HSRP Deadline : ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆಗೆ ಸೂಚಿಸಲಾಗಿದೆ. ಇದರ ಜೊತೆಗೆ ಈಗಾಗಲೇ ಎರಡೆರಡು ಭಾರಿ ಕಾಲಾವಕಾಶ ಕೂಡ ನೀಡಲಾಗಿದೆ. ಹೀಗಿದ್ದರೂ ರಾಜ್ಯದಲ್ಲಿ ವಾಹನ ಸವಾರರು ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ದಂಡ ರುಚಿತೋರಿಸಿಯಾದರೂ ನಂಬರ್ ಪ್ಲೇಟ್ ಅಳವಡಿಸುವಂತೆ ಮಾಡಲು ಆರ್‌ಟಿಓ (RTO) ಅಧಿಕಾರಿಗಳು ಮುಂದಾಗಿದ್ದು, ಸದ್ಯದಲ್ಲೇ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದ ವಾಹನ ಸವಾರಿಗೆ ಸಂಕಷ್ಟ ಕಾದಿದೆ.

ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಅಳವಡಿಸುವಂತೆ ಈಗಾಗಲೇ ನಿಯಮ ರೂಪಿಸಲಾಗಿದೆ. ಆದರೆ ಈ ನಿಯಮ ಜಾರಿಗೆ ಬಂದಾಗಿನಿಂದಲೂ ನಂಬರ್ ಪ್ಲೇಟ್ ನೋಂದಣಿಗೆ ವಾಹನ ಸವಾರರು ನಿರಾಸಕ್ತಿ ತೋರುತ್ತಿದ್ದಾರೆ. ಇಲಾಖೆಯ ಮಾಹಿತಿಗಳ ಪ್ರಕಾರ ರಾಜ್ಯದಲ್ಲಿ 2 ಕೋಟಿ ವಾಹನಗಳು ನೋಂದಣಿಯಾಗಿದ್ದು, ಈ ಪೈಕಿ 36 ಲಕ್ಷ ವಾಹನಗಳು ಮಾತ್ರ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗೆ ರಜಿಸ್ಟರ್ ಮಾಡಿಸಿಕೊಂಡಿವೆ. ಇನ್ನುಳಿದ ಲಕ್ಷಾಂತರ ವಾಹನ ಸವಾರರು ಗಾಡಿ ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳುವ ಗೋಜಿಗೆ ಹೋದಂತಿಲ್ಲ.
ಇದನ್ನೂ ಓದಿ : PM Awas Yojana : ಹೊಸ ಮನೆ ಕಟ್ಟಿಸುವವರಿಗೆ ಕೇಂದ್ರ ಸರಕಾರದಿಂದ ಸಿಗಲಿದೆ 30 ಲಕ್ಷ ರೂಪಾಯಿ
ಈಗಾಗಲೇ ಎರಡು ಭಾರಿ ಗಡುವು ನೀಡಿದ್ದ ಆರ್.ಟಿ.ಓ ಇನ್ನೊಮ್ಮೆ ಇದೇ ಬರುವ ಮೇ 31 ರ ತನಕ ಅವಧಿ ವಿಸ್ತರಿಸಿದೆ. ಆದರೂ ಕೂಡ ವಾಹನ ಸವಾರರು ನೀರಸವಾಗಿ ಸ್ಪಂದಿಸುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು ಎರಡು ಕೋಟಿ ವಾಹನಗಳಿವೆ. ಈ ಪೈಕಿ ಕೇವಲ 36 ಲಕ್ಷ ವಾಹನಗಳು ಮಾತ್ರ ನೋಂದಣಿಯಾಗಿವೆ. ಅಂದ್ರೇ ಅಂದಾಜು ಶೇ.18ರಷ್ಟು ವಾಹನಗಳಿಗೆ HSRP ಅಳವಡಿಕೆಯಾಗಿದೆ.
ದಾಖಲೆಗಳ ಪ್ರಕಾರವೇ ಇನ್ನೂ 1.64 ಕೋಟಿ ವಾಹನಗಳಿಗೆ ಹೊಸ ಫಲಕ ಅಳವಡಿಕೆಯಾಗಿಲ್ಲ. ಇನ್ನು ಮೇ 31 ರಂದು ಮೂರನೇ ಬಾರಿಗೆ ಕೊಟ್ಟ ಗಡುವು ಅಂತ್ಯವಾಗಲಿದ್ದು ಅಲ್ಲಿಯವರೆಗೆ ಜನರ ಪ್ರತಿಕ್ರಿಯೆ ನೋಡಿ ಸರ್ಕಾರಕ್ಕೆ ಪತ್ರ ಬರೆಯಲು RTO ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನೂ ಇದುವರೆಗಿನ ಮಾಹಿತಿ ಪ್ರಕಾರ ಇನ್ನೂ 1.64 ಲಕ್ಷ ವಾಹನಗಳು ನೋಂದಣಿ ಉಳಿದಿದ್ದು ಈ ವಾಹನ ಸವಾರರು ನಿಯಮದ ಪ್ರಕಾರ ಮೇ 31ರ ಒಳಗೆ ಅಳವಡಿಸಿಕೊಳ್ಳದೆ ಇದ್ದರೆ ದಂಡ ವಿಧಿಸುವ ಪ್ರಕ್ರಿಯೆ ಆರಂಭ ಮಾಡಲು ಆರ್.ಟಿ.ಓ ಹಾಗೂ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ 80 ಸಾವಿರ ಅರ್ಜಿ ತಿರಸ್ಕಾರ :ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ಸಿಗುತ್ತೆ ಹಣ

ಹಾಗಿದ್ದರೇ ಈ ದಂಡದ ಪ್ರಕ್ರಿಯೆ ಹೇಗಿರಲಿದೆ ಅನ್ನೋದನ್ನು ನೋಡೋದಾದರೆ ಎಚ್ಎಸ್ಆರ್ಪಿ ನೋಂದಣಿ ಸಂಖ್ಯೆಯ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದಿದ್ದರೇ, ಮೊದಲ ಬಾರಿ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ಅದೇ ವಾಹನಕ್ಕೆ ಎರಡನೇ ಭಾರಿ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಇದಾದ ಮೇಲೂ ವಾಹನ ಸವಾರರು ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೇ ಇದ್ದಲ್ಲಿ ಸಿಕ್ಕಿಬೀಳುವ ಪ್ರತಿ ಬಾರಿಗೆ 1 ಸಾವಿರ ದಂಡ ಕಟ್ಟುತ್ತಾ ಹೋಗಬೇಕು ಎಂಬ ನಿಯಮ ರೂಪಿಸಲಾಗಿದೆ.
ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಈ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲಾಗುತ್ತಿದೆ. ಅತೀ ಸುರಕ್ಷತಾ ನೋಂದಣಿ ಪ್ಲೇಟ್ ಎಂದು ಕರೆಯಿಸಿಕೊಳ್ತಿರೋ ಈ ನಂಬರ್ ಪ್ಲೇಟ್ ನ್ನು 2019 ರ ಒಳಗೆ ಖರೀದಿಸಿದ ಎಲ್ಲ ವಾಹನಗಳಿಗೂ ಅಳವಡಿಸೋದು ಕಡ್ಡಾಯ ಎಂದು ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ : Google Wallet : ಭಾರತದಲ್ಲಿ ಆರಂಭವಾಯ್ತು ಗೂಗಲ್ ವ್ಯಾಲೆಟ್ Google Payಗಿಂತ ಹೇಗೆ ಭಿನ್ನ ? ಏನಿದರ ಉಪಯೋಗ ?
ಈ ನಂಬರ್ ಪ್ಲೇಟ್ ನಿಂದ ಪೊಲೀಸರಿಗೆ ನಿಯಮ ಉಲ್ಲಂಘನೆಯಾದಾಗ ನಂಬರ್ ನೋಟ್ ಮಾಡಿಕೊಳ್ಳಲು ಸಹಾಯವಾಗಲಿದೆ. ಅಲ್ಲದೇ ಈ ವಾಹನದ ಮಾಹಿತಿಗಳು ಸರ್ಕಾರದ ಕಚೇರಿಯಲ್ಲಿ (ಡೆಟಾಬೇಸ್) ಸಂಗ್ರಹವಾಗಿರುತ್ತದೆ. ಇದರಿಂದ ನಿಮ್ಮ ವಾಹನ ಕಳ್ಳತನವಾದರೆ ಇದರ ಸಹಾಯದಿಂದ ಬೇಗನೇ ಹುಡುಕಲು ಅನುಕೂಲವಾಗುತ್ತದೆ.
ಕಳ್ಳತನದ ಬೈಕ್ ಅಪರಾಧ ಕೃತ್ಯಕ್ಕೆ ಬಳಕೆ ಆಗುವುದನ್ನು ತಡೆಯಬಹುದು.ವಾಹನಕ್ಕೆ ಹಾಕಿರುವ ನಂಬರ್ ಪ್ಲೇಟ್ ಅನಧಿಕೃತ ಬದಲಾವಣೆ ಅಸಾಧ್ಯವಾಗಿದೆ.ಈ ನಂಬರ್ ಪ್ಲೇಟ್‌ನಲ್ಲಿ ಮಾಹಿತಿ ತಿದ್ದಲು ಆಗುವುದಿಲ್ಲ.ಈ ಪ್ಲೇಟ್‌ನ ಮರುಬಳಕೆಯು ಸಾಧ್ಯವಿಲ್ಲ ಹೀಗಾಗಿ ವಾಹನ ಸವಾರರು ಈ ನಂಬರ್ ಪ್ಲೇಟ್ ಅಳವಡಿಕೆಗೆ ಮನಸ್ಸು ಮಾಡಬೇಕಿದೆ.
HSRP Deadline HSRP Fine Details Released Karnataka Government Kannada News