Karnataka Budget 2023 : ಮೀನುಗಾರರಿಗೆ ಗುಡ್‌ ನ್ಯೂಸ್‌ : ಬಡ್ಡಿರಹಿತ ಸಾಲ 3 ಲಕ್ಷ ರೂ.ಕ್ಕೆ ಏರಿಕೆ

ಬೆಂಗಳೂರು : Karnataka Budget 2023 : ರಾಜ್ಯ ಬಜೆಟ್‌ನಲ್ಲಿ ಮೀನುಗಾರರಿಗೆ ಬಂಪರ್‌ ಯೋಜನೆಗಳನ್ನು ಘೋಷಿಸಲಾಗಿದೆ. ಮೀನುಗಾರ ಮಹಿಳೆಯರಿಗೆ ಆರ್ಥಿಕ ಸ್ವಾವಲಂಭನೆ ಹಾಗೂ ವಹಿವಾಟು ವಿಸ್ತರಣೆಗೆ ನೀಡಲಾಗುತ್ತಿದ್ದ ಬಡ್ಡಿರಹಿತ ಸಾಲದ ಮೊತ್ತವನ್ನು 50 ಸಾವಿರ ರೂಪಾಯಿಯಿಂದ 3 ಲಕ್ಷ ರೂಪಾಯಿಗೆ ಏರಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡಿಸೇಲ್‌ ಮಿತಿಯನ್ನು ಒಂದೂವರೆ ಲಕ್ಷ ಕಿಲೋ ಲೀಟರ್‌ನಿಂದ ಎರಡು ಲಕ್ಷ ಕಿಲೋ ಲೀಟರ್‌ಗಳ ವರೆಗೆ ಹೆಚ್ಚಳ ಮಾಡಲಾಗುವುದು. ಇದರಿಂದ ಮೀನುಗಾರರಿಗೆ ಸರಕಾರದಿಂದ 250 ಕೋಟಿ ರೂಪಾಯಿಗಳಷ್ಟು ನೆರವು ದೊರೆಯಲಿದೆ.

ಇದನ್ನೂ ಓದಿ : Karnataka Govt Employees : ಕರ್ನಾಟಕದಲ್ಲಿ ಎನ್‌ಪಿಎಸ್‌ (NPS) ರದ್ದು, ಸರಕಾರಿ ನೌಕರರಿಗೆ ಗುಡ್‌ನ್ಯೂಸ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

ಇದನ್ನೂ ಓದಿ : Karnataka Budget 2023 : ಮದ್ಯಪ್ರಿಯರಿಗೆ ಶಾಕ್‌, ದುಬಾರಿಯಾಗಲಿದೆ ಬಿಯರ್‌

ಇನ್ನು ಮೀನುಗಾರರ ಸೀಮೆಎಣ್ಣೆ ದೋಣಿಗಳ ಇಂಜಿನ್‌ಗಳನ್ನು ಡಿಸೇಲ್‌ ಹಾಗೂ ಪೆಟ್ರೋಲ್‌ ಇಂಜಿನ್‌ ಆಗಿ ಪರಿವರ್ತಿಸಲು 50 ಸಾವಿರ ರೂಪಾಯಿ ಸಹಾಯಧನ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಕಾಟ್ಲಾ, ರೌ ಮೀನುಗಳ ಮರಿಗಳ ಉತ್ಪಾದನೆಯನ್ನು ಹೆಚ್ಚಳ ಮಾಡುವುದರ ಜೊತೆಗೆ ಒಳನಾಡು ಮೀನುಗಾರಿಕಾ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ. ಇನ್ನು ಸಿಗಡಿ ಕೃಷಿಗೆ ಉತ್ತಮ ಮಾರುಕಟ್ಟೆ ಒದಗಿಸಲಾಗುತ್ತದೆ. ಅಲ್ಲದೇ ಶೈತ್ಯಾಗಾರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.

Karnataka Budget 2023: Good news for fishermen: Interest-free loan increased to Rs 3 lakh

Comments are closed.