Arvind Kejriwal’s Hindutva plea : ಗುಜರಾತ್ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಧಾನಿ ಮೋದಿ ಹಿಂದುತ್ವ ಅಸ್ತ್ರವನ್ನೇ ಬಳಸಿಕೊಂಡು ಗುಜರಾತ್ ಜನತೆಯ ಮನ ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಇದಕ್ಕೆ ಮೊದಲ ಹೆಜ್ಜೆ ಎಂಬಂತೆ ಅರವಿಂದ ಕೇಜ್ರಿವಾಲ್ ನಿನ್ನೆ ಕರೆನ್ಸಿ ನೋಟುಗಳಲ್ಲಿ ಗಾಂಧೀಜಿ ಫೊಟೋದ ಜೊತೆಯಲ್ಲಿ ಲಕ್ಷ್ಮೀ ಹಾಗೂ ಗಣಪತಿ ದೇವರ ಪೋಟೋವನ್ನು ಹಾಕಬೇಕು ಎಂದು ಆಗ್ರಹಿಸಿದ್ದರು. ಅಲ್ಲದೇ ಈ ಸಂಬಂಧ ತಾವು ಪ್ರಧಾನಿ ಮೋದಿಗೆ ಮನವಿ ಮಾಡೋದಾಗಿ ಕೂಡ ಹೇಳಿದ್ದರು. ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಭಾರತೀಯ ಕರೆನ್ಸಿ ನೋಟುಗಳ ಮೇಲೆ ದೇವರ ಫೋಟೋವನ್ನು ಮುದ್ರಿಸಬೇಕು ಎಂಬ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ರ ಈ ಆಗ್ರಹವನ್ನು ಆ ದಿನಗಳು ಖ್ಯಾತಿಯ ನಟ ಚೇತನ ಅಂಹಿಸಾ ವಿರೋಧಿಸಿದ್ದಾರೆ.
ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ ನಟ ಚೇತನ್ ಅಂಹಿಸಾ ಎಎಪಿ ಪಕ್ಷದ ಮುಕ್ಯಸ್ಥರಾದ ಅರವಿಂದ ಕೇಜ್ರಿವಾಲ್ ಅವರು ಬ್ಯಾಂಕ್ ನೋಟುಗಳ ಮೇಲೆ ಗಣೇಶ ಹಾಗೂ ಲಕ್ಷ್ಮೀ ಫೋಟೋಗಳನ್ನು ಮುದ್ರಿಸಿ ಎಂದು ಆಗ್ರಹ ನೀಡಿದ್ದಾರೆ. ಇದರಿಂದ ದೇಶದ ಆರ್ಥಿಕತೆ ಸುಧಾರಿಸುತ್ತದೆ ಎಂದು ಕೂಡಾ ವಾದಿಸಿದ್ದಾರೆ. ಎಷ್ಟು ಅಸಂಬದ್ಧವಾದ ಹೇಳಿಕೆ!
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) October 26, 2022
ಇಂತಹ ಅಸಾಂವಿಧಾನಿಕ ಮೂಢನಂಬಿಕೆ ಮೌಢ್ಯಗಳ ಹೇರಿಕೆಯನ್ನು ಕೇಜ್ರಿವಾಲ್ ಅವರು ನಿಲ್ಲಿಸಬೇಕು. ಕರ್ನಾಟಕದಲ್ಲಿ ಈಗಾಗಲೇ ಹಲವಾರು ಬ್ರಾಹ್ಮಣ್ಯರ ಪಕ್ಷಗಳಿವೆ. ಇನ್ನೊಂದರ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಬಿಜೆಪಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ಪಂಜಾಬ್ನಲ್ಲಿ ರೈತ ಪರವಾಗಿ ನಿಂತು ವಿಧಾನಸಭಾ ಚುನಾವಣೆಯನ್ನು ಗೆದ್ದಿರುವ ಆಮ್ ಆದ್ಮಿ ಪಕ್ಷವು ಹಿಂದುತ್ವ ಅಜೆಂಡಾವನ್ನೇ ಬಳಸಿಕೊಂಡು ಗುಜರಾತ್ ವಿಧಾನಸಭಾ ಚುನಾವಣೆಯನ್ನು ಗೆಲ್ಲುವ ಪ್ಲಾನ್ನಲ್ಲಿದೆ. ಇದೇ ಕಾರಣದಿಂದಾಗಿ ನಿನ್ನೆ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರೆನ್ಸಿ ನೋಟುಗಳಲ್ಲಿ ಮಹಾತ್ಮಾ ಗಾಂಧಿ ಫೋಟೋದ ಜೊತೆಯಲ್ಲಿ ಲಕ್ಷ್ಮೀ ಹಾಗೂ ಗನೇಶ ದೇವರ ಫೊಟೋವನ್ನು ಹಾಕಬೇಕು. ಇಂಡೋನೇಷ್ಯಾ ಒಂದು ಮುಸ್ಲಿಂ ರಾಷ್ಟ್ರವಾಗಿದ್ದರೂ ಕೂಡ ಅಲ್ಲಿನ ಕರೆನ್ಸಿಗಳಲ್ಲಿ ಗಣೇಶನ ಫೋಟೋವಿದೆ. ಭಾರತವು ಹಿಂದೂ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ನಮ್ಮಲ್ಲಿ ಯಾಕೆ ಈ ರೀತಿ ಕ್ರಮ ಕೈಗೊಳ್ಳಬಾರದು..? ಎಂದು ಪ್ರಶ್ನಿಸಿದ್ದರು.
ಇದನ್ನು ಓದಿ : Delhi CM: ಹಿಂದುತ್ವ ಅಜೆಂಡಾ: ಪ್ರಧಾನಿ ಮೋದಿಗೆ ದೆಹಲಿ ಸಿಎಂ ಕೇಜ್ರಿವಾಲ್ ಮನವಿ ಮಾಡಿದ್ದೇನು
ಇದನ್ನೂ ಓದಿ : Mangaluru Airport : ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆಎಸ್‌ಆರ್ ಟಿಸಿ ಬಸ್ ಸಂಚಾರ ಪುನರಾರಂಭ
‘Karnataka does not need another Brahmin party’: Chetan Amhisa’s response to Arvind Kejriwal’s Hindutva plea