ದಾವಣಗೆರೆ : Chandrashekhar Death Big twist: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ (honnali bjp mla mp renukacharya) ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಸುತ್ತ ಇದೀಗ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ತುಂಗಾ ಕಾಲುವೆಯಲ್ಲಿ ಬಿಳಿಯ ಬಣ್ಣದ ಕ್ರೇಟಾ ಕಾರಿನ ಹಿಂಬದಿಯ ಸೀಟ್ ನಲ್ಲಿ ಚಂದ್ರಶೇಖರ್ ಮೃತ ದೇಹ ಪತ್ತೆಯಾಗಿತ್ತು. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನೊಂದೆಡೆಯಲ್ಲಿ ಸ್ಥಳಕ್ಕೆ ದಾವಣಗೆರೆ ಎಸ್ ಪಿ ರಿಷ್ಯಂತ್ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ಭಾನುವಾರ ಗೌರಿಗದ್ದೆಗೆ ತನ್ನ ಸ್ನೇಹಿತನ ಜೊತೆಗೆ ತೆರಳಿದ್ದ ಚಂದ್ರಶೇಖರ್ ನಂತರದಲ್ಲಿ ನಾಪತ್ತೆಯಾಗಿದ್ದರು. ಎರಡು ದಿನಗಳಾದ್ರೂ ಮನೆ ಬಾರದ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಶಾಸಕ ರೇಣುಕಾಚಾರ್ಯ ಅವರ ಸೂಚನೆಯ ಮೇರೆಗೆ ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯವನ್ನು ಆರಂಭಿಸಿದ್ದರು. ಆದರೆ ಅಂತಿಮವಾಗಿ ಚಂದ್ರ ಅವರ ಕಾರಿನ ಅವಶೇಷಗಳು ಇಂದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾಲುವೆಯಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಕಾರ್ಯಾಚರಣೆಯನ್ನು ನಡೆಸಿ ಕಾರನ್ನು ಪತ್ತೆ ಮಾಡಿದ್ದಾರೆ.
ಕಾರಿನ ಹಿಂಬದಿಯಲ್ಲಿ ಚಂದ್ರಶೇಖರ್ ಅವರ ಶವ ಪತ್ತೆಯಾಗಿದೆ. ಇದು ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಸುರಹೊನ್ನೆಯಿಂದ ಹೊನ್ನಾಳಿಗೆ ಚಂದ್ರಶೇಖರ್ ಕಾರಿನಲ್ಲಿ ಸಂಚರಿಸಿರುವುದು ಲೊಕೇಷನ್ ಪತ್ತೆಯಾಗಿತ್ತು. ಆದರೆ ಶಿವಮೊಗ್ಗದಲ್ಲಿ ಚಂದ್ರಶೇಖರ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಇಬ್ಬರು ಇರುವುದು ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಕಂಡು ಬಂದಿದೆ. ಕಾರಿನಲ್ಲಿ ಚಂದ್ರಶೇಖರ್ ಒಬ್ಬರೇ ಪ್ರಯಾಣಿಸಿದ್ದರೆ, ಕಾರಿನ ಹಿಂಬದಿಯಲ್ಲಿ ಚಂದ್ರಶೇಖರ್ ಅವರ ಶವ ಪತ್ತೆಯಾಗಲು ಸಾಧ್ಯವೇ ಇಲ್ಲಾ. ಒಂದೊಮ್ಮೆ ಕಾರನ್ನು ಬೇರೆ ಯಾರಾದ್ರೂ ಡ್ರೈವಿಂಗ್ ಮಾಡುತ್ತಿದ್ದು, ಚಂದ್ರಶೇಖರ್ ಹಿಂಬದಿ ಸೀಟಿನಲ್ಲಿ ಕುಳಿತಿರುವ ಸಾಧ್ಯತೆಯಿದೆ.
ಹಾಗಾದ್ರೆ ಚಂದ್ರಶೇಖರ್ ಜೊತೆಗೆ ಕಾರಿನಲ್ಲಿ ಪ್ರಯಾಣಿಸಿದ ಆ ವ್ಯಕ್ತಿ ಯಾರು ? ಎಂಬ ಬಗ್ಗೆ ಮಾಹಿತಿಯನ್ನು ಪೊಲೀಸ್ ಇಲಾಖೆ ಕಲೆ ಹಾಕುತ್ತಿದೆ. ಇನ್ನೊಂದೆಡೆಯಲ್ಲಿ ಚಂದ್ರಶೇಖರ್ ಅವರ ಜೊತೆಗೆ ಗೌರಿಗದ್ದೆಗೆ ತೆರಳಿದ್ದ ಸ್ನೇಹಿತನನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದಾರೆ. ಡ್ರೈವಿಂಗ್ ಮಾಡುತ್ತಿರುವ ವೇಳೆಯಲ್ಲಿ ಚಂದ್ರಶೇಖರ್ ಸೀಟ್ ಬೆಲ್ಟ್ ಧರಿಸುತ್ತಿದ್ದರು. ಆದ್ರೆ ಚಂದ್ರಶೇಖರ್ ಕಾರಿನ ಮುಂಭಾಗದ ಗ್ಲಾಸ್ ಒಡೆದು ಹೋಗಿದ್ದು, ಹಿಂಬದಿ ಸೀಟ್ ನಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದೆ. ಹೀಗಾಗಿ ಚಂದ್ರಶೇಖರ್ ಅವರನ್ನು ಕೊಲೆ ಮಾಡಲಾಗಿದೆಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : Breaking News : ಶಾಸಕ ರೇಣುಕಾಚಾರ್ಯ ಸಹೋದರನ ಮಗನ ಶವ ಪತ್ತೆ : ಭದ್ರಾ ಕಾಲುವೆಯಲ್ಲಿ ಪತ್ತೆಯಾಯ್ತು ಕಾರು
ಇದನ್ನೂ ಓದಿ : China Lock down enforced : ಚೀನಾದಲ್ಲಿ ಸದ್ದಿಲ್ಲದೇ ಲಾಕ್ ಡೌನ್ ಜಾರಿ : ಮತ್ತೆ ಶುರುವಾಯ್ತು ಆತಂಕ
honnali bjp mla mp renukacharya brother son Chandrashekhar Death Big twist