Athiya Shetty and KL Rahul : ಆಥಿಯಾ ಶೆಟ್ಟಿ ಹಾಗೂ ಕೆ.ಎಲ್​ ರಾಹುಲ್​ ಮದುವೆ ವಿಚಾರವಾಗಿ ಹೊರಬಿತ್ತು ಬಹುಮುಖ್ಯ ಮಾಹಿತಿ

Athiya Shetty and KL Rahul : ಬಾಲಿವುಡ್​ ನಟಿ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್​ ರಾಹುಲ್​ ಡೇಟಿಂಗ್​ ಮಾಡ್ತಿರುವ ವಿಚಾರ ಗುಟ್ಟಾಗಿ ಏನು ಉಳಿದಿಲ್ಲ. ಈ ಜೋಡಿ ತಮ್ಮ ರಿಲೇಶನ್​ಶಿಪ್​ ಹಾಗೂ ಮದುವೆ ವಿಚಾರಗಳಿಂದಾಗಿ ಸುದ್ದಿಯಲ್ಲಿರ್ತಾರೆ. ಆದರೆ ಇತ್ತೀಚಿಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಸುನೀಲ್​ ಶೆಟ್ಟಿ ಪುತ್ರಿ ಆಥಿಯಾ ಹಾಗೂ ಕ್ರಿಕೆಟಿಗ ಕೆ.ಎಲ್​ ರಾಹುಲ್​ ಮುಂದಿನ ಮೂರು ತಿಂಗಳ ಒಳಗಾಗಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.

ಆಥಿಯಾ ಶೆಟ್ಟಿ ಹಾಗೂ ಕೆ.ಎಲ್​ ರಾಹುಲ್​​ ಮುಂದಿನ ಮೂರು ತಿಂಗಳ ಒಳಗಾಗಿ ಮದುವೆಯಾಗಲಿದ್ದು ಈಗಾಗಲೇ ಮದುವೆ ತಯಾರಿ ನಡೀತಾ ಇದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಎರಡೂ ಕುಟುಂಬಗಳು ಇತ್ತೀಚಿನ ದಿನಗಳಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಆಥಿಯಾ ಹಾಗೂ ರಾಹುಲ್ ನೂತನ​ ನಿವಾಸಕ್ಕೆ ಭೇಟಿ ನೀಡಿದ್ದಾರೆ. ರಾಹುಲ್​ ಹಾಗೂ ಅವರ ಪೋಷಕರು. ಕೆಲವು ದಿನಗಳ ಹಿಂದೆಯಷ್ಟೇ ಮುಂಬೈನಲ್ಲಿರುವ ಆಥಿಯಾ ಶೆಟ್ಟಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಎರಡೂ ಕುಟುಂಬಗಳು ಮದುವೆಗೆ ಅದ್ಧೂರಿ ಸಿದ್ಧತೆ ನಡೆಸುತ್ತಿವೆ ಎಂದು ತಿಳಿದು ಬಂದಿದೆ.

ಆಥಿಯಾ ಹಾಗೂ ರಾಹುಲ್​ ಮೂರು ವರ್ಷಗಳಿಂದ ಪರಸ್ಪರ ಡೇಟಿಂಗ್​ ಮಾಡುತ್ತಿದ್ದಾರೆ . ಕಳೆದ ವರ್ಷ ಕೆ.ಎಲ್​ ರಾಹುಲ್​​ ಆಥಿಯಾ ಶೆಟ್ಟಿಯೊಂದಿಗೆ ಸುನೀಲ್​ ಶೆಟ್ಟಿ ಸಹೋದರ ಅಹಾನ್​ ಶೆಟ್ಟಿ ಚೊಚ್ಚಲ ಸಿನಿಮಾ ತಡಪ್​ ಸಿನಿಮಾ ಪ್ರದರ್ಶನಕ್ಕೆ ಬರುವ ಮೂಲಕ ತಮ್ಮ ಸಂಬಂಧವನ್ನು ಬಹಿರಂಗಗೊಳಿಸಿದ್ದರು. ಈ ಮೂಲಕ ತಮ್ಮ ಸಂಬಂಧವನ್ನು ಸಾರ್ವಜನಿಕಗೊಳಿಸಿದ್ದರು.

ಇದನ್ನೂ ಓದಿ : Jasprit Bumrah : ಭೂಮ್ ಭೂಮ್ ಬುಮ್ರಾ, ಖತರ್ನಾಕ್ ವೇಗಿಯ ಬೆಂಕಿ ಬೌಲಿಂಗ್’ಗೆ ಇಂಗ್ಲೆಂಡ್ ಉಡೀಸ್.. ನೆಹ್ರಾ ದಾಖಲೆ ಪೀಸ್ ಪೀಸ್ !

ಇದನ್ನೂ ಓದಿ : KL Rahul Tattoo : ಕೈಗೆ “ಗೂಬೆ” ಚಿತ್ರವನ್ನು ಹಚ್ಚೆ ಹಾಕಿಸಿಕೊಂಡು ಅಚ್ಚರಿ ಮೂಡಿಸಿದ ರಾಹುಲ್, ಗೂಬೆಯ ಮಹತ್ವ ಏನ್ ಗೊತ್ತಾ..?

ಇದನ್ನು ಓದಿ : cm asavaraj bommai : ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ಸಿಎಂ ಅಸ್ತು : ಬಿಎಸ್​ವೈ ಆಪ್ತ ಬಣದವರಿಗೆ ಕೊಕ್​​

ಇದನ್ನೂ ಓದಿ : independence day flower show : ಲಾಲ್​ಬಾಗ್​ ಫ್ಲವರ್​ ಶೋ ಪುನೀತ್​​ ರಾಜ್​​ಕುಮಾರ್​​ಗೆ ಅರ್ಪಿಸಲು ರಾಜ್ಯ ಸರ್ಕಾರದಿಂದ ನಿರ್ಧಾರ

Athiya Shetty and KL Rahul To Tie The Knot In Next 3 Months, Grand Preparations Underway: Reports

Comments are closed.