ಬುಧವಾರ, ಏಪ್ರಿಲ್ 30, 2025
HomekarnatakaKarnataka Digital Media Forum : ಮಾಧ್ಯಮ ಲೋಕದಲ್ಲಿ ಕ್ರಾಂತಿಕಾರಿ ಬದಲಾವಣೆ, ಅಸ್ಥಿತ್ವಕ್ಕೆ ಬಂತು ಕರ್ನಾಟಕ...

Karnataka Digital Media Forum : ಮಾಧ್ಯಮ ಲೋಕದಲ್ಲಿ ಕ್ರಾಂತಿಕಾರಿ ಬದಲಾವಣೆ, ಅಸ್ಥಿತ್ವಕ್ಕೆ ಬಂತು ಕರ್ನಾಟಕ ಡಿಜಿಟಲ್ ಮೀಡಿಯಾ ಫೋರಂ

- Advertisement -

ಬೆಂಗಳೂರು : ಡಿಜಿಟಲ್‌ ಯುಗದಲ್ಲಿ ಮಾಧ್ಯಮ ಲೋಕದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ನೂತನವಾಗಿ ಕರ್ನಾಟಕ ಡಿಜಿಟಲ್‌ ಮೀಡಿಯಾ ಫೋರಂ (Karnataka Digital Media Forum) ಅಸ್ಥಿತ್ವಕ್ಕೆ ಬಂದಿದ್ದು, ಹಿರಿಯ ಪತ್ರಕರ್ತ ಸಮೀವುಲ್ಲಾ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಡಿಜಿಟಲ್ ಮಾಧ್ಯಮ ಮಿತ್ರರ ಸಭೆಯಲ್ಲಿ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ಅಸ್ಥಿತ್ವಕ್ಕೆ ಬಂದಿದೆ.

Karnataka Digital Media Forum 1

ನೂತನ ಅಧ್ಯಕ್ಷರಾದ ಸಮೀವುಲ್ಲಾ ಅವರು ಮಾತನಾಡಿ, ಡಿಜಿಟಲ್ ಮೀಡಿಯಾ ಎಂಬುದು ಪ್ರತಿಯೊಬ್ಬರಿಗೂ ನವಯುಗಕ್ಕೆ ಅವಶ್ಯಕವಾಗಿದ್ದು, ಪ್ರಿಂಟ್ ಹಾಗೂ ಟಿವಿ ಮಾಧ್ಯಮಗಳಿಗಿಂತಲೂ ಪರಿಣಾಮಕಾರಿಯಾಗಿದೆ. ವೀಕ್ಷಕರು ಮತ್ತು ಓದುಗರನ್ನು ಹೆಚ್ಚು ತಲುಪಲು ತನ್ನದೇ ಆದ ಸಾಮರ್ಥ್ಯ ಹೊಂದಿದೆ. ಹೀಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಡಿಜಿಟಲ್ ಮಾಧ್ಯಮಗಳಿಗೆ ಒತ್ತು ನೀಡಿವೆ. ಪಕ್ಕದ ರಾಜ್ಯಗಳಾದ ಆಂದ್ರಪ್ರದೇಶ ಮತ್ತು ತಮಿಳು ನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಡಿಜಿಟಲ್ ಮಾಧ್ಯಮ ಒಕ್ಕೂಟ ಅಸ್ಥಿತ್ವದಲ್ಲಿವೆ ಎಂದಿದ್ದಾರೆ.

Karnataka Digital Media Forum 10

ಕರ್ನಾಟಕದಲ್ಲಿ ಡಿಜಿಟಲ್ ಮಾಧ್ಯಮ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ನಮ್ಮ ಸಂಘಟನೆ ಮಾಧ್ಯಮ ಲೋಕದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವವರ ಹಿತಾಸಕ್ತಿ ಕಾಪಾಡಲು ಬದ್ದವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿರುವುದರಿಂದ ಇದರ ಅಗತ್ಯತೆ ಎಂದಿಗಿಂತಲೂ ಈಗ ಹೆಚ್ಚಿದೆ. ಹೀಗಾಗಿ ಡಿಜಿಟಲ್ ಮಿಡಿಯಾ ಪೋರಮ್ ನೂತನವಾಗಿ ಅಸ್ಥಿತ್ವಕ್ಕೆ ಬಂದಿದ್ದು, ಪತ್ರಿಕೆ ಮತ್ತು ಮಾಧ್ಯಮಗಳಿಗೆ ನೀಡಿರುವಂತೆಯೇ ನಮಗೂ ಮಾನ್ಯತೆ ನೀಡಬೇಕೆಂದು ಮನವಿ ಮಾಡಿದರು.

ಕರ್ನಾಕಟ ಡಿಜಿಟಲ್‌ ಮೀಡಿಯಾ ಫೊರಂ ನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರಾದ ಸಮೀವುಲ್ಲಾ ಬೆಲಗೂರು ಅವರು ಒಮ್ಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಸುನೀಲ್ , ಮತ್ತು ವಸಂತ ಬಿ ಈಶ್ವರಗೆರೆ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶಿವು ಬೆಸಗರಹಳ್ಳಿ ಮತ್ತು ಜಂಟಿ ಕಾರ್ಯದರ್ಶಿಗಳಾಗಿ ರಜನಿ ಹಾಗೂ ಮಲತೇಶ್ ಅರಸ್ ಹರ್ತಿಕೋಟೆ ಮತ್ತು ಖಜಾಂಚಿಯಾಗಿ ಸನತ್ ರೈ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಎಸ್ ರಾಘವೇಂದ್ರ, ಗೌರೀಶ್ ಅಕ್ಕಿ, ವಿಜಯ್ ಭರಮಸಾಗರ, ದರ್ಶನ್ ಆರಾಧ್ಯ, ಪ್ರವೀಣ್ ಏಕಾಂತ, ಅಮರ್ ಪ್ರಸಾದ್, ಅಂಕಿತಾ, ಹರೀಶ್ ಅರಸು ಅವರು ಆಯ್ಕೆಯಾಗಿದ್ದಾರೆ.

ಪತ್ರಿಕೋದ್ಯಮ ಹಾಗು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಎರಡು ದಶಕಗಳ ಅನುಭವ ಇರುವ ಹಿರಿಯ ಪತ್ರಕರ್ತರ ನೇತೃತ್ವದಲ್ಲಿ ಅಸ್ಥಿತ್ವಕ್ಕೆ ಬಂದಿರುವ ಕರ್ನಾಟಕ ಸ್ಟೇಟ್ ಡಿಜಿಟಲ್ ಮಿಡಿಯಾ ಫೋರಮ್ ಮುಂದಿನ ದಿನಗಳಲ್ಲಿ ರಾಜ್ಯದ ಬಹುತೇಕ ಡಿಜಿಟಲ್ ಮಾಧ್ಯಮ ಮಿತ್ರರನ್ನೂ ಒಳಗೊಂಡಂತೆ ದೊಡ್ಡ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದೆ. ಈ ಸಂದರ್ಭದಲ್ಲಿ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ನೂರಾರು ಡಿಜಿಟಲ್ ಮಾದ್ಯಮ ಪತ್ರಕರ್ತರು , ತಂತ್ರಜ್ಞರು ಉಪಸ್ಥಿತರಿದ್ದರು.

Karnataka Digital Media Forum 11
Karnataka Digital Media Forum 7
Karnataka Digital Media Forum 8
Karnataka Digital Media Forum 9

ಇದನ್ನೂ ಓದಿ : Twitter Account Safety: ಮೋದಿಯ ಅಕೌಂಟೇ ಹ್ಯಾಕ್ ಆಯ್ತು! ನಮ್ಮ ನಿಮ್ಮದು? ಟ್ವಿಟರ್ ಅಕೌಂಟ್ ಹ್ಯಾಕ್ ಆಗದಿರಲು ಈ ಸ್ಟೆಪ್ಸ್ ಅನುಸರಿಸಿ

( Karnataka Digital Media Forum)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular