ಬೆಂಗಳೂರು : ಕಾವೇರಿಗಾಗಿ ಕರುನಾಡು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದೆ. ಬೆಂಗಳೂರಿನ ಕುಡಿಯುವ ನೀರು ಹಾಗೂ ಕಾವೇರಿ ಕೊಳ್ಳದ ರೈತರ ಕೃಷಿಯ ಆಸರೆ ಆಗಿರುವ ಕಾವೇರಿ ನದಿ ನೀರನ್ನು (Cauvery Water) ತಮಿಳುನಾಡಿಗೆ ಹರಿಸುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಈಗಾಗಲೇ ಬೆಂಗಳೂರು ಬಂದ್ (Bengaluru Bandh) ಮುಗಿಸಿರೋ ಸಂಘಟನೆಗಳು ಇದೇ ಶುಕ್ರವಾರ ಕರ್ನಾಟಕ ಬಂದ್ (Karnataka Bandh) ಗೆ ಆಗ್ರಹಿಸಿದ್ದು, ಬಹುತೇಕ ಸಂಘಟನೆಗಳ ಬೆಂಬಲದೊಂದಿಗೆ ಬಂದ್ ಯಶಸ್ವಿಯಾಗೋ ಸಾಧ್ಯತೆ ಇದೆ.
ಜಲಸಂರಕ್ಷಣಾ ಸಮಿತಿ ಕರೆಕೊಟ್ಟ ಬೆಂಗಳೂರು ಬಂದ್ ಭಾಗಶಃ ಯಶಸ್ವಿಯಾಗಿದೆ. ಈಮಧ್ಯೆ ಕಾವೇರಿ ನೀರು ಹರಿಸುತ್ತಿರುವ ಕರ್ನಾಟಕ ಸರ್ಕಾರದ ನಿರ್ಧಾರ ಖಂಡಿಸಿ ಶುಕ್ರವಾರ ಕರ್ನಾಟಕ ಬಂದ್‌ಮಾಡಲು ವಾಟಾಳ ನಾಗರಾಜ್, ಕರವೇ ಸೇರಿದಂತೆ ಹಲವು ಸಂಘಟನೆಗಳು ಮುಂದಾಗಿವೆ. ರಾಷ್ಟ್ರೀಯ ಹೆದ್ದಾರಿ ತಡೆ, ವಿಧಾನಸೌಧ ಹಾಗೂ ರಾಜಭವನ ಮುತ್ತಿಗೆ ಸೇರಿದಂತೆ ಹಲವು ಹೋರಾಟದ ಪ್ಲ್ಯಾನ್ ಜೊತೆ ಕನ್ನಡಪರ ಸಂಘಟನೆಗಳು ಬಂದ್ ವೆ ಸಿದ್ಧವಾಗಿದೆ.
ಇದನ್ನೂ ಓದಿ : ಅಕ್ಟೋಬರ್‌ನಲ್ಲಿ ಅರ್ಧ ತಿಂಗಳು ಬ್ಯಾಂಕ್‌ಗಳಿಗೆ ರಜೆ !
ಈ ಮಧ್ಯೆ ಓಲಾ, ಊಬರ್, ಅಟೋ, ಕ್ಯಾಬ್ ಸಂಘಟನೆ, ಬೀದಿಬದಿ ವ್ಯಾಪಾರಿಗಳು ಹೀಗೆ ನೂರಾರು ಸಂಘಟನೆಗಳು ಈ ಬಂದ್ ಗೆ ಬೆಂಬಲ ನೀಡಿವೆ. ಹೀಗಾಗಿ ಶುಕ್ರವಾರ ರಾಜ್ಯರಾಜಧಾನಿ ಸಂಪೂರ್ಣ ಸ್ತಬ್ಧವಾಗೋ ಸಾಧ್ಯತೆ ಇದೆ. ಹಾಗಿದ್ದರೇ ಬಂದ್ ಗೆ ಯಾವೆಲ್ಲ ಸಂಘಟನೆಗಳು ಬೆಂಬಲ ಸೂಚಿಸಿವೆ ? ಎನೆಲ್ಲ ಕ್ಲೋಸ್ ಆಗಲಿದ್ದು, ಯಾವ ಯಾವ ಸೇವೆಗಳು ಸಿಗಲಿದೆ ಅನ್ನೋದನ್ನು ನೋಡೋದಾದರೇ,

ಕರ್ನಾಟಕ ಬಂದ್ : ಏನಿರುತ್ತೆ ?
- ಆಂಬುಲೆನ್ಸ್ ಸೇವೆ
- ತರಕಾರಿ, ಹಾಲು
- ಮೆಡಿಕಲ್ಸ್
- ಆಸ್ಪತ್ರೆ
- ಬ್ಯಾಂಕ್ ಸೇವೆ ಎಂದಿನಂತೆ ಇರಲಿದೆ.
ಕರ್ನಾಟಕ ಬಂದ್ : ಏನಿರಲ್ಲ ?
- ಖಾಸಗಿ ಬಸ್
- ಏರ್ ಪೋರ್ಟ್ ಟ್ಯಾಕ್ಸಿ ಲಾರಿ
- ಸರ್ಕಾರಿ ಕಚೇರಿಗಳು
- ಶಾಪಿಂಗ್ ಮಾಲ್
- ಐಟಿ ಬಿಟಿ ಕಂಪನಿಗಳು
- ಬಿಎಂಟಿಸಿ
- ಕೆಎಸ್ಆರ್ಟಿಸಿ
- ಆಟೋ ಟ್ಯಾಕ್ಸಿ,
- ಎಪಿಎಂಎಸ್ ಮಾರುಕಟ್ಟೆ.
- ಮೆಟ್ರೋ
- ಆದರ್ಶ ಆಟೋ ಯೂನಿಯನ್
- ಹೊಟೇಲ್ ಮಾಲೀಕರ ಸಂಘ
- KSRTC ವರ್ಕರ್ ಫೆಡರೇಷನ್ ಯೂನಿಯನ್
- ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ
- ಖಾಸಗಿ ಶಾಲೆಗಳ ಸಂಘ (ನೈತಿಕ ಬೆಂಬಲ) ನೀಡಿದೆ.
ಇನ್ನೂ ಕರ್ನಾಟಕ ಬಂದ್ ಗೆ ಓಲಾ-ಉಬರ್ ಅಸೋಸಿಯೇಷನ್ ಬೆಂಬಲ ನೀಡಿದ್ದು, ಸೆ.29ರಂದು ಸುಮಾರು 40 ಸಾವಿರ ಓಲಾ-ಉಬರ್ ಕ್ಯಾಬ್ ಗಳು ಕಾರ್ಯನಿರ್ವಹಿಸಲ್ಲ ಎನ್ನಲಾಗ್ತಿದೆ. ಕರ್ನಾಟ ಕ ಬಂದ್ ವೇಳೆ ಕ್ಯಾಬ್ ಓಡಿಸದೇ ಮನೆಯಲ್ಲಿರುತ್ತೇವೆ. ಕರ್ನಾಟಕ ಬಂದ್ ಗೆ ಬೆಂಬಲ. ವಾಟಾಳ್ ನಾಗರಾಜ್ ಪ್ರತಿಭಟನೆ ವೇಳೆ ಸಂಘಟನೆಯಿಂದ 200 ಜನರು ಭಾಗಿಯಾಗಲಿದ್ದೇವೆ ಎಂದು ಓಲಾ-ಊಬರ್ ಚಾಲಕರ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷ್ ಮಾಹಿತಿ ನೀಡಿದ್ದಾರೆ.

ಇದಲ್ಲದೇ, ಕರ್ನಾಟಕ ಬಂದ್ ಗೆ ಖಾಸಗಿ ಶಾಲಾ ವಾಹನ ಚಾಲಕರ ಒಕ್ಕೂಟ ನೈತಿಕ ಬೆಂಬಲ ನೀಡಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆ ಹಿನ್ನೆಲೆ ವಾಹನ ಓಡಿಸಲು ನಿರ್ಧಾರ. ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದೆ, ಹೀಗಾಗಿ ಬಂದ್ ಗೆ ಬಾಹ್ಯ ಬೆಂಬಲ ನೀಡ್ತಿವೆ. ಖಾಸಗಿ ಶಾಲಾ ವಾಹನ ಚಾಲಕರ ಒಕ್ಕೂಟದ ಅಧ್ಯಕ್ಷ ಜಿ.ರವಿ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಭೂಗಳ್ಳರಿಗೆ ಬ್ರೇಕ್ ಹಾಕೋಕೆ ಸಜ್ಜಾದ ಸಿದ್ದರಾಮಯ್ಯ ಸರ್ಕಾರ : ಒತ್ತುವರಿ ಮಾಹಿತಿಗೆ ಸಂಗ್ರಹಕ್ಕೆ ಹೊಸ ಆ್ಯಪ್
ಅಲ್ಲದೇ ಬೆಂಗಳೂರಿನಲ್ಲಿ 25 ಸಾವಿರ ಖಾಸಗಿ ಶಾಲಾ ವಾಹನ ಚಾಲಕರಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಲು ಪ್ರಯತ್ನಗಳು ನಡೆದಿವೆ ಎಂದಿದ್ದಾರೆ. ಒಟ್ಟಿನಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿವಾದ ಭುಗಿಲೆದ್ದಿದ್ದು, ಕಾವೇರಿ ಕೊಳ್ಳದಲ್ಲಿ ನೀರು ಇಲ್ಲದೇ ಇದ್ದರೂ ನೀರು ಬಿಡುವಂತೆ ಬರ್ತಿರೋ ಆದೇಶ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಜನಸಾಮಾನ್ಯರು ಟೀಕಿಸುತ್ತಿದ್ದಾರೆ. ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಎಲ್ಲೆಡೆ ಪ್ರತಿಭಟನೆ ನಡೆಯಲಿದೆ.
Karnataka Bandh for Cauvery Water on Friday What will happen what not