777 Charlie : 777 ಚಾರ್ಲಿ ರಿಲೀಸ್ ಕುರಿತು ತಾಜಾ ಮಾಹಿತಿ; ರಕ್ಷಿತ್ ಶೆಟ್ಟಿ ಅಭಿಮಾನಿಗಳ ಆಸೆ ಈಡೇರುವ ದಿನದ ಬಗ್ಗೆ ಏನಂದ್ರು?

ಡಿಸೆಂಬರ್​ 31ರಂದು ತೆರೆಗೆ ಬರಬೇಕಿದ್ದ ರಕ್ಷಿತ್ ಶೆಟ್ಟಿ (Rakshit Shetty) ಅವರ ಬಹು ನಿರೀಕ್ಷಿತ  ಸಿನಿಮಾ 777 ಚಾರ್ಲಿ ( 777 Charlie) ಕುರಿತು ತಾಜಾ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಡಿಸೆಂಬರ್ ತಿಂಗಳ ಕೊನೆಯ ದಿನ ಚಿತ್ರ ಬಿಡುಗಡೆ ಎಂದು ಘೋಷಿಸಿದ್ದರೂ ಸಹ ಚಿತ್ರ ಬಿಡುಗಡೆ ವಿಳಂಬವಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.  ಅಂದಹಾಗೆ 777 ಚಾರ್ಲಿ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು, ಮಲಯಾಳಂ, ಹಿಂದಿ ಮತ್ತು ತಮಿಳು ಭಾಷೆಗಳಲ್ಲೂ ಬಿಡುಗಡೆ ಆಗಲಿದೆ.

777 ಚಾರ್ಲಿ ಚಿತ್ರ ಸೆಟ್ಟೇರಿ ಶೂಟಿಂಗ್ ಮುಗಿಸಿದೆ.  ಟೀಸರ್, ಪೋಸ್ಟರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಗಿದ್ದು ಅಭಿಮಾನಿಗಳು 777 ಚಾರ್ಲಿಯನ್ನು ಚಿತ್ರಪರದೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಚಿತ್ರದ ಅಂತಿಮ ಹಂತದ ಕೆಲಸಗಳು ವಿಳಂಬವಾಗಿದ್ದು ಚಿತ್ರ ತೆರೆಕಾಣಲು ಇನ್ನೂ ತಡವಾಗಿದೆ ಎಂದು ತಿಳಿದುಬಂದಿದೆ.

ಈಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ರಕ್ಷಿತ್ ಶೆಟ್ಟಿ, ‘777 ಚಾರ್ಲಿಯ ಈ ಸುದೀರ್ಘ ಪಯಣದಲ್ಲಿ ನೀವು ನಮಗೆ ತೋರಿರುವ ಪ್ರೀತಿ ಹಾಗು ಬೆಂಬಲಕ್ಕೆ ನಾವು ಆಭಾರಿ. ನಾವು ಈ ಮೂಲಕ ತಿಳಿಸ ಬಯಸುವುದೇನೆಂದರೆ, ನಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಮೊದಲು ನಿಗದಿಪಡಿಸಲಾಗಿದ್ದ ದಿನಾಂಕವಾದ 31 ಡಿಸೆಂಬರ್ 2021 ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿಲ್ಲ. ಕೆಲವು ವಿಳಂಬಗಳು ಹೊಸದೊಂದು ಅಧ್ಯಾಯಕ್ಕೆ ನಾಂದಿಯಾಗುತ್ತದೆ. ಅತೀ ಶೀಘ್ರದಲ್ಲಿ ಹೊಸ ಪ್ರಕಟಣೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ. ಅಲ್ಲಿಯವರೆಗೂ, ಹರಸಿ.. ಹಾರೈಸಿ’ ಎಂದು ಬರೆದುಕೊಂಡಿದ್ದಾರೆ.

ಸಿಂಪಲ್ ಸ್ಟಾರ್ ಧರ್ಮಸಂಕಟಕ್ಕೆ ಸಖತ್ ಬೇಡಿಕೆ : ಸೂಪರ್‌ ಹಿಟ್‌ ಆಯ್ತು ಟಾರ್ಚರ್ ಸಾಂಗ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಹುಭಾಷೆಯಲ್ಲಿ ತೆರೆ ಕಾಣಲಿದ್ದು, ಸಿನಿಮಾ ರಿಲೀಸ್ ಗೂ ಮುನ್ನವೇ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ರಿಲೀಸ್ ಆಗಿರೋ ಹಾಡು ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆಯುತ್ತಿದೆ. 777 ಚಾರ್ಲಿ ಸಿನಿಮಾದ ಹಾಡು ಗೌರಿಗಣೇಶ್ ಹಬ್ಬದ ವೇಳೆ ರಿಲೀಸ್ ಆಗಿದ್ದು, ರಿಲೀಸ್ ಆದ ಒಂದೇ ವಾರದಲ್ಲಿ ವೀಕ್ಷಣೆಯಲ್ಲಿ ದಾಖಲೆ ಬರೆದಿತ್ತು.

ಕಥಾನಾಯಕ ಧರ್ಮನ ಪಾತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದು, ನಾಯಿ ಮತ್ತು ಮನುಷ್ಯನ ಬಾಂಧವ್ಯವನ್ನು ಹೇಳಲು ಹೊರಟಿದೆ ಸಿನಿಮಾ. ಬಿಡುಗಡೆಯಾಗಿರೋ ಟಾರ್ಚರ್ ಹಾಡಿನಲ್ಲಿ ಧರ್ಮನಿಗೆ ನಾಯಿ ಕೊಡೋ ಕಾಟ ಸಖತ್ತಾಗಿ ಮೂಡಿಬಂದಿದ್ದು, ಶ್ವಾನ ಪ್ರಿಯರ ಮನಗೆದ್ದಿದೆ.

ಇದನ್ನೂ ಓದಿ: Twitter Account Safety : ಮೋದಿಯ ಅಕೌಂಟೇ ಹ್ಯಾಕ್ ಆಯ್ತು! ನಮ್ಮ ನಿಮ್ಮದು? ಟ್ವಿಟರ್ ಅಕೌಂಟ್ ಹ್ಯಾಕ್ ಆಗದಿರಲು ಈ ಸ್ಟೆಪ್ಸ್ ಅನುಸರಿಸಿ

ಇದನ್ನೂ ಓದಿ : ಸಿನಿಪ್ರಿಯರಿಗೆ ಇಲ್ಲಿದೆ ಭರ್ಜರಿ ಆಫರ್: ಹಾರರ್ ಸಿನಿಮಾ ನೋಡಿ ಬಹುಮಾನ ಗೆಲ್ಲಿ

( Rakshit Shetty announce 777 Charlie Movie Not releasing on December 31st)

Comments are closed.