Leopard :ಆಹಾರ ಅರಸುತ್ತಾ ಕಾಡಿನಿಂದ ನಾಡಿಗೆ ಬಂದ ಚಿರತೆ..!ಮನೆಯಂಗಳದಲ್ಲೇ ನಿಂತಿದ್ದ ಚಿರತೆ ಕಂಡು ಗ್ರಾಮಸ್ಥರು ಶಾಕ್​​

ಮಂಗಳೂರು :ಮನೆಯ ಅಂಗಳದಲ್ಲಿ ರಾತ್ರೋ ರಾತ್ರಿ ಚಿರತೆಯೊಂದು(Leopard ) ಪ್ರತ್ಯಕ್ಷವಾದ ಶಾಕಿಂಗ್​ ಘಟನೆಯು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಮನೆಯೊಂದರಲ್ಲಿ ನಡೆದಿದೆ. ನರಿಕೊಂಬು ಗ್ರಾಮದ ನಿರ್ಮಲ್​ ಎಂಬಲ್ಲಿ ರಾತ್ರಿ ಸಮಯದಲ್ಲಿ ಚಿರತೆಯೊಂದು ಅಂಗಳದಲ್ಲಿ ಕಾಣಿಸಿಕೊಳ್ಳುವ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.


ಸಿಸಿ ಕ್ಯಾಮರಾ ದೃಶ್ಯಾವಳಿಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಗ್ರಾಮಸ್ಥರು ಮಾತ್ರವಲ್ಲದೇ ಅಕ್ಕಪಕ್ಕದ ಗ್ರಾಮದ ನಿವಾಸಿಗಳೂ ಸಹ ಕಳವಳ ಹೊರಹಾಕಿದ್ದಾರೆ. ನಿರ್ಮಲ್​ ಗ್ರಾಮದ ನಿವಾಸಿ ಜಯಂತ್​ ನಿರ್ಮಲ್​ ಎಂಬವರಿಗೆ ಸೇರಿದ್ದ ಮನೆಗೆ ಆಹಾರ ಅರಸುತ್ತಾ ಈ ಚಿರತೆ ಕಾಡಿನಿಂದ ಬಂದಿತ್ತು ಎನ್ನಲಾಗಿದೆ.


ಆದರೆ ಮನೆಯಲ್ಲಿ ಶಬ್ದ ಕೇಳುತ್ತಿದ್ದಂತೆಯೇ ಹೆದರಿದ ಚಿರತೆ ಸ್ಥಳದಿಂದ ಪರಾರಿಯಾಗಿದೆ. ಜಯಂತ್​ ಮನೆಯವರು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ ವೇಳೆಯಲ್ಲಿ ಈ ದೃಶ್ಯ ಗೋಚರವಾಗಿದೆ. ಅದೃಷ್ಟವಶಾತ್​ ಈ ಘಟನೆಯಿಂದ ಯಾವುದೇ ಸಾವು – ನೋವುಗಳು ಸಂಭವಿಸಿಲ್ಲ. ಸಿಸಿ ಟಿವಿ ದೃಶ್ಯಾವಳಿಯ ವಿಡಿಯೋವನ್ನು ಗ್ರಾಮ ಪಂಚಾಯ್ತಿಗೆ ಸಲ್ಲಿಸುವ ಜಯಂತ್​ ಕುಟುಂಬಸ್ಥರು ಚಿರತೆ ಬಂದಿದ್ದ ಬಗ್ಗೆ ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯಿಂದ ಇನ್ನಷ್ಟೇ ಹೇಳಿಕೆ ಬರಬೇಕಿದೆ.

Leopard rushing from forest to village

ಇದನ್ನು ಓದಿ :omicron alert : ಉಡುಪಿಯಲ್ಲಿ ಓಮಿಕ್ರಾನ್ ಕಟ್ಟೆಚ್ಚರ : ಕೊರೊನಾ ಟೆಸ್ಟ್‌ ಹೆಚ್ಚಳಕ್ಕೆ ಡಿಸಿ ಕೂರ್ಮರಾವ್‌ ಸೂಚನೆ

Comments are closed.