Mangaluru Airport : ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆಎಸ್‌ಆರ್‌ ಟಿಸಿ ಬಸ್‌ ಸಂಚಾರ ಪುನರಾರಂಭ

ಮಂಗಳೂರು : (Mangaluru Airport) ಮಂಗಳೂರು ನಗರದಲ್ಲಿಯೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಆದ್ರೆ ಅಲ್ಲಿ ತೆರಳಬೇಕೆಂದ್ರ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗಬೇಕು. ಮಂಗಳೂರು ನಗರದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Mangaluru Airport)ಕ್ಕೆ ಬಸ್ ಸೇವೆ ಆರಂಭಿಸುವ ಕುರಿತು ಸಾರ್ವಜನಿಕರು ಸಾಕಷ್ಟು ಬಾರಿ ಆಗ್ರಹಿಸಿದ್ದಾರೆ. ಕೊನೆಗೂ ಎಚ್ಚೆತ್ತುಕೊಂಡಿರುವ ಕೆಎಸ್ಆರ್ಟಿಸಿ ಮಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಬಸ್ ಸೇವೆಯನ್ನು ಆರಂಭಿಸಿದೆ.

ವಿಮಾನ ನಿಲ್ದಾಣ(Mangaluru Airport)ಕ್ಕೆ ಹೋಗಬೇಕೆಂದರೆ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗಬೇಕಾಗಿತ್ತು, ಇಲ್ಲವೆ ತಮ್ಮ ವೈಯಕ್ತಿಕ ವಾಹನಗಳ ಮೂಲಕ ತೆರಳಬೇಕಾಗಿತ್ತು. ಇದರಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿತ್ತು.ಆದ್ದರಿಂದ ಪ್ರಯಾಣಿಕರು ಕೆ ಎಸ್‌ ಆರ್‌ ಟಿ ಸಿ ಬಸ್‌ ಸಂಚಾರವನ್ನು ಮತ್ತೆ ಆರಂಭಿಸುವಂತೆ ಸಾರಿಗೆ ಇಲಾಖೆಗೆ ಒತ್ತಾಯಿಸಿದ್ದರು . ಇದೀಗ ರಾಜ್ಯ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರ ನಿರ್ದೇಶನದ ಮೇರೆಗೆ ಪ್ರಯಾಣಿಕರ ಮನವಿಗೆ ಸ್ಪಂದಿಸಿ ಮತ್ತೆ ಬಸ್‌ ಸಂಚಾರವನ್ನು ಆರಂಭಿಸಲಾಗುತ್ತಿದೆ .

ಇದನ್ನೂ ಓದಿ : Archana Joyis Photoshoot : ದೀಪಾವಳಿ ಪ್ರಯುಕ್ತ ಹೊಸ ಫೋಟೋಶೂಟ್ – ಬೆಳಕಿನ ನಡುವೆ ಕಂಗೊಳಿಸಿದ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್

ಇದನ್ನೂ ಓದಿ : Insomnia : ನಿದ್ರಾಹೀನತೆ ನಿಮ್ಮನ್ನು ಕಾಡುತ್ತಿದೆಯೇ ? ಹಾಗಿದ್ದರೆ ಹೀಗೆ ಮಾಡಿ

ಕೆಲವು ವರ್ಷಗಳ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಬಸ್‌ ಸೇವೆಗಳು ಸಾಕಷ್ಟು ಪ್ರಮಾಣದ ಆದಾಯವಿಲ್ಲ ಎಂಬ ಕಾರಣಕ್ಕೆ ಸ್ಥಗಿತಗೊಂಡಿದ್ದವು . ಇದರಿಂದಾಗಿ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿತ್ತು. ಆದರೆ ಇದೀಗ ಪ್ರಯಾಣಿಕರ ಮನವಿಗೆ ಸ್ಪಂದಿಸಿದ ರಾಜ್ಯಸಾರಿಗೆ ಸಚಿವ ರಾಮುಲು ಅವರ ನಿರ್ದೇಶನದ ಮೇರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ( ಕೆ ಎಸ್‌ ಆರ್‌ ಟಿ ಸಿ ) ಇಂದಿನಿಂದ ( ಗುರುವಾರದಿಂದ ) ಬಸ್‌ ಸಂಚಾರವನ್ನು ಪುನಃ ಆರಂಭಿಸುತ್ತಿದೆ . ಬಿಜೈ ಟರ್ಮಿನಸ್‌ ನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್‌ ಸೇವೆಗಳು ಪುನರಾರಂಭವಾಗಲಿವೆ . ಉಡುಪಿಯ ಮಣಿಪಾಲದಿಂದ ಮತ್ತೊಂದು ಬಸ್‌ ಕಾವೂರು ಮೂಲಕವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದೆ ಎಂದು ಕೆ ಎಸ್‌ ಆರ್‌ ಟಿ ಸಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ : A hat-trick hero : ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಮಿಂಚಲಿದ್ದಾರೆ ಹ್ಯಾಟ್ರಿಕ್ ಹೀರೋ ; ತೆಲುಗು ನಿರ್ದೇಶಕ ಕಾರ್ತಿಕ್ ಅದ್ವೈತ್ ಚಿತ್ರಕ್ಕೆ ಗ್ರೀನ್ ಸಿಗ್ನಲ್

ಲಾಲ್‌ ಬಾಗ್‌, ಕುಂಟಿಕಾನ್‌ -ಕಾವೂರು ಮಾರ್ಗದಲ್ಲಿ ಬೆಳಿಗ್ಗೆ 6.30ಕ್ಕೆ ಬಸ್‌ ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರಿಗೆ 100 ರೂ ದರವನ್ನು ನಿಗದಿಪಡಿಸಲಾಗಿದೆ. ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು 300 ರೂ ದರವನ್ನು ನಿಗದಿಪಡಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಲ್ಲದೆ, ಇತರ ಪ್ರಯಾಣಿಕರು ಕೂಡ ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದಾಗಿದೆ.

(Mangaluru Airport) There is an international airport in Mangaluru city itself. But to go there, passengers have to resort to private vehicles. Many times the public has demanded to start a bus service from Mangaluru city to the international airport (Mangaluru Airport). KSRTC has finally woken up and started bus service from Mangalore city to the airport.

Comments are closed.