ಸಿಲಿಕಾನ್‌ ಸಿಟಿಯಲ್ಲಿ ನಮೋಗೆ ಹೂಮಳೆ : ಹೇಗಿತ್ತು ಬೆಂಗಳೂರಲ್ಲಿ ಮೋದಿ ರೋಡ್‌ ಶೋ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆಯಲ್ಲಿ ಬಿಜೆಪಿ ಅಬ್ಬರದ ಪ್ರಚಾರ ಕಾರ್ಯವನ್ನು ಕೈಗೊಂಡಿದೆ. ಅದ್ರಲ್ಲೂ ಬೆಂಗಳೂರಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಬೃಹತ್‌ ರೋಡ್‌ ಶೋ (PM Narendra Modi Road Show) ನಡೆಸುವ ಮೂಲಕ ಮತಯಾಚನೆ ನಡೆಸಿದ್ದಾರೆ. ನಗರದಲ್ಲಿ ರೋಡ್‌ ಶೋ ಸಾಗಿದ 26 ಕಿಮೀ ದೂರದವರೆಗೂ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಪ್ರಧಾನಿ ಮೋದಿ ಅವರಿಗೆ ಹೂಮಳೆಯನ್ನೇ ಸುರಿಸಿದ್ದಾರೆ.

ಕಳೆದ ಒಂದು ವಾರದಿಂದಲೂ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾರೆ. ಇಂದು ಬೆಂಗಳೂರಲ್ಲಿ ಅತೀ ದೊಡ್ಡ ರೋಡ್‌ ಶೋ ನಡೆಸಿದ್ದಾರೆ. ರಾಜಭವನದ ಹೆಲಿಪ್ಯಾಡ್‌ಗೆ ಆಗಮಿಸಿದ ಮೋದಿ ಅವರು ಅಲ್ಲಿಂದ ಜೆಪಿ ನಗರದ ಲೊಯೋಲ ಕಾಲೇಜಿನ ಹೆಲಿಪ್ಯಾಡ್‌ಗೆ ಬಂದಿಳಿದ್ರು. ಸೋಮೇಶ್ವರ ಭವನದಿಂದ ಬೆಳಗ್ಗೆ ರೋಡ್‌ ಶೋ ಆರಂಭಗೊಂಡಿತು. ಸಂಸದರಾದ ಪಿಸಿ ಮೋಹನ್‌ ಹಾಗೂ ತೇಜಸ್ವಿ ಸೂರ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೋಡ್‌ ಶೋ ನಲ್ಲಿ ಸಾಥ್‌ ನೀಡಿದ್ದರು.

Karnataka assembly Election 2023 PM Narendra Modi Road Show Bangalore 7
ಬೆಂಗಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ

ಬೆಂಗಳೂರು ಮಹಾನಗರದಲ್ಲಿ ನಡೆದ ಅತೀ ದೊಡ್ಡ ರೋಡ್‌ ಶೋ ಎಂಬ ಹೆಗ್ಗಳಿಕೆ ಇಂದಿನ ನಮೋ ರೋಡ್‌ ಶೋ (PM Narendra Modi Road Show) ಪಾತ್ರವಾಗಿದೆ. ಪ್ರಧಾನಿ ಮೋದಿಯವರ 26 ಕಿ.ಮೀ ರೋಡ್ ಶೋಗೆ ನಡೆಸಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ಹೂಮಳೆಯನ್ನೇ ಸುರಿಸಿದ್ದಾರೆ. ಅದ್ರಲ್ಲೂ ರಸ್ತೆಯೆಲ್ಲಾ ಚೆಂಡು ಹೂವು ಹಾಗೂ ಗುಲಾಬಿ ಹೂವುಗಳಿಂದಲೇ ಸಿಂಗಾರಗೊಂಡಿತ್ತು. ಮೋದಿ ಅವರ ಹೂವಿನ ಸ್ವಾಗತಕ್ಕೆ ಬರೋಬ್ಬರಿ 40 ಟನ್ ಹೂಗಳನ್ನು ಬಳಸಲಾಗಿತ್ತು. ರೋಡ್‌ ಶೋ ಉದ್ದಕ್ಕೂ ಮೋದಿ ಮೋದಿ ಅನ್ನೋ ಹರ್ಷೋದ್ಗಾರ ಮೊಳಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಬಾವುಟ ರಾರಾಜಿಸಿತ್ತು.

Karnataka assembly Election 2023 PM Narendra Modi Road Show Bangalore 7
ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ

ಜೆಪಿ ನಗರದಿಂದ ಮಲ್ಲೇಶ್ವರಂ ತನಕದ 26 ಕಿಮೀ ರೋಡ್​ ಶೋ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖುಷಿಕೊಟ್ಟಿದೆ. ರೋಡ್‌ ಶೋಗೂ ಮೊದಲೇ ಪುರೋಹಿತರಿಂದ ಮಂತ್ರಪಠಣ ನಡೆಯಿತು. ಇನ್ನು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಶ್ರೀಗಳು ರೋಡ್‌ ಶೋ ನೋಡಲು ಆಗಮಿಸಿದ್ದು ವಿಶೇಷವಾಗಿತ್ತು. ಇನ್ನು ರಾಮಕೃಷ್ಣ ಆಶ್ರಮದ ಬಳಿ ಬರುತ್ತಿದ್ದಂತೆಯೇ ಪ್ರಧಾನಿ ಮೋದಿ ಅವರು ಕೈಮುಗಿದು ಸ್ವಾಮೀಜಿಗಳಿಗೆ ನಮಸ್ಕರಿಸಿದ್ದಾರೆ. ಅಲ್ಲದೇ ಸ್ವಾಮೀಜಿ ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ನಡೆದ ರೋಡ್‌ ಶೋ ಬೆಂಗಳೂರಿನ ನಿವಾಸಿಗಳನ್ನು ಮಂತ್ರಮುಗ್ದರನ್ನಾಗಿತ್ತು.

ಬೆಂಗಳೂರಲ್ಲಿ ಇದೇ ಮೊದಲ ಬಾರಿಗೆ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮಸ್ಸನ್ನು ತಂದಿತ್ತು. ರೋಡ್‌ ಶೋನಲ್ಲಿ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ. ಬರೋಬ್ಬರು ಮೂರು ಗಂಟೆಗಳ ಕಾಲ ಸಿಲಿಕಾನ್‌ ಸಿಟಿಯಲ್ಲಿ ನಮೋ ನಾಮಜಪ ಕೇಳಿಬಂದಿತ್ತು. ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ನಡೆಸುವ ಮೂಲಕ ಬಿಜೆಪಿ ಭರ್ಜರಿ ಗೆಲುವಿನ ಲೆಕ್ಕಾಚಾರದಲ್ಲಿದೆ.

ಇದನ್ನೂ ಓದಿ : ಬಜರಂಗದಳ ನಿಷೇಧದಿಂದ ಹಿಂದುತ್ವಕ್ಕೆ ಧಕ್ಕೆ, ಕಾಂಗ್ರೆಸ್‌ಗೆ ಪ್ರಣಾಳಿಕೆ ತಂತು ಪ್ರಾಣಸಂಕಟ

ಇದನ್ನೂ ಓದಿ : IT Raid Bangalore : ಫೈನಾನ್ಶಿಯರ್‌ಗಳ ಮನೆ ಮೇಲೆ ಐಟಿ ದಾಳಿ : 20 ಕೋಟಿ ರೂಪಾಯಿ ಜಪ್ತಿ

Comments are closed.