತ ಬಿತ್ತನೆ ಕೆಲಸ ಶುರುವಾಗುವುದ್ದರಿಂದ ಮಳೆರಾಯನಿಗಾಗಿ (Heavy Rainfall in Karnataka) ಕಾಯುತ್ತಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಎರಡು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಚಿಕ್ಕಮಗಳೂರು, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ಚಾಮರಾಜನಗರ, ಕೊಡುಗು, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮೇ 3ರ ವರೆಗೆ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ : Karnataka Election : ಮೊದಲ ಬಾರಿಗೆ ಮತದಾರರಿಗಾಗಿ ಸಾರ್ವತ್ರಿಕ ಚುನಾವಣಾ ಪೋರ್ಟಲ್ ಆರಂಭ

ಇದನ್ನೂ ಓದಿ : ಮತದಾರರ ಗಮನಕ್ಕೆ : ವೋಟರ್ ಐಡಿ ಇಲ್ಲದಿದ್ರೆ ಚಿಂತೆ ಬೇಡಾ ಈ ದಾಖಲೆಗಳಿದ್ರೆ ಮತದಾನ ಮಾಡಬಹುದು

ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನ ಕೆಲವು ಕಡೆ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ ಗಣನೀಯವಾಗಿ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಸಮಯದಲ್ಲಿ ಒಂದೆರಡು ಭಾರೀ ಮಳೆ ಬಂದರೆ ಕರಾವಳಿಯ ಬೇಸಾಯಗಾರರಿಗೆ ಮುಂದಿನ ಬೆಳೆ ತುಂಬಾ ಸಹಾಯವಾಗುತ್ತದೆ.

ಇದನ್ನೂ ಓದಿ : Ramya Campaign : ಪ್ರಿಯಾಂಕಾ ಗಾಂಧಿ ಜೊತೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕ್ಯಾಂಪೇನ್ : ಮಂಡ್ಯ ರಣಕಣದಲ್ಲಿ ಸ್ಟಾರ್ ಹವಾ

ಇದನ್ನೂ ಓದಿ : ಬಿಪಿಎಲ್‌ ಕಾರ್ಡುದಾರರಿಗೆ ಅರ್ಧ ಲೀಟರ್‌ ಹಾಲು, ವರ್ಷಕ್ಕೆ 3 ಗ್ಯಾಸ್‌ ಸಿಲಿಂಡರ್‌ ಉಚಿತ: ಬಿಜೆಪಿ ಪ್ರನಾಳಿಕೆಯಲ್ಲಿ ಏನೇನಿದೆ ?

Heavy Rainfall in Karnataka: Two days of heavy rain in the state: Yellow alert announced for some districts

Comments are closed.