BBMP Master Plan : ಕಸ ಸಂಗ್ರಹ ಹಾಗೂ ಸಾಗಾಣಿಕೆ ವೆಚ್ಚ ತಪ್ಪಿಸಲು ಸಿದ್ಧವಾಗಿದೆ ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್

ಬೆಂಗಳೂರು : (BBMP Master Plan garbage collection) ಸಿಲಿಕಾನ್ ಸಿಟಿ ಪ್ರತಿನಿತ್ಯ ಬೆಳೆಯುತ್ತಲೇ ಇದೆ. ಹೀಗಾಗಿ ಬಿಬಿಎಂಪಿಗೂ ನಗರದ ನಿರ್ವಹಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ನಗರದ ತ್ಯಾಜ್ಯ ನಿರ್ವಹಣೆ ಬಿಬಿಎಂಪಿ ಪಾಲಿಗೆ ಬಿಳಿಯಾನೆಯಂತಾಗಿದೆ. ಹೀಗಾಗಿ ಪ್ರತಿ ತಿಂಗಳು ತ್ಯಾಜ್ಯ ನಿರ್ವಹಣೆ ಹಾಗೂ ಸಾಗಾಣಿಕೆಗೆ ಕೋಟ್ಯಾಂತರ ರೂಪಾಯಿ ವ್ಯಯಿಸುತ್ತಿರುವ ಬಿಬಿಎಂಪಿ ಈಗ ಈ ವೆಚ್ಚದಿಂದ ಬಚಾವಾಗಲು ಮಾಸ್ಟರ್ ಪ್ಲ್ಯಾನ್ ಜೊತೆ ಸಿದ್ಧವಾಗಿದೆ.

ಸದ್ಯ ಬಿಬಿಎಂಪಿ ಮಂಡೂರು, ಕನ್ನಹಳ್ಳಿಯಲ್ಲಿ ಸದ್ಯಕ್ಕೆ ಬೆಂಗಳೂರಿನ ಕಸ ವಿಲೇವಾರಿಯಾಗುತ್ತಿದೆ. ಎಲ್ಲಾ ವಲಯಗಳಿಂದಲೂ ಪ್ರತಿ ದಿನ ಈ ಜಾಗಕ್ಕೆ ಕಸ ತಂದು ವಿಲೇವಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಬಿಬಿಎಂಪಿ ಪ್ರತಿ ತಿಂಗಳು ಸರಿಸುಮಾರು 55 ಕೋಟಿ ವೆಚ್ಚ ಮಾಡುತ್ತಿದೆ. ವಾರ್ಷಿಕವಾಗಿ ಈ ಮೊತ್ತ ಬರೋಬ್ಬರಿ 660 ಕೋಟಿ. ಈ ಹಣ ಉಳಿಸಿಕೊಳ್ಳಲು ಮತ್ತೊಂದು ಮೆಗಾ ಪ್ಲ್ಯಾನ್ ಮಾಡಿರುವ ಬಿಬಿಎಂಪಿ, ಅಪಾರ್ಟ್ಮೆಂಟ್, ಹೋಟೆಲ್, ಕೈಗಾರಿಕಾ ಕಂಪೆನಿಗಳೇ ತ್ಯಾಜ್ಯ ಸಾಗಾಟ ಮಾಡುವ ಹೊಣೆಯನ್ನು ನೀಡಲು ಪಾಲಿಕೆ‌ ಚಿಂತಿಸಿದೆ.

ಅಪಾರ್ಟ್ಮೆಂಟ್ ಗಳು, ಹೋಟೆಲ್ ಗಳು ಏಜೆನ್ಸಿಗಳ ನೆರವಿನಿಂದ ಪಾಲಿಕೆ ಲ್ಯಾಂಡ್ ಫಿಲ್ ಗೆ ಕಸ ತಲುಪಿಸಬೇಕು ಎಂಬ ನಿಯಮ ರೂಪಿಸಲು ಸಿದ್ಧವಾಗಿದೆ. ಬಿಬಿಎಂಪಿ SWM ವಿಭಾಗ ಕಸ ಸಾಗಾಟಕ್ಕೆ ಅರ್ಹ ಏಜೆನ್ಸಿಗಳಿಗೆ ಪರವಾನಗಿ ನೀಡಲಿದೆ. ಬಿಬಿಎಂಪಿಯಿಂದ ಲೈಸೆನ್ಸ್ ಪಡೆದ ಏಜೆನ್ಸಿಗಳು ಅಪಾರ್ಟ್ಮೆಂಟ್, ಹೋಟೆಲ್, ಇಂಡಸ್ಟ್ರೀಸ್ ಗಳಿಂದ ಕಸ ಸಂಗ್ರಹಿಸ ಬಹುದು. ಇದಕ್ಕೆ ಬಿಬಿಎಂಪಿಯೇ ದರ ನಿಗದಿ ಮಾಡಲಿದೆ.

ಇದರಿಂದ ಹೆಚ್ಚು ಹೆಚ್ಚು ತ್ಯಾಜ್ಯ ಉತ್ಪಾದಿಸುವ ರೆಸ್ಟೋರೆಂಟ್, ಹೊಟೇಲ್ ಹಾಗೂ ಕೈಗಾರಿಕೆಗಳು ತಮ್ಮ ತ್ಯಾಜ್ಯ ನಿರ್ವಹಣೆಗೆ ತಾವೇ ಶ್ರಮವಹಿಸುವ ಸ್ಥಿತಿ ಎದುರಾಗಲಿದೆ. ಬಿಬಿಎಂಪಿ ಗುರುತಿಸಿದ ತ್ಯಾಜ್ಯ ಸಂಗ್ರಹಣಾ ಏಜೆನ್ಸಿಗಳಿಗೆ ಈ ಹೊಟೇಲ್ ಹಾಗೂ ಇತರ ಸಂಸ್ಥೆಗಳು ತಮ್ಮ ಕಸವನ್ನು ನೀಡೋದಲ್ಲದೇ ಅವುಗಳನ್ನು ಸಾಗಿಸಲು ನಿಗದಿತ ಹಣವನ್ನು ಪಾವತಿಸಬೇಕಾಗುತ್ತದೆ.

ಒಟ್ಟಾರೆ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲೆಂದೇ ಪಾಲಿಕೆ ತನ್ನ ಕೈಯಿಂದ 660 ಕೋಟಿ ವಾರ್ಷಿಕವಾಗಿ ವೆಚ್ಚಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಹೊಸ ತಂತ್ರ ಮಾಡಿಕೊಂಡಿದ್ದು, ಇದು ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಹಾಗೂ ನಗರದ ಉದ್ದಿಮೆಗಳು ಇದಕ್ಕೆ ಹೇಗೆ ರೆಸ್ಪಾನ್ಸ್ ಮಾಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : Chenab Railway Bridge : ಉದ್ಘಾಟನೆಯಾಯ್ತು ವಿಶ್ವದ ಅತಿ ಎತ್ತರದ ಚೆನಾಬ್ ರೈಲು ಸೇತುವೆ

ಇದನ್ನೂ ಓದಿ : ಅಗಸ್ಟ್ 15 ರಂದು ಬೆಂಗಳೂರಿನಲ್ಲಿ ರಸ್ತೆಗಿಳಿಯೋ ಮುನ್ನ ಈ ಸುದ್ದಿ ಓದಿ

BBMP Master Plan is ready to avoid garbage collection and transportation cost

Comments are closed.