Sudha Murty : ಬಡವರಿಗಾಗಿ ಆರೋಗ್ಯ ಸೇವೆ :103 ಕೋಟಿ ವೆಚ್ಚ, 350 ಹಾಸಿಗೆ ಆಸ್ಪತ್ರೆ ನಿರ್ಮಿಸಿದ ಸುಧಾಮೂರ್ತಿ

ಬೆಂಗಳೂರು : ಜಲಪ್ರಳಯವೇ ಇರಲಿ, ಕೊರೊನಾ ಸಂಕಷ್ಟವೇ ಬರಲಿ. ಯಾರೇ ಕಷ್ಟ ಅಂತಾ ಹೇಳಿಕೊಂಡ್ರು ಸದಾ ಸೇವೆಗಾಗಿಯೇ ತಮ್ಮನ್ನು ಮುಡಿಪಾಗಿಟ್ಟವರು ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ( Sudha Murty) . ಹೌದು, ಇದೀಗ ಬಡವರಾಗಿ ಬರೋಬ್ಬರಿ 103 ಕೋಟಿ ರೂಪಾಯಿ ವೆಚ್ಚದಲ್ಲಿ 350 ಹಾಸಿಗೆ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಮೂಲಕ ಬಡವರಿಗೆ ಉತ್ತಮ ಆರೋಗ್ಯ ಸೌಕರ್ಯ ಒದಗಿಸಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿರುವ ಜಯದೇವ ಆಸ್ಪತ್ರೆ (Jayadeva Hospital ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ಸೌಲಭ್ಯವನ್ನು ಒದಗಿಸುತ್ತಿದೆ. ಆದರೆ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಹಲವು ವರ್ಷಗಳಿಂದಲೂ ಎದುರಾಗುತ್ತಲೇ ಇದೆ. 2008 ರಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಆಸ್ಪತ್ರೆಗೆ ಪತಿಯೊಂದಿಗೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಆಸ್ಪತ್ರೆಗೆ ಬರುವ ಮಾಹಿತಿಯನ್ನು ಪಡೆದುಕೊಂಡ್ರು. ರೋಗಿಗಳ ಆರ್ಥಿಕ ಸ್ಥಿತಿಯನ್ನು ಮನಗಂಡ ಸುಧಾಮೂರ್ತಿ ಅವರು ಮರುದಿನವೇ ಜಯದೇವ ಆಸ್ಪತ್ರೆಗೆ ಸುಸಜ್ಜಿತ ಆಸ್ಪತ್ರೆಯೊಂದನ್ನು ಕಟ್ಟಿಸಿಕೊಡುವ ವಾಗ್ದಾನವನ್ನು ಮಾಡಿದ್ದರು.

ಮೂರು ದಿನ ಕಳೆಯುಷ್ಟರಲ್ಲಿಯೇ ಜಯದೇವ ಆಸ್ಪತ್ರೆಗೆ ಇನ್ಫೋಸಿಸ್‌ ( Infosys foundation )ಎಂಜಿನಿಯರ್ಸ್‌ ಭೇಟಿ ನೀಡಿ ಫ್ಲಾನ್‌ ಸಿದ್ದ ಪಡಿಸಿದ್ದರು. ಸುಧಾಮೂರ್ತಿ ಅವರು ಆಸ್ಪತ್ರೆ ಕಟ್ಟಿಸಿಕೊಡುತ್ತೇನೆ ಎಂದಾಗ ಜಯದೇವ ಆಸ್ಪತ್ರೆಯವರು 200 ಹಾಸಿಗೆಯ ಆಸ್ಪತ್ರೆ ಕಟ್ಟಿಸಿಕೊಡುವಂತೆ ಮನವಿ ಮಾಡಿದ್ದರು. ಆದರೆ ಸುಧಾ ಮೂರ್ತಿ ಅವರು ಬರೋಬ್ಬರಿ 350 ಹಾಸಿಗೆಯ ಆಸ್ಪತ್ರೆ ಕಟ್ಟಿಸಿಕೊಡುವುದಾಗಿ ಮಾತು ಕೊಟ್ಟಿದ್ದರು. ಅಂತೆಯೇ ಇದೀಗ ಜಯದೇವ ಆಸ್ಪತ್ರೆಯ ಆವರಣದಲ್ಲಿ ಸುಸಜ್ಜಿತ ಆಸ್ಪತ್ರೆಯೊಂದರು ಸಿದ್ದವಾಗಿದೆ.

ಆಸ್ಪತ್ರೆತಲ್ಲಿ 250 ಜನರಲ್‌ ವಾರ್ಡ್‌, 100 ಐಸಿಯು ಬೆಡ್‌, 2 ಶಸ್ತ್ರ ಚಿಕಿತ್ಸಾ ವಿಭಾಗ, 2 ಕಾರ್ಡಿಕಲ್‌ ಕ್ಯಾಥ್‌ ಲ್ಯಾಬ್‌ ನಿರ್ಮಾಣಗೊಂಡಿದೆ. ಜಯದೇವ ಆಸ್ಪತ್ರೆಗೆ ಆರೋಗ್ಯ ಸೇವೆಗೆ ಬರುವ ರೋಗಿಗಳಿಗೆ ಸುಸಜ್ಜಿತ ಆಸ್ಪತ್ರೆಗೆ ನೆರವಾಗಲಿದೆ. ನವೆಂಬರ್‌ 17 ರಂದು ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ ಎಂದು ಜಯದೇವ ಆಸ್ಪತ್ರೆಯ ಮಹಾನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಕೋವಿಡ್ ಹೋರಾಟಕ್ಕೆ ಇಸ್ಫೋಸಿಸ್‌ ಫೌಂಡೇಶನ್‌ ನಿಂದ 100 ಕೋಟಿ ದೇಣಿಗೆ : ಸುಧಾಮೂರ್ತಿ ಘೋಷಣೆ

ಇದನ್ನೂ ಓದಿ : ಕೊಡಗು ಪ್ರವಾಹ‌ ಸಂತ್ರಸ್ತರಿಗೆ ಆಸರೆಯಾದ ಸುಧಾಮೂರ್ತಿ : ಮತ್ತೆ ಸಿದ್ದವಾಯ್ತು 70 ಮನೆ

(Infosys foundation chief Sudha Murty constructed New Hospital in Jayadeva Hospital Campus)

Comments are closed.