ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ. ಅದನ್ನು ತಡೆಯುವುದು ಧಾರ್ಮಿಕ ಸ್ವಾತಂತ್ರ್ಯದ ಸಾಂವಿಧಾನಿಕ ಖಾತರಿಪಡಿಸುವುದನ್ನು ಉಲ್ಲಂಘಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಶುಕ್ರವಾರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು. ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ವಿಚಾರಣೆಯನ್ನು ಸೋಮವಾರ, ಫೆಬ್ರವರಿ 21ಕ್ಕೆ ಮುಂದೂಡಿದರು.
ವಕೀಲ ಮೊಹಮ್ಮದ್ ತಾಹೀರ್ ವಿಚಾರಣೆಯ ಪ್ರಮುಖ ಹಂತದಲ್ಲಿ ಹೈಕೋರ್ಟ ತೀರ್ಪಿನ್ನೇ ಮುಂದಿಟ್ಟುಕೊಂಡು ಉರ್ದು ಶಾಲೆಗಳಲ್ಲಿ ಸಹ ಹಿಜಾಬ್ ಧರಿಸಿ ಬರಲು ಅನುವು ಮಾಡಿಕೊಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಈ ಕ್ರಮಕ್ಕೆ ನಿರ್ಬಂಧ ವಿಧಿಸಬೇಕು ಎಂದು ಮನವಿ ಮಾಡಿದರು. ಕಾಲೇಜು ಗೇಟಿನೊಳಗೇ ಹಿಜಾಬ್ ಬಿಡುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದಕ್ಕೆ ಪ್ರತಿಕ್ರಿಯಿಸಿದ ಎಜಿ ಪ್ರಭುಲಿಂಗ ನಾವದಗಿ, ಯಾವ ಶಿಕ್ಷಣ ಸಂಸ್ಥೆಗಳಲ್ಲಿ ಹೀಗೆ ನಡೆದಿದೆ ಎಂಬ ಕುರಿತು ಲಿಖಿತ ರೂಪದಲ್ಲಿ ನೀಡಿದರೆ ಪೊಲೀಸರಿಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವುದಾಗಿ ತಿಳಿಸಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸಹ ಲಿಖಿತ ರೂಪದಲ್ಲಿ ದಾಖಲೆ-ಮಾಹಿತಿ ನೀಡುವಂತೆ ಸೂಚಿಸಿದರು.
ಎಜಿ ಪ್ರಭುಲಿಂಗ ನಾದಗಿ ಅರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದು ಹೀಗೆ; ಸಂವಿಧಾನದಲ್ಲಿ ಒದಗಿಸಲಾದ 25(1) ಪರಿಪೂರ್ಣವಾದ ಹಕ್ಕಲ್ಲ. ಈ ಹಕ್ಕನ್ನು ನಿರ್ಬಂಧಿಸಬಹುದಾದ ಅಧಿಕಾರ ಸರ್ಕಾರಕ್ಕಿದ್ದು ಸಾರ್ವಜನಿಕ ಆರೋಗ್ಯದ ಕಾರಣದಿಂದ ಕೊರೊನಾ ಹೆಚ್ಚಾದಾಗ ದೇವಸ್ಥಾನ, ಚರ್ಚ್, ಮಸೀದಿಗಳಂತಹ ಧಾರ್ಮಿಕ ಸ್ಥಳಗಳನ್ನು ಸರ್ಕಾರ ಮುಚ್ಚಲು ಸೂಚಿಸಿತ್ತು ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ: Hijab Meaning: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?
(Hijab Row Karnataka High Court Updates Hijab is not essential practice says AGR hearing adjourns on Monday)