ರಾಜ್ಯ ಹಿಬಾಜ್ ಸಂಘರ್ಷ: ಕೇಂದ್ರಕ್ಕೆ ವರದಿ ಸಲ್ಲಿಸಿದ ಗೃಹ ಇಲಾಖೆ

ಬೆಂಗಳೂರು : ರಾಜ್ಯದಲ್ಲಿ ಹಿಜಾಬ್ ಕಿಚ್ಚು ಜೋರಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸಲಾರಂಭಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿದ್ದು, ಈ ಬಗ್ಗೆ ವಿಸ್ಕೃತ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದೆ. ಮಾತ್ರವಲ್ಲ ಕೇಂದ್ರ ಗೃಹ ಇಲಾಖೆಯಿಂದ ತನಿಖೆ (Hijab Raw issues) ನಡೆಸಲು ರಾಜ್ಯ ಗೃಹ ಇಲಾಖೆ ಮನವಿ ಮಾಡಿದೆ.

.ಈ ಕುರಿತು ಬೆಂಗಳೂರಿನಲ್ಲಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣದ ಕುರಿತು ವಿವರಣೆ ನೀಡಿದ ಆರಗ ಜ್ಞಾನೇಂದ್ರ್, ಈ ಪ್ರಕರಣದ ಹಿಂದಿನ ಶಕ್ತಿ ಸಿಎಫ್ ಆಯ್. ಸಿಎಫ್ಐ ಪದಾಧಿಕಾರಿಗಳೇ ಹಿಜಾಬ್ ನ ಹಿಂದಕ್ಕೆ ಇದ್ದೇವೆ, ಮುಂದೆಯೂ ಇದ್ದೇವೆ ಅಂತಾ ನೇರವಾಗಿ ಹೇಳಿದ್ದಾರೆ. ಇದರಿಂದ ಹಿಜಾಬ್ ಹಿಂದೇ
ಮತಾಂದ ಶಕ್ತಿ ಗಳೇ ಇದರ ಹಿಂದೆ ಇದ್ದಾವ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ. ಈ ಹಿಬಾಜ್ ನ್ನು ಕಾರಣವಾಗಿಟ್ಟುಕೊಂಡು ಊರು ಊರಲ್ಲಿ ಬೆಂಕಿ ಹಚ್ಚುವ ಕೆಲಸ ಆಗಿದೆ. ದೇಶದ ಏಕತೆಗೆ ಬೆಂಕಿ ಹಚ್ಚಿರೋರು ಇದೇ ಸಂಘಟನೆಗಳು. ಹಿಜಾಬ್ ಸಂಘರ್ಷಕ್ಕೆ SFI, PFI ಕಾರಣ ಎಂದು ನಾನು ನೇರವಾಗಿ ಹೇಳುತ್ತೇನೆ ಎಂದಿದ್ದಾರೆ.

ಈ ಸಂಘಟನೆಗಳಿಂದ ನಮ್ಮ ಮಕ್ಕಳ ಮನಸ್ಥಿತಿ ಹಾಳಾಗಿದೆ. ಹಿಜಾಬ್ ಧರಿಸಿ ಶಾಲೆಗೆ ಬರ್ತೀನಿ ಅಂತಾ ಹೇಳೋರು, ನಾಳೆ ಸಿಲಬಸ್ಸೇ ಚೈಂಜ್ ಮಾಡಿ ಅಂತಾ ಹೇಳಬಹುದು. ಇದೆಲ್ಲವೂ ಇವರು ಮೂಲಭೂತ ವಾದಿಗಳ ವಾದ. ನಿನ್ನೆ ನಾನು ಮಾಧ್ಯಮದಲ್ಲಿ ಗಮನಿಸಿದೆ. ಒಬ್ಬ ಹೆಣ್ಣು ಮಗಳು ಕೋರ್ಟ್ ಆದೇಶ ನಮಗೆ ಅವಶ್ಯಕತೆ ಇಲ್ಲ ಎಂದಳು.ಆ ಹೆಣ್ಣು ಮಗಳ ಮಾತು ಕೇಳಿ ನನಗೆ ಮನಸ್ಸಿಗೆ ನೋವು ಆಯ್ತು ಇವರ ಹಿಂದೆ ಇರುವ ಮತಾಂದ ಶಕ್ತಿ ಗಳನ್ನು ಧಮನ ಮಾಡಬೇಕು.ಇದಕ್ಕೆ ಬೇಕಾದ ಎಲ್ಲಾ ಮಾಹಿತಿ ಗಳನ್ನು ಪೊಲೀಸರು ಕಲೆ ಹಾಕ್ತಿದ್ದಾರೆ ಎಂದು ವಿವರಣೆ ನೀಡಿದ್ದಾರೆ.

ಮಾತ್ರವಲ್ಲ ರಾಜ್ಯದ ಹಿಜಾಬ್ ಪ್ರಕರಣ, ಅದರ ಹಿಂದಿನ ಶಕ್ತಿಗಳು ಸೇರಿದಂತೆ ಸಂಪೂರ್ಣ ಚಿತ್ರಣವನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಅಗತ್ಯ ಬಿದ್ದರೇ ಕೇಂದ್ರ ಗೃಹ ಇಲಾಖೆ ಯಿಂದಲೂ ತನಿಖೆ ನಡೆಸಲು ಮನವಿ ಮಾಡುತ್ತೇವೆ. ಇದರ ಬಗ್ಗೆ ಬಹಳಷ್ಟು ತನಿಖೆ ಕೂಡ ನಡೀತ್ತಿದೆ. ಈ ರೀತಿ ಎಲ್ಲಾ ನಡಿಯುತ್ತಿರುವಾಗ ಸರ್ಕಾರವಾಗಿ ಸುಮ್ಮನೇ ಕುಳಿತು ಕೊಳ್ಳಲು ಆಗುವುದಿಲ್ಲ. ಇವ್ರು ಶಾಂತಿ ಬಯಸಲ್ಲ, ರಕ್ತಪಾತ ವನ್ನು ಬಯಸುತ್ತಿದ್ದಾರೆ ಎಂದು ಗೃಹ ಸಚಿವರು ಕಿಡಿಕಾರಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಹೆಚ್ಚುತ್ತಿದೆ ಟೀನೇಜ್ ಲವ್ ಸ್ಟೋರಿ : ಪೋಷಕರೇ ನಿಮ್ಮ ಮಕ್ಕಳ ಮೇಲೆ ಕಣ್ಣಿಡಿ ಎಂದ ಮಹಿಳಾ ಆಯೋಗ

ಇದನ್ನೂ ಓದಿ : RBI Recruitment 2022: ರಿಸರ್ವ್ ಬ್ಯಾಂಕ್‌ನಲ್ಲಿ 950 ಹುದ್ದೆಗಳು ಖಾಲಿ; 36,091 ರೂ.ವರೆಗೂ ಸಂಬಳ, ಇನ್ನಷ್ಟು ವಿವರ ಓದಿ

(Hijab Raw issues Karnataka State Government Report to Central Home Department)

Comments are closed.