Imran Khan: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ; ಇಮ್ರಾನ್ ಕಾಲಿಗೆ ಗಾಯ

ಪಾಕಿಸ್ತಾನ: Imran Khan: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದಿದೆ. ವಜೀರಾಬಾದ್ ನಲ್ಲಿ ಅವರು ಇಂದು ನೈಜ ಸ್ವಾತಂತ್ರ್ಯ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಅವರ ಕಾಲಿಗೆ ಗುಂಡು ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Breaking News : ಶಾಸಕ ರೇಣುಕಾಚಾರ್ಯ ಸಹೋದರನ ಮಗನ ಶವ ಪತ್ತೆ : ಭದ್ರಾ ಕಾಲುವೆಯಲ್ಲಿ ಪತ್ತೆಯಾಯ್ತು ಕಾರು

ವಜೀರಾಬಾದ್ ನ ಜಫರಾಲಿಖಾನ್ ಚೌಕಿ ಬಳಿ ರ್ಯಾಲಿ ಮೂಲಕ ತೆರಳುತ್ತಿದ್ದಾಗ ಇಮ್ರಾನ್ ಖಾನ್ ಮೇಲೆ ಅಪರಿಚಿತನೊಬ್ಬ ಏಕಾಏಕಿ ಗುಂಡು ಹಾರಿಸಿದ್ದಾನೆ. ಗುಂಡು ನೇರವಾಗಿ ಅವರ ಕಾಲಿಗೆ ತಗುಲಿದ್ದು, ಫೈರಿಂಗ್ ನಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಇಮ್ರಾನ್ ಖಾನ್ ಅವರನ್ನು ತಕ್ಷಣವೇ ಕಂಟೈನರ್ ನಿಂದ ಬುಲೆಟ್ ಪ್ರೂಫ್ ವಾಹನಕ್ಕೆ ವರ್ಗಾಯಿಸಲಾಗಿದೆ. ಅಲ್ಲಿಂದ ಲಾಹೋರ್ ನ ಶೌಕತ್ ಖಾನಮ್ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರ್ಯಾಲಿ ವೇಳೆ ಇಮ್ರಾನ್ ಖಾನ್ ತೆರೆದ ವಾಹನದಲ್ಲಿ ಸಂಚರಿಸುತ್ತಿದ್ದರು. ಇನ್ನು ಈ ದುರ್ಘಟನೆಯಲ್ಲಿ ಪಿಟಿಐ ಮುಖಂಡ ಫೈಸಲ್ ಜಾವೇದ್ ಕೂಡಾ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Chandrashekhar Death Big twist : ಚಂದ್ರಶೇಖರ ಸಾವಿನ ಸುತ್ತ ಹಲವು ಅನುಮಾನ : ಸ್ಥಳಕ್ಕೆ ಎಸ್ಪಿ, ವಿಧಿವಿಜ್ಞಾನ ತಂಡ ಭೇಟಿ

ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ಇಸ್ಲಾಮಾಬಾದ್ ಗೆ ಸುದೀರ್ಘ ಮೆರವಣಿಗೆ ನಡೆಸುತ್ತಿರುವ ಕ್ರಿಕೆಟಿಗ ಇಮ್ರಾನ್ ಖಾನ್, ಜನರನ್ನುದ್ದೇಶಿಸಿ ಮಾತನಾಡಲು ಕಂಟೈನರ್ ಟ್ರಕ್ ಮೇಲೆ ನಿಂತಿದ್ದ ವೇಳೆ ಅಪರಿಚಿತ ವ್ಯಕ್ತಿ ಗುಂಡು ಹಾರಿಸಿದ್ದಾನೆ. ಆತ ಒಬ್ಬನೇ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಭಾಷಣಕ್ಕಾಗಿ ಇಮ್ರಾನ್ ಖಾನ್ ಅವರು ಕಂಟೈನರ್ ಮೇಲೆ ಹತ್ತಿನಿಂತ ಕೆಲವೇ ನಿಮಿಷಗಳಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಇಮ್ರಾನ್ ಖಾನ್ ಅವರನ್ನು ಹತ್ಯೆ ಮಾಡುವ ರಾಜಕೀಯ ಸಂಚು ಎಂಬ ಆರೋಪ ಕೇಳಿಬಂದಿದೆ. ಫೈರಿಂಗ್ ಬಳಿಕ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಇಸ್ಲಾಮಾಬಾದ್ ನಿಂದ 200 ಕಿ.ಮೀ ದೂರದಲ್ಲಿ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಇಮ್ರಾನ್ ಖಾನ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಫೈರಿಂಗ್ ನಡೆಸಿದ ಅಪರಿಚಿತ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Imran khan: Imran Khan Injured After Firing At His Rally, Gunman Arrested

Comments are closed.