Sourav Ganguly Family : ಸೌರವ್ ಗಂಗೂಲಿ ಮಗಳು ಸನಾ ಗಂಗೂಲಿ ಮತ್ತು ಕುಟುಂಬದ ಇತರ ಮೂವರು ಸದಸ್ಯರಿಗೆ ಕೋವಿಡ್

ಕೋಲ್ಕತ್ತ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ (BCCI President Sourav Ganguly) ಅವರ ಮಗಳು ಸನಾ ಗಂಗೂಲಿ ( Sana Ganguly) ಹಾಗೂ ಕುಟುಂಬದ ಇತರ ಮೂವರು ಸದಸ್ಯರ (Sourav Ganguly Family) ಕೋವಿಡ್–19 ಸೋಂಕು (Covid 19) ದೃಢಪಟ್ಟಿದೆ. ನಾಲ್ವರಲ್ಲಿಯೂ ತೀವ್ರವಾದ ರೋಗ ಲಕ್ಷಣಗಳು ಕಂಡುಬಂದಿಲ್ಲ, ಐಸೋಲೇಷನ್‌ಗೆ ಒಳಪಟ್ಟಿದ್ದಾರೆ. ಗಂಗೂಲಿ ಅವರ ಪತ್ನಿ ಡೋನಾ ಗಂಗೂಲಿ (Dona Ganguly) ಕೋವಿಡ್ ವರದಿ ನೆಗೆಟಿವ್ ಬಂದಿದೆ ಎಂದು ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಗಂಗೂಲಿ ಅವರ ಹಿರಿಯ ಸಹೋದರ ಸ್ನೇಹಶಿಷ್‌ ಗಂಗೂಲಿ ಅವರಲ್ಲಿಯೂ ಕೋವಿಡ್ ದೃಢಪಟ್ಟಿದೆ. ಇವರು ಬಂಗಾಳ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯೂ ಆಗಿದ್ದಾರೆ. ಮಗಳು ಸನಾಗೆ ಗಂಟಲು ಕಿರಿಕಿರಿಯಾಗಿತ್ತು. ಹೀಗಾಗಿ ಕೋವಿಡ್ ಪರೀಕ್ಷೆ ಮಾಡಿಸಿದ್ದು, ವರದಿ ಪಾಸಿಟಿವ್ ಬಂದಿದೆ ಎಂದು ಡೋನಾ ಗಂಗೂಲಿ ಮಾಹಿತಿ ನೀಡಿದ್ದಾರೆ.

‘ಪತಿಗೆ (ಸೌರವ್ ಗಂಗೂಲಿ) ಸೋಂಕು ದೃಢಪಟ್ಟ ಬಳಿಕ ನಾವೂ ಪ್ರತಿ ದಿನ ಪರೀಕ್ಷೆಗೆ ಒಳಗಾಗುತ್ತಿದ್ದೆವು. ನನ್ನ ವರದಿ ನೆಗೆಟಿವ್ ಬಂದಿದೆ. ಮಗಳಲ್ಲಿ ಸೋಂಕು ದೃಢಪಟ್ಟಿದೆ. ಗಂಗೂಲಿ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಸೌರವ್ ಗಂಗೂಲಿ ಅವರಲ್ಲಿ ಇತ್ತೀಚೆಗಷ್ಟೇ ಕೋವಿಡ್‌ ದೃಢಪಟ್ಟಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಎರಡು ದಿನ ಕೋಲ್ಕತ್ತದ ಖಾಸಗಿ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದಿದ್ದ ಅವರು ಡಿಸೆಂಬರ್ 31ರಂದು ಮನೆಗೆ ಮರಳಿ ಐಸೋಲೇಷನ್‌ನಲ್ಲಿದ್ದರು. ಗಂಗೂಲಿ ಅವರು ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಅವರ ಕುಟುಂಬದವರು ಕೂಡ ಲಸಿಕೆ ಪಡೆದಿದ್ದರು ಎನ್ನಲಾಗಿದೆ.

2021ರ ಜನವರಿಯಲ್ಲಿ ಗಂಗೂಲಿ ಅವರಿಗೆ ಲಘು ಹೃದಯಾಘಾತವಾಗಿತ್ತು. ಬಳಿಕ ಅವರ ಹೃದಯದ ರಕ್ತನಾಳದಲ್ಲಿ ಬ್ಲಾಕ್ ಇರುವುದು ತಿಳಿದುಬಂದಿದ್ದು, ಸ್ಟೆಂಟ್ ಅಳವಡಿಸಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಂದರ್ಭದಲ್ಲಿ ಅವರಿಗೆ ಪುನಃ ಆ್ಯಂಜಿಯೋಪ್ಲಾಸ್ಟಿ ನಡೆಸಿ ಮತ್ತೊಂದು ಸ್ಟೆಂಟ್ ಅಳವಡಿಸಲಾಗಿತ್ತು.

ಗಂಗೂಲಿ ಅವರ ಹಿರಿಯ ಸಹೋದರ 53 ವರ್ಷದ ಸ್ನೇಹಶಿಷ್‌ ಕೂಡ 2021ರ ಆರಂಭದಲ್ಲಿ ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು. 2021ರ ಆಗಸ್ಟ್‌ನಲ್ಲಿ ಆಗಸ್ಟ್‌ನಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಜಠರದ ಸೋಂಕಿನಿಂದ ಬಳಲಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಇದನ್ನೂ ಓದಿ: KL Rahul: ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ 31ನೇ ಸ್ಥಾನಕ್ಕೇರಿದ ಕನ್ನಡಿಗ ಕೆ.ಎಲ್.ರಾಹುಲ್: ಬೂಮ್ರಾ, ಶಮಿಗೂ ಬಡ್ತಿ

ಇದನ್ನೂ ಓದಿ: Duniya Vijay Telugu Film: ನಾನೇಕೆ ತೆಲುಗಿನಲ್ಲಿ ನಟಿಸುತ್ತಿದ್ದೇನೆ? ದುನಿಯಾ ವಿಜಯ್ ಉತ್ತರ ಓದಿ

(BCCI President Sourav Ganguly Family, daughter Sana Ganguly Tested Positive)

Comments are closed.