ಬೆಂಗಳೂರು : ರಾಜ್ಯದಲ್ಲಿಂದು ಕೊರೊನಾ ಮಹಾಸ್ಪೋಟವೇ (Covid-19 Updates) ಸಂಭವಿಸಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದುಪ್ಪಟ್ಟು ಆಗಿದೆ. ರಾಜ್ಯದಲ್ಲಿ ಇಂದು ಬರೋಬ್ಬರಿ 4,246 ಕೊರೊನಾ ಸೋಂಕಿತ ಪ್ರಕರಣ ದಾಖಲಾಗಿದ್ರೆ, ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲೇ 3,605 ಪ್ರಕರಣ ದಾಖಲಾಗಿರೋದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಬೆಂಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೊರೊನಾ ಭೀತಿ ಎದುರಾಗಿದೆ.
ಕರ್ನಾಟಕದಲ್ಲಿ ನಿನ್ನೆ ಎರಡು ಸಾವಿರದಷ್ಟು ಕೊರೊನಾ ಪ್ರಕರಣ ದಾಖಲಾಗಿದ್ರೆ, ಕಳೆದ 24 ಗಂಟೆಯಲ್ಲಿ 1,27,328 ಜನರಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿದ್ದು, ರಾಜ್ಯದಲ್ಲಿ 4246 ಕೊರೊನಾ ಪ್ರಕರಣ ದಾಖಲಾಗುವ ಮೂಲಕ ಸಕ್ರೀಯ ಪ್ರಕರಣಗಳ ಸಂಖ್ಯೆ 17,414ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಇಂದು ಇಬ್ಬರು ಕೊರೊನಾ ಸೋಂಕಿನಿಂದ ಬಲಿಯಾಗಿದ್ರೆ, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3017572 ಕ್ಕೆ ಏರಿಕೆಯಾಗಿದೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 38,357 ಮಂದಿಯನ್ನು ಕೊರೊನಾ ಹೆಮ್ಮಾರಿ ಬಲಿ ಪಡೆದಿದೆ.
Covid cases nearly double in 24 hours to 4,246. TPR of 3.33%:
— Dr Sudhakar K (@mla_sudhakar) January 5, 2022
◾New cases in State: 4,246
◾New cases in B'lore: 3,605
◾Positivity rate: 3.33%
◾New Omicron cases: NA
◾Total Omicron cases: 226
◾Deaths:02 (B'lore- 02)
◾Tests: 1,27,328#COVID19 #Karnataka @BSBommai
ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೇ ಅತೀ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿದೆ. ಬೆಂಗಳೂರಲ್ಲಿಂದು 3605 ಕೊರೊನಾ ಪ್ರಕರಣ ದಾಖಲಾಗಿದ್ದು, ಈ ಮೂಲಕ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ 1272050 ಕ್ಕೆ ಏರಿಕೆ ಕಂಡಿದೆ. ಸದ್ಯ ಬೆಂಗಳೂರಲ್ಲಿ 14762 ಸಕ್ರೀಯ ಕೊರೊನಾ ಪ್ರಕರಣಗಳಿವೆ. ಬೆಂಗಳೂರಲ್ಲಿಂದು ಇಬ್ಬರು ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 4246 ಜನರಿಗೆ ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಪಾಸಿಟಿವಿಟಿ ದರ ಶೇ.3.33ರಷ್ಟು ಏರಿಕೆಯಾಗಿದೆ. ಬೆಂಗಳೂರಲ್ಲಿ ಪಾಸಿಟಿವಿಟಿ ದರ ಶೇ.6.45% ವರೆಗೆ ಏರಿಕೆಯಾಗಿದೆ. ಅಲ್ಲದೇ ರಾಜ್ಯದಲ್ಲಿ ಇದುವರಗೆ 226 ಓಮಿಕ್ರಾನ್ ಪ್ರಕರಣ ದಾಖಲಾಗಿದೆ.

ಓಮಿಕ್ರಾನ್ ರೂಪಾಂತರಿ ಅಟ್ಟಹಾಸಕ್ಕೆ ದೇಶದಲ್ಲಿ ಮೊದಲ ಬಲಿ
ವೇಗವಾಗಿ ಹರಡುತ್ತಿರುವ ಓಮಿಕ್ರಾನ್ ರೂಪಾಂತರಿಗೆ ರಾಜಸ್ಥಾನದಲ್ಲಿ ಮೊದಲ ಬಲಿಯಾಗಿದ್ದು ಈ ಮೂಲಕ ದೇಶದಲ್ಲಿ ಓಮಿಕ್ರಾನ್ನಿಂದ ಓರ್ವ ಸೋಂಕಿತ ಸಾವನ್ನಪ್ಪಿ ದಂತಾಗಿದೆ ಎಂದು ಫೆಡರಲ್ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು 2135ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ಮಾಹಿತಿ ನೀಡಿದ್ದಾರೆ. ಓಮಿಕ್ರಾನ್ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಕೋವಿಡ್ ವರದಿಯು ಡಿಸೆಂಬರ್ 15ರಂದು ಪಾಸಿಟಿವ್ ಬಂದಿತ್ತು. ಸೋಂಕಿಗೆ ಒಳಗಾದ ವ್ಯಕ್ತಿಯು ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇವರ ಸ್ಯಾಂಪಲ್ಗಳನ್ನು ಜಿನೋಮ್ ಸಿಕ್ವೆನ್ಸಿಂಗ್ಗೆ ಕಳುಹಿಸಲಾಗಿತ್ತು. ಈ ನಡುವೆ ಡಿಸೆಂಬರ್ 21ರಂದು ವ್ಯಕ್ತಿಯ ವರದಿಯು ನೆಗೆಟಿವ್ ಬಂದಿತ್ತು. ಈ ವ್ಯಕ್ತಿಯು ಕೊರೊನಾದ ಎರಡೂ ಡೋಸ್ಗಳನ್ನು ಸ್ವೀಕರಿಸಿದ್ದು ಯಾವುದೇ ಅಂತಾರಾಷ್ಟ್ರೀಯ ಟ್ರಾವೆಲ್ ಹಿಸ್ಟರಿಯನ್ನು ಹೊಂದಿರಲಿಲ್ಲ.
ಆದರೆ ವ್ಯಕ್ತಿಯಲ್ಲಿ ಆರೋಗ್ಯ ಸಮಸ್ಯೆ ಇದ್ದುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದು ಓಮಿಕ್ರಾನ್ ಮೊದಲ ಸಾವು ಎಂದು ರಾಜಸ್ಥಾನದ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.ಜಿನೋಮ್ ಸಿಕ್ವೆನ್ಸಿಂಗ್ ವರದಿಯು ಡಿಸೆಂಬರ್ 25ರಂದು ಬಂದಿದ್ದು ಇದರಲ್ಲಿ ಓಮಿಕ್ರಾನ್ ರೂಪಾಂತರಿ ಪತ್ತೆಯಾಗಿದೆ. ಈ ವ್ಯಕ್ತಿಯು ಡಿಸೆಂಬರ್ 31ರ ಮುಂಜಾನೆ 3:30ರ ಸುಮಾರಿಗೆ ಸಾವನ್ನಪ್ಪಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಹೋಂ ಐಸೋಲೇಷನ್ಗೆ ಪರಿಷ್ಕೃತ ಮಾರ್ಗಸೂಚಿ ರಿಲೀಸ್
ಇದನ್ನೂ ಓದಿ : ಹೋಂ ಐಸೋಲೇಷನ್ಗೆ ಪರಿಷ್ಕೃತ ಮಾರ್ಗಸೂಚಿ ರಿಲೀಸ್
ಇದನ್ನೂ ಓದಿ : ಹೊಸ ರೂಪಾಂತರಿಯ ಹುಟ್ಟಿಗೆ ಕಾರಣವಾಗಲಿದೆ ಓಮಿಕ್ರಾನ್ : ಡಬ್ಲುಹೆಚ್ಓ ಎಚ್ಚರಿಕೆ
(Karnataka Covid-19 Updates : Today 4,246 Corona case )