ಬೆಂಗಳೂರು independence day flower show : ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ವರ್ಷಗಳೇ ಉರುಳುತ್ತಾ ಬಂದರೂ ಅವರಿನ್ನು ಅಭಿಮಾನಿಗಳ ಎದೆಯಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಈಗಲೂ ಕೂಡ ಅಪ್ಪು ಸ್ಮರಣಾರ್ಥ ಅನೇಕ ಕಡೆಗಳಲ್ಲಿ ಸಾಮಾಜಿಕ ಕಾರ್ಯ, ಪುತ್ಥಳಿ ನಿರ್ಮಾಣ, ರಸ್ತೆಗಳ ಮರು ನಾಮಕರಣ ಹೀಗೆ ಸಾಕಷ್ಟು ಕಾರ್ಯಗಳು ನಡೆಯುತ್ತಲೇ ಇದೆ. ಈ ಎಲ್ಲದರ ನಡುವೆ ರಾಜ್ಯ ಸರ್ಕಾರ ಈ ಬಾರಿ ಲಾಲ್ಬಾಗ್ ಫ್ಲವರ್ ಶೋವನ್ನು ನಟ ಪುನೀತ್ ರಾಜ್ಕುಮಾರ್ಗೆ ಅರ್ಪಿಸಲು ನಿರ್ಧರಿಸಿದೆ.
ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಲಾಲ್ಬಾಗ್ ಫ್ಲವರ್ ಶೋ ನಡೆದಿರಲಿಲ್ಲ. ಆದರೆ ಈ ಬಾರಿ ತೋಟಗಾರಿಕಾ ಇಲಾಖೆ ಫ್ಲವರ್ ಶೋ ನಡೆಸಲು ತಯಾರಿಯನ್ನು ಮಾಡಿಕೊಂಡಿದ್ದು ಡಾ.ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಈ ಬಾರಿಯ ಫ್ಲವರ್ ಶೋ ನಡೆಸಲು ತೀರ್ಮಾನಿಸಿದೆ. ಈ ಸಂಬಂಧ ವಿಕಾಸ ಸೌಧದದಲ್ಲಿ ಸುದ್ದಿಗೋಷ್ಠಿ ನಡೆಸಿ ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ಮಾಹಿತಿಯನ್ನು ನೀಡಿದ್ದಾರೆ.
ಈ ವರ್ಷ ಆಗಸ್ಟ್ ಐದರಿಂದ ಹದಿನೈದನೇ ತಾರೀಖಿನವರೆಗೆ ಈ ಬಾರಿ ಲಾಲ್ಬಾಗ್ ಫ್ಲವರ್ ಶೋ ಇರಲಿದೆ . ಫ್ಲವರ್ ಶೋನಲ್ಲಿ ಗಾಜನೂರಿನ ಡಾ.ರಾಜ್ ಕುಮಾರ್ ನಿವಾಸವನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ ಫ್ಲವರ್ ಶೋಗೆ ಚಾಲನೆ ನೀಡಲಿದ್ದಾರೆ. ಆಗಸ್ಟ್ 15ರ ಬಳಿಕ ಇನ್ನೂ ಎರಡು ದಿನಗಳ ಕಾಲ ಈ ಶೋವನ್ನು ವಿಸ್ತರಿಸಲು ಚರ್ಚೆ ನಡೆಯುತ್ತಿವೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಅತ್ಯಂತ ವಿಜೃಂಭಣೆಯಿಂದ ಫ್ಲವರ್ ಶೋ ನಡೆಸಲು ತೀರ್ಮಾನಿಸಿದ್ದೇವೆ ಎಂದು ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ಮಾಹಿತಿ ನೀಡಿದರು.
ಫ್ಲವರ್ ಶೋ ಪ್ರಯುಕ್ತ ಡಾ.ರಾಜ್ ಕುಮಾರ್ ಹಾಗೂ ಡಾ.ಪುನೀತ್ ರಾಜ್ಕುಮಾರ್ ಪ್ರತಿಮೆಗಳಿಗೆ ಹೂವಿನ ಅಲಂಕಾರ ಮಾಡಲಾಗುತ್ತದೆ ಎಂದು ಸಚಿವ ಮುನಿರತ್ನ ಹೇಳಿದರು. ಇದೇ ವೇಳೆ ಈ ಬಾರಿಯ ಫ್ಲವರ್ ಶೋ ಟಿಕೆಟ್ ದರ ಹೆಚ್ಚು ಮಾಡುತ್ತೀರಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಾರಿ ಹೆಚ್ಚಿನ ಹೂವುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ತಿದ್ದೇವೆ. ಇದಾದ ಬಳಿಕ ಟಿಕೆಟ್ ದರ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಬಗ್ಗೆ ಅಧಿಕಾರಿಗಳ ಜೊತೆ ಸಭೆ ಕರೆದು ತೀರ್ಮಾನ ಕೈಗೊಳ್ಳಲಿದ್ದೇನೆ ಎಂದು ಹೇಳಿದರು .
ಇದನ್ನು ಓದಿ : Mallikarjun Kharge Next CM : ಕರ್ನಾಟಕದಲ್ಲಿ ಬಾರಿ ಅತಂತ್ರ ವಿಧಾನಸಭೆ : ಜೆಡಿಎಸ್ ಜೊತೆ ಸಂಘರ್ಷ ಬೇಡ ಎಂದ ಹೈಕಮಾಂಡ್, ಖರ್ಗೆ ಸಿಎಂ ?
ಇದನ್ನೂ ಓದಿ : cm asavaraj bommai : ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ಸಿಎಂ ಅಸ್ತು : ಬಿಎಸ್ವೈ ಆಪ್ತ ಬಣದವರಿಗೆ ಕೊಕ್
independence day flower show will be held at the lalbagh