ಮಾರ್ಚ್ 9 ರಂದು ಕರ್ನಾಟಕ ಬಂದ್: ಹೋರಾಟ, ಮುಷ್ಕರ ಕ್ಕೆ ಕರೆಕೊಟ್ಟ ಡಿ.ಕೆ.ಶಿವಕುಮಾರ್‌

ಬೆಂಗಳೂರು: Karnataka Bandh : ಚುನಾವಣೆಯ ಹೊತ್ತಿನಲ್ಲಿ ಮಾಡಾಳು ವಿರೂಪಾಕ್ಷಪ್ಪ ಅಕ್ರಮ ಬಯಲಿಗೆ ಬರೋ ಮೂಲಕ ಕಾಂಗ್ರೆಸ್ ಚುನಾವಣೆ ಎದುರಿಸಲು ಬಿಜೆಪಿಗೆ ಬ್ರಹ್ಮಾಸ್ತ್ರ ನೀಡಿದೆ. ಈ ಅಸ್ತ್ರವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿರೋ ಕಾಂಗ್ರೆಸ್ ಮಾರ್ಚ್ 9 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ತುಮಕೂರಿನ ಕೊರಟಗೆರೆ ಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಮಾರ್ಚ್ ೯ ರಂದು ಕರ್ನಾಟಕ ಬಂದ್ ಮಾಡೋ ಮೂಲಕ ಜನತೆಗೂ ಬಿಜೆಪಿಯ ಭ್ರಷ್ಟಾಚಾರವನ್ನು ಪರಿಚಯಿಸಲು ಮುಂದಾಗಿದ್ದಾರೆ. ಮಾರ್ಚ್ 9 ರಂದು ಮುಂಜಾನೆ 9 ರಿಂದ 11 ಗಂಟೆಯವರೆಗೆ ಎರಡು ತಾಸುಗಳ ಕಾಲ ಕರ್ನಾಟಕವನ್ನು ಬಂದ್‌ಮಾಡೋಣ. ಶಾಲೆ, ಕಾಲೇಜು, ಆಸ್ಪತ್ರೆ ಹೊರತುಪಡಿಸಿ ಉಳಿದ ಎಲ್ಲರೂ ಹಾಗೂ ಸಂಘಟನೆಗಳು ಬಂದ್ ಗೆ (Karnataka Bandh) ಬೆಂಬಲ ನೀಡುವಂತೆ ಡಿಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ.

ಇದರೊಂದಿಗೆ ಮಾರ್ಚ್ 9 ರಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ರಸ್ತೆಗಿಳಿದು ಹೋರಾಟ ಮಾಡೋದು ಬಹುತೇಕ ಖಚಿತವಾಗಿದೆ. ಚುನಾವಣೆ ಹೊತ್ತಿನಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ಹಾಗೂ ಬಂದ್ ಗೆ ಕರೆ ನೀಡಿದ್ದು ಬಿಜೆಪಿ ಗೆ ತೀವ್ರ ಮುಜುಗರ ತಂದಿದೆ. ಕೊರಟಗೆರೆಯಲ್ಲಿ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಡಿಕೆಶಿ, ಮೋದಿ ಸರ್ಕಾರ ಆದಾಯ ದ್ವಿಗುಣ ಮಾಡ್ತೇನೆ ಎಂದರು. ನಾವಿದ್ದಾಗ ಕೊಬ್ಬರಿ ಬೆಲೆ 20 ಸಾವಿರ ಇತ್ತು. ಈಗ 7-8‌ ಸಾವಿರಕ್ಕೆ ಬಂದಿದೆ.

ಆದರೆ ಬಿಜೆಪಿ ನಾಯಕರು ಸೇರಿದಂತೆ ಸಂಪೂರ್ಣ ಸರ್ಕಾರ ಲೂಟಿಯಲ್ಲಿ ತೊಡಗಿದೆ.ಕೇಂದ್ರ ಸರ್ಕಾರದ ಸಚಿವರುಗಳು ರಾಜ್ಯಕ್ಕೆ ಕಮೀಷನ್ ತೆಗೆದುಕೊಳ್ಳಲು ಬರುತ್ತಿದ್ದಾರೆ.‌ ಇದನ್ನೆಲ್ಲ ಕೊಣೆಗಾಣಿಸಲು ನಾವು ಹೋರಾಟ ಮಾಡೋಣ ಎಂದು ಡಿಕೆಶಿ ಕರೆ ನೀಡಿದ್ದಾರೆ. ಸದ್ಯ ಕಾಂಗ್ರೆಸ್ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು,ಪರೀಕ್ಷೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಶಾಲೆ,ಕಾಲೇಜು,ಆಸ್ಪತ್ರೆ ಹೊರತುಪಡಿಸಿ ಉಳಿದ ಕ್ಷೇತ್ರಗಳ ಜನರು ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

ಹೀಗಾಗಿ ಮಾರ್ಚ್ 9 ರಂದು ಭಾಗಶಃ ಕರ್ನಾಟಕ ಬಂದ್ ಯಶಸ್ವಿಯಾಗೋ ಸಾಧ್ಯತೆ ಇದೆ. ಒಟ್ಟಿನಲ್ಲಿ ಚುನಾವಣೆ ಹೊತ್ತಿನಲ್ಲಿ ಆಡಳಿರಾರೂಢ ಬಿಜೆಪಿ ವಿರುದ್ಧ ವಿಪಕ್ಷ ಕಾಂಗ್ರೆಸ್ ಬಂದ್ ಕರೆ ನೀಡಿರೋದು ಪಕ್ಷಕ್ಕೆ ಹಾಗೂ ನಾಯಕರ ತೀವ್ರ ಮುಜುಗರ ಹಾಗೂ ಅಸಮಧಾನಕ್ಕೆ ಕಾರಣವಾಗಿದೆ. ಹೀಗಾಗಿ ಬಿಜೆಪಿ ಕೂಡ ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಸೂಕ್ತ ತನಿಖೆಯ ಭರವಸೆ ನೀಡಿ ಜನರ ಮನವೊಲಿಸುವ ಪ್ರಯತ್ನ ಮಾಡ್ತಿದೆ.

ಇದನ್ನೂ ಓದಿ : ಗೃಹ ಸಚಿವ ಆರಗ ಜ್ಞಾನೇಂದ್ರ ಎಸ್ಕಾರ್ಟ್ ವಾಹನ ಬೈಕ್‌ ಗೆ ಢಿಕ್ಕಿ : ಸವಾರ ಸಾವು

ಇದನ್ನೂ ಓದಿ : ಪಿಎಂ, ಲೋಪಿ, ಸಿಜೆಐ ಸಮಿತಿಯ ಸಲಹೆಯ ಮೇರೆಗೆ ಚುನಾವಣಾ ಆಯುಕ್ತರ ನೇಮಕ ಎಂದ ಸುಪ್ರೀಂ ಕೋರ್ಟ್‌

Comments are closed.