ಬೆಂಗಳೂರು : (independence day Bangalore Traffic Information) ಆಗಸ್ಟ್ 15 ರಂದು 75 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ನಗರದಲ್ಲಿ ಹಲವು ಕಾರ್ಯಕ್ರಮಗಳು ಆಯೋಜಿಸಲಾಗಿದೆ.ಮುಖ್ಯವಾಗಿ ಕಾಂಗ್ರೆಸ್ ಸ್ವಾತಂತ್ರ್ಸೋತ್ಸವದ ವಿಶೇಷ ನಡಿಗೆ ಆಯೋಜಿಸಿದೆ. ಕಾಂಗ್ರೆಸ್ ನ ನೀರಿಕ್ಷೆಯಂತೆ ಈ ನಡಿಗೆ ಕಾರ್ಯಕ್ರಮದಲ್ಲಿ ಅಂದಾಜು 1 ಲಕ್ಷ ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ಎದುರಾಗುವ ಭೀತಿಯಿಂದ ನಗರ ಪೊಲೀಸ್ ಇಲಾಖೆ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಿದೆ.
ಸ್ವಾತಂತ್ರ್ಯ ದಿನಾಚರಣೆ ದಿನ ಯಾವ ಯಾವ ರಸ್ತೆಯಲ್ಲಿ ಯಾವ ಸಮಯದಲ್ಲಿ ಸಂಚಾರ ಅವೈಡ್ ಮಾಡಬೇಕು ಅನ್ನೋದ್ರ ಬಗ್ಗೆ ನಗರ ಸಂಚಾರಿ ಪೊಲೀಸರು ಸುತ್ತೋಲೆ ಹೊರಡಿಸಿದ್ದು, ಅದರ ವಿವರ ಇಲ್ಲಿದೆ.
ಸಂಚಾರಿ ಪೊಲೀಸ್ ಆಯುಕ್ತರು ಹೊರಡಿಸಿದ ಸಂಚಾರಿ ಸುತ್ತೋಲೆಯಲ್ಲಿದೆ ಅನ್ನೋದನ್ನು ಗಮನಿಸೋದಾದರೇ,
- ಬೆಳಗ್ಗೆ 6.30 ರಿಂದ 8 ಗಂಟೆವರೆಗೆ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಸಂಚಾರದಲ್ಲಿ ದಟ್ಟಣೆ ಸಾಧ್ಯತೆ ಇದೆ. ಹೀಗಾಗಿ ವಾಹನ ಸವಾರರು ಬದಲಿ ಮಾರ್ಗ ಅನುಸರಿಸೋದು ಸೂಕ್ತ.
- ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಹೆಚ್ ಎಂಟಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಾಧ್ಯತೆ ಇದೆ.
- ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ವಿಠಲ್ ನಾಗರಾಜ ರಸ್ತೆ, ರಾಜ್ ಕುಮಾರ್ ರಸ್ತೆ, ತುಮಕೂರು ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.
- ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನೃಪತುಂಗ ರಸ್ತೆ, ಎನ್ ಆರ್ ರೋಡ್, ಜೆ.ಸಿ ರೋಡ್, ಜಿ.ಟಿ ರೋಡ್, ಎಲ್.ಪಿ.ಟಿ ರೋಡ್ ಕೆ.ಜಿ ರೋಡ್, ಗಾಂಧಿ ನಗರ 5th ಮುಖ್ಯ ರಸ್ತೆಯಲ್ಲಿ ಸಂಚರಿಸದಂತೆ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.
- ಮಧ್ಯಾಹ್ನ 12ರಿಂದ 3 ಗಂಟೆ ವರೆಗೆ ಆನಂದ್ ರಾವ್ ಸರ್ಕಲ್ ನಿಂದ ಸುಬೇದಾರ್ ಚತ್ರಂ ರಸ್ತೆ, ಗೂಡ್ ಶೆಡ್ ರೋಡ್ ನಿಂದ ಟಿ.ಎಮ್. ಸಿ ರಾಯನ್ ರೋಡ್, ಮೆಜೆಸ್ಟಿಕ್ ಪ್ಲಾಟ್ ಫಾರ್ಮ್ ರೋಡ್ ನಿಂದ ಸಂಗೋಳ್ಳಿ ರಾಯಣ್ಣ ಸರ್ಕಲ್, ಬಿನ್ನಿಪೇಟೆ – ಹುಣಸೇಮರ ಜಂಕ್ಷನ್ ನಿಂದ ಗೂಡ್ ಶೆಡ್ ರಸ್ತೆಟ್ಯಾಂಕ್ ಬಂಡ್ ರಸ್ತೆ, ಶೇಷಾದ್ರಿ ರಸ್ತೆ, ಸೌತ್ ಎಂಡ್ ರಸ್ತೆಯಿಂದ ಲಾಲ್ ಬಾಗ್ ಪಶ್ಚಿಮ ಗೇಟ್, ಮಿನರ್ವ ಸರ್ಕಲ್ ನಿಂದ ಟೌನ್ ಹಾಲ್ ಕಡೆಗೆ ಸಂಚಾರ ದಟ್ಟಣೆಯಾಗಲಿದೆ ಎಂದು ನೀರಿಕ್ಷಿಸಲಾಗುತ್ತಿದೆ.
- ಮಧ್ಯಾಹ್ನ 12 ಗಂಟೆಯಿಂದ 4 ಗಂಟೆವರೆಗೆ ಶೇಷ್ಮಾಲ್ ಜಂಕ್ಷನ್ ನಿಂದ ರಾಮಕೃಷ್ಣ ಆಶ್ರಮ ಸರ್ಕಲ್, ಬುಲ್ ಟೆಂಪಲ್ ರಸ್ತೆ ಮಂಜುನಾಥ ಕಲ್ಯಾಣ ಮಂಟಪದಿಂದ ಉಮಾ ಥಿಯೇಟರ್ ಕಡೆಗೆ,ಕೆ.ಆರ್ ರಸ್ತೆ ಡಿಎಮ್ ಜಂಕ್ಷನ್ ನಿಂದ ಶಿವಶಂಕರ್ ಸರ್ಕಲ್‌ವರೆಗೆ ಡಯಾಗನಕ್ ರೋಡ್ ಹೋಮ್ ಸ್ಕೂಲ್ ಜಂಕ್ಷನ್ ನಿಂದ ವಾಸವಿ ರಸ್ತೆ ಮತ್ತು ನ್ಯಾಶನಲ್ ಕಾಲೇಜ್ ರಸ್ತೆಯನ್ನು ವಾಹನ ಸವಾರರು ಬಳಸದಂತೆ ಸೂಚಿಸಲಾಗಿದೆ.
- ಇದಲ್ಲದೇ ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ವರೆಗೆ , ಕಬ್ಬನ್ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡದಂತೆ ಸೂಚಿಸಲಾಗಿದೆ.
ಇನ್ನು ಪಾಸ್ ಹೊಂದಿದ ಗಣ್ಯರಿಗೆ ಕಬ್ಬನ್ ರಸ್ತೆ ಮೂರನೇ ಗೇಟ್ ಸೇರಿದಂತೆ ಕೆಲವೆಡೆ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸ್ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ : Ganja inside chicken meat : ಚಿಕನ್ ಪೀಸ್ನಲ್ಲಿ ಗಾಂಜಾವನ್ನಿಟ್ಟು ಕೈದಿಗಳಿಗೆ ಪೂರೈಕೆ : ಖದೀಮನನ್ನು ಬಂಧಿಸಿದ ಖಾಕಿ ಪಡೆ
ಇದನ್ನೂ ಓದಿ : Chenab Railway Bridge : ಉದ್ಘಾಟನೆಯಾಯ್ತು ವಿಶ್ವದ ಅತಿ ಎತ್ತರದ ಚೆನಾಬ್ ರೈಲು ಸೇತುವೆ
independence day Bangalore Traffic Information : Read this news before Travel the road in Bangalore on August 15