ಗೋ ಹತ್ಯೆ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಶಿವಮೊಗ್ಗದಲ್ಲಿ ಚಿಕ್ಕಮಗಳೂರು ಪೊಲೀಸರ ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ. ಗೋ ಕಳ್ಳರ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಸಹ ಪೊಲೀಸರು ಎಂಜಲು ಕಾಸಿನ ಆಸೆಗೆ ಸುಮ್ಮನೇ ಕುಳಿತಿದ್ದಾರೆ ಎಂದು ಅವರು ಆಕ್ರೋಶ ಹೊರ ಹಾಕಿದ್ರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ತಮ್ಮ ನಿವಾಸದ ಕಚೇರಿಯಲ್ಲಿಯೇ ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಅಧಿಕಾರಿಗೆ ಕರೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲೇ ಕರೆ ಮಾಡಿದ್ದ ಆರಗ ಜ್ಞಾನೇಂದ್ರ ಯೋಗ್ಯತೆ ಇಲ್ಲದ ಮೇಲೆ ಪೊಲೀಸ್ ಇಲಾಖೆಯಲ್ಲಿ ಇರಬೇಡಿ ಎಂದು ಆವಾಜ್ ಹಾಕಿದ್ರು.
ಪೊಲೀಸ್ ಇಲಾಖೆಯಲ್ಲಿ ಇರಲು ಯೋಗ್ಯತೆ ಇಲ್ಲ ಅಂದಮೇಲೆ ಸಮವಸ್ತ್ರ ಕಳಚಿಟ್ಟು ಸಾಯಲಿ. ಇಲ್ಲವೇ ಮನೆ ಕಡೆಗೆ ಹೋಗಲಿ. ಸರ್ಕಾರದಿಂದ ಪೊಲೀಸರಿಗೆ ಕೈ ತುಂಬಾ ಸಂಬಳ ನೀಡುತ್ತಿದ್ದೇವೆ. ಆದರೂ ಪೊಲೀಸರು ಎಂಜಲು ಕಾಸಿಗೆ ಕೈಯೊಡ್ಡುತ್ತಿದ್ದಾರೆ. ನಿಮಗ್ಯಾರಿಗೂ ಆತ್ಮಗೌರವ ಅನ್ನೋದೇ ಇಲ್ಲವೇ..? ಎಂದು ಪ್ರಶ್ನೆ ಮಾಡಿದ್ರು.
ಪ್ರತಿನಿತ್ಯ ಅಕ್ರಮ ಗೋವು ಸಾಗಾಟ ನಡೆಯುತ್ತಿದೆ. ಈ ರೀತಿ ಮಾಡುತ್ತಿರುವವರು ಯಾರೆಂದೂ ಪೊಲೀಸರಿಗೆ ತಿಳಿದಿದೆ. ಆದರೆ ಲಂಚವನ್ನು ತಿಂದು ನಾಯಿಯಂತೆ ಬಿದ್ದಿದ್ದಾರೆ. ಎಲ್ಲಾ ಪೊಲೀಸರು ಕೆಟ್ಟು ಹಾಳಾಗಿ ಹೋಗಿದ್ದಾರೆ ಗೃಹ ಸಚಿವನ ಸ್ಥಾನದಲ್ಲಿ ನಾನು ಇರಬೇಕೋ ಬೇಡವೋ ಎಂದು ಕೇಳಿದ್ರು.
Home Minister Aaruga Jnanendra agitated against the police
ಇದನ್ನು ಓದಿ : Omicron emergency meeting : ಓಮಿಕ್ರಾನ್ ಪತ್ತೆ ಹಿನ್ನೆಲೆ : ತುರ್ತು ಸಭೆ ಕರೆದ ಸಿಎಂ ಬಸವರಾಜ್ ಬೊಮ್ಮಾಯಿ