ಬೆಂಗಳೂರು : ಕರ್ನಾಟಕದಲ್ಲಿಂದು ಕೊರೊನಾ ಮಹಾಸ್ಪೋಟ ( Covid 19 blast ) ಸಂಭವಿಸಿದೆ. ಒಂದೇ ದಿನ ಬರೋಬ್ಬರಿ 21 ಸಾವಿರ ಹೊಸ ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಲ್ಲೇ ಬರೋಬ್ಬರಿ 15 ಸಾವಿರ ಮಂದಿಗೆ ಕೊರೊನಾ ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯನ್ನು ಕಾಣುತ್ತಿದೆ. ರಾಜ್ಯದಲ್ಲಿ ಇಂದು ಒಟ್ಟು 1,95,047 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 21,390 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅಲ್ಲದೇ ಬೆಂಗಳೂರಲ್ಲಿ 15,617 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ 73 ಸಾವಿರಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಒಟ್ಟು 93,009 ಸಕ್ರೀಯ ಕೊರೊನಾ ಪ್ರಕರಣಗಳಿವೆ.
ಇನ್ನು ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರದಲ್ಲಿಯೂ ಏರಿಕೆ ಕಂಡಿದೆದ್ದು,10.96% ಪಾಸಿಟಿವಿಟಿ ದರ ಏರಿಕೆಯಾಗಿದೆ. ಇಂದು 1,541 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕರ್ನಾಟಕ ಈಗಾಗಲೇ ಡೇಂಜರ್ ಸಿಟಿಯ ಲಿಸ್ಟ್‌ನಲ್ಲಿದೆ. ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಹಾಗೂ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದೆ. ಇನ್ನೊಂದೆಡೆಯಲ್ಲಿ ಬೆಂಗಳೂರಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ.
New cases cross 21k in Karnataka and 15k in Bengaluru:
— Dr Sudhakar K (@mla_sudhakar) January 12, 2022
◾New cases in State: 21,390
◾New cases in B’lore: 15,617
◾Positivity rate in State: 10.96%
◾Discharges: 1,541
◾Active cases State: 93,009 (B’lore- 73k)
◾Deaths:10 (B’lore- 06)
◾Tests: 1,95,047#COVID19 #Omicron
ಇದನ್ನೂ ಓದಿ : ಬೆಂಗಳೂರಿನಲ್ಲಿ ಕರೋನಾ ರೌದ್ರ ನರ್ತನ : ಸೋಂಕಿನ ಪ್ರಮಾಣ ನಿಯಂತ್ರಿಸಲು ಅನಿವಾರ್ಯವಾಗುತ್ತಾ ಲಾಕ್ ಡೌನ್ ?
ಇದನ್ನೂ ಓದಿ : ದೇಶದಲ್ಲಿ ಒಂದೇ ದಿನ 1.94 ಲಕ್ಷ ಕೊರೊನಾ ಪ್ರಕರಣ ವರದಿ
(Karnataka Covid 19 blast twenty one thousands new cases)