ಬಿಜೆಪಿಗೆ ಅನಿವಾರ್ಯವಾದ್ರಾ ಬಿವೈ ವಿಜಯೇಂದ್ರ ! ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ BJP ಹೈಕಮಾಂಡ್

Karnataka Bjp State president BY Vijayendra : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಇಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಮಾರಂಭ ನಡೆಯಲಿದೆ.

ಬೆಂಗಳೂರು : Karnataka Bjp State president BY Vijayendra : ಕಾಂಗ್ರೆಸ್ ನ ಸಂಘಟಿತ ಹೋರಾಟ, ಗ್ಯಾರಂಟಿ ಯೋಜನೆಗಳ ಎಫೆಕ್ಟ್ ನಿಂದಾಗಿ ವಿಧಾನಸಭಾ ಚುನಾವಣೆಯಲ್ಲಿ ಮಖಾಡೆ ಮಲಗಿದ ಬಿಜೆಪಿಗೆ ಚುನಾವಣೆ ಮುಗಿದ ಬಳಿಕವೂ ಮೇಲೇಳಲು ಸಾಧ್ಯವಾಗಿಲ್ಲ. ಮತ್ತದೇ ಗ್ಯಾರಂಟಿ, ಸಂಘಟನೆ, ಆಪರೇಷನ್‌ ಎಫೆಕ್ಟ್‌ನಿಂದ ಲೋಕಸಭೆಯಲ್ಲೂ ದಿಗ್ವಿಜಯದ ಕನಸು ಕಾಣುತ್ತಿದೆ ಕಾಂಗ್ರೆಸ್‌ ಈ ನಡುವಲ್ಲೇ ಬಿಜೆಪಿ ರಾಜಾಹುಲಿ ಪುತ್ರ ಬಿವೈ ವಿಜಯೇಂದ್ರ (BY Vijayendra)  ಅವರು ಬಿಜೆಪಿ ರಾಜ್ಯಾಧ್ಯಕ್ಷ (BJP State President) ಸ್ಥಾನಕ್ಕೆ ನೇಮಕ ಮಾಡಿದೆ.

kannada News Karnataka Bjp State president BY Vijayendra Oath Ceremony At BJP office Bangalore
Image Credit to Original Source

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಪ್ರತಿಪಕ್ಷ ನಾಯಕನ ಹುದ್ದೆಯನ್ನು ಖಾಲಿ ಇರಿಸಿಕೊಂಡಿದ್ದ ಬಿಜೆಪಿಗೆ ಕಾಂಗ್ರೆಸ್‌ ಇರಿಸು ಮುರಿಸು ಉಂಟು ಮಾಡಿತ್ತು. ಇಂತಹ ಹೊತ್ತಲ್ಲೇ ಬಿಜೆಪಿಗೆ ಕೊನೆಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೊಬ್ಬ ಅಭ್ಯರ್ಥಿ ಸಿಕ್ಕಿದ್ದು, ವಿಜಯೇಂದ್ರ ರಾಜ್ಯದಲ್ಲಿ ಪಕ್ಷದ ಚುಕ್ಕಾಣಿ ಹಿಡಿಯಲು ಸಿದ್ಧವಾಗಿದ್ದಾರೆ. ಆ ಮೂಲಕ ಈಗಾಗಲೇ ರಾಜಕೀಯದಲ್ಲಿ 10 ವರ್ಷಗಳ ಕಾಲ ಹಿಂದಕ್ಕೆ ಹೋದಂತಿರೋ ಬಿಜೆಪಿಗೆ ವಿಜಯೇಂದ್ರ ಅನಿವಾರ್ಯ ಎಂಬ ಅಭಿಪ್ರಾಯ ಮೂಡಿಸಿದ್ದಾರೆ.

kannada News Karnataka Bjp State president BY Vijayendra Oath Ceremony At BJP office Bangalore
Image Credit to Original Source

ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಿಂದ ಆರಂಭಿಸಿ ಪ್ರಚಾರದವರೆಗೂ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಬಿಎಸ್‌ ಯಡಿಯೂರಪ್ಪ ಅವರನ್ನು ಕಡೆಗಣಿಸಿದ ಬಿಜೆಪಿ , ತನ್ನ ನಿರ್ಧಾರಕ್ಕೆ ಕೈಯಲ್ಲಿದ್ದ ಅಧಿಕಾರವನ್ನು ಕಳೆದುಕೊಳ್ಳುವಂತಹ ಸ್ಥಿತಿ ತಲುಪಿತು. ಇದಾದ ಬಳಿಕವೂ ಬಿಎಸ್‌ ಯಡಿಯೂರಪ್ಪ ಅವರನ್ನು ದೂರವಿಟ್ಟು ಬಿಜೆಪಿಯನ್ನು ಕಟ್ಟುವ ಹಾಗೂ ಬೆಳೆಸುವ ಲೆಕ್ಕಾಚಾರದಲ್ಲೇ ಇದ್ದ ಬಿಜೆಪಿಗೆ ಆಂತರಿಕ ಬೇಗುದಿ, ಅಸಮಧಾನ, ನಾಯಕತ್ವ ಕೊರತೆ ಎಲ್ಲವೂ ಕೆಟ್ಟದಾಗಿ ಕಾಡಲಾರಂಭಿಸಿತು.

ಇದನ್ನೂ ಓದಿ : ಲೋಕಸಭಾ ಚುನಾವಣೆ 2024: ಉಡುಪಿ ಚಿಕ್ಕಮಗಳೂರು ಕ್ಷೇತ್ರ, ಬಿಜೆಪಿಗೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್‌ಗೆ ಜಯಪ್ರಕಾಶ್‌ ಹೆಗ್ಡೆ ಫಿಕ್ಸ್‌

ಜಾತಿ, ಓಟ್ ಬ್ಯಾಂಕ್, ನಾಯಕತ್ವ, ಪ್ರಾದೇಶಿಕತೆ, ಹಿರಿಯರಿಗೆ ಗೌರವ ಹೀಗೆ ನಾನಾ ಕಾರಣಕ್ಕೆ ಬಿಜೆಪಿಗೊಂದು ರಾಜ್ಯಾಧ್ಯಕ್ಷರ ಆಯ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೂ ಚುನಾವಣೆಯಲ್ಲಿ ಪಕ್ಷ ಸೋತು ಆರೆಂಟು ತಿಂಗಳ ನಂತರ ಬಿಜೆಪಿಯ ಸಾರಥ್ಯ ಬದಲಾಗಿದೆ. ಕರ್ನಾಟಕ ರಾಜಕಾರಣದ ನಾಡಿಮಿಡಿತವನ್ನು ಬಲ್ಲ ರಾಜಕಾರಣಿ ಬಿ.ಎಸ್.ಯಡಿಯೂರಪ್ಪನವರ ಕಿರಿಯ ಪುತ್ರನ ಕೈಗೆ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿಯ ಚುಕ್ಕಾಣಿ ನೀಡಿದೆ. ಈ ಅಧಿಕಾರ ಹಸ್ತಾಂತರ ಬಿಜೆಪಿ ಪಾಲಿಗೆ ಅನಿವಾರ್ಯವಾಗಿತ್ತಾ ? ಅನ್ನೋ ಸಂಗತಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

kannada News Karnataka Bjp State president BY Vijayendra Oath Ceremony At BJP office Bangalore
Image Credit to Original Source

ಆದರೆ ವಾಸ್ತವಾಗಿ ಗಮನಿಸಿದ್ರೇ ಖಂಡಿತವಾಗಿಯೂ ಬಿಜೆಪಿಗೆ ಬಿ.ಎಸ್.ವೈ ಮಾರ್ಗದರ್ಶನ ಹಾಗೂ ಬಿ.ವೈ.ವಿಜಯೇಂದ್ರ ನಾಯಕತ್ವ ಅನಿವಾರ್ಯ ವಾಗಿದೆ.ಯಾಕೆಂದ್ರೆ ಈಗ ಬಿಜೆಪಿ ಬಹುತೇಕ ರಾಜಕೀಯವಾಗಿ 10 ವರ್ಷಗಳ ಕಾಲ ಹಿಂದಕ್ಕೆ ಹೋದಂತಾಗಿದೆ. ನಾಯಕತ್ವವಿಲ್ಲದ ಕಾರಣಕ್ಕೆ ಸೋತ ನಾಯಕರು ಕಂಗಾಲಾಗಿದ್ದಾರೆ. ಪಕ್ಷಕ್ಕೆ ಇನ್ನೂ ಭವಿಷ್ಯವೇ ಇಲ್ಲ ಎಂದುಕೊಳ್ಳುತ್ತ ಜೆಡಿಎಸ್ ಹಾಗೂ ಕಾಂಗ್ರೆಸ್ ನತ್ತ ಮುಖಮಾಡುವ ಲೆಕ್ಕಾಚಾರದಲ್ಲಿದ್ದಾರೆ.

kannada News Karnataka Bjp State president BY Vijayendra Oath Ceremony At BJP office Bangalore
Image Credit to Original Source

ಅಷ್ಟೇ ಅಲ್ಲ ಲಿಂಗಾಯತ, ವೀರಶೈವ ನಾಯಕತ್ವ, ದಲಿತ ನಾಯಕತ್ವ, ಒಕ್ಕಲಿಗರ ನಾಯಕತ್ವ ಹೀಗೆ ಎಲ್ಲ ಜಾತಿ-ಜನಾಂಗದವರಿಂದಲೂ ನಾಯಕತ್ವಕ್ಕೆ ಬೇಡಿಕೆ ಬರೋದರ ಜೊತೆಗೆ ಪಕ್ಷದ ಆಂತರಿಕ ಒಗ್ಗಟ್ಟು ಚೂರು-ಚೂರಾಗೋ ಸ್ಥಿತಿ ತಲುಪಿದೆ. ಬೊಮ್ಮಾಯಿಯಿಂದ ಆರಂಭಿಸಿ, ಆರ್.ಅಶೋಕ್, ಅಶ್ವತ್ಥ್ ನಾರಾಯಣ, ಜೋಶಿ,ಯತ್ನಾಳ್, ನಿರಾಣಿ ಹೀಗೆ ಯಾವ ನಾಯಕರೂ ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವಷ್ಟು ಸಾಮರ್ಥ್ಯ ಹೊಂದಿಲ್ಲ.

ಇದನ್ನೂ ಓದಿ : ಜನಧನ್‌ ಖಾತೆ ಹೊಂದಿದವರಿಗೆ ಗುಡ್‌ನ್ಯೂಸ್‌ : ನಿಮ್ಮ ಖಾತೆಗೆ ಜಮೆ ಆಗಲಿದೆ 2 ಲಕ್ಷ ರೂಪಾಯಿ

ಆದರೆ ಇಷ್ಟು ವರ್ಷಗಳ ಪಕ್ಷದಲ್ಲಿ ಒಗ್ಗಟ್ಟು ಮೂಡಿಸಿ ಕಾಪಾಡಿಕೊಂಡವರು ಬಿಎಸ್‌ ಯಡಿಯೂರಪ್ಪ. ಬಿಜೆಪಿ ತೊರೆದು ಬೇರೆ ಪಕ್ಷ ಕಟ್ಟಿ ಮತ್ತೆ ಮರಳಿ ಬಿಜೆಪಿ ಗೆ ಬಂದರೂ ಇಂದಿಗೂ ಬಿಜೆಪಿಯಲ್ಲಿ ಹಾಗೂ ನಾಯಕ ರಲ್ಲಿ ಬಿಎಸ್ವೈ ಮಾತಿಗೆ ಗೌರವ ಹಾಗೂ ಬೆಲೆ ಇದೆ. ಈಗ ಬಿಎಸ್ವೈ ಪುತ್ರ ವಿಜಯೇಂದ್ರ ನಾಯಕ ಆಗಿರುವುದರಿಂದ ಬಿಎಸ್ವೈ ಮಾರ್ಗದರ್ಶನದಿಂದ ವಿಜಯೇಂದ್ರ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಲು ಸಾಧ್ಯ.

kannada News Karnataka Bjp State president BY Vijayendra Oath Ceremony At BJP office Bangalore
Image Credit to Original Source

ಅಲ್ಲದೇ ಬಿಎಸ್‌ ಯಡಿಯೂರಪ್ಪ ಅವರ ಮೇಲಿನ ಗೌರವದಿಂದ ಬಿಜೆಪಿಯ ಅಸಮಧಾನಿತ ನಾಯಕರು ವಿಜಯೇಂದ್ರ ಜೊತೆಗೆ ನಿಲ್ಲಬಹುದು ಎಂಬ ಲೆಕ್ಕಾಚಾರ ಹೈಕಮಾಂಡ್‌ಗೆ ಇದೆ‌. ಹೀಗಾಗಿ ಈಗಾಗಲೇ ಅಸಮಧಾನಿತರ ಗೂಡಾಗಿರೋ ಬಿಜೆಪಿಯನ್ನು ಮುನ್ನಡೆಸಲು ವಿಜಯೇಂದ್ರ ಅನಿವಾರ್ಯ ಎಂಬುದು ಸತ್ಯವಾಗಿದೆ. ವಿಜಯೇಂದ್ರ ನೇಮಕದ ಮೂಲಕ ಬಿಜೆಪಿ ಹೈಕಮಾಂಡ್ ಕೂಡ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದೆ.

ಇದನ್ನೂ ಓದಿ : ಉಡುಪಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ : ಆರೋಪಿ ಅರೆಸ್ಟ್‌, ಬಯಲಾಯ್ತು ಹತ್ಯೆಯ ಹಿಂದಿನ ನಿಗೂಢ ಸತ್ಯ

ವಿಜಯೇಂದ್ರ ಅವರನ್ನು ಬಿಟ್ಟು ಇನ್ಯಾರನ್ನೇ ನಾಯಕರನ್ನಾಗಿ ಆರಿಸಿ ಪಕ್ಷದ ಹೊಣೆ ನೀಡಿದ್ದರೂ ಬಿಎಸ್ವೈ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತಿತ್ತು. ಆದರೆ ಈಗ ವಿಜಯೇಂದ್ರಗೆ ಹೊಣೆ ನೀಡಿರೋದರಿಂದ ಬಿಎಸ್‌ ಯಡಿಯೂರಪ್ಪಗೆ ಪರೋಕ್ಷವಾಗಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸುವ ಚಾಲೆಂಜ್ ನೀಡಿದಂತಾಗಿದೆ ಎನ್ನಲಾಗ್ತಿದೆ. ಇನ್ನೊಂದೆಡೆ ಯಲ್ಲಿ ಲಿಂಗಾಯಿತ, ವೀರಶೈವ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿಗೆ ಸಹಕಾರಿಯಾಗಲಿದೆ.

kannada News Karnataka Bjp State president BY Vijayendra Oath Ceremony At BJP office Bangalore

Comments are closed.