ಸೋಮವಾರ, ಏಪ್ರಿಲ್ 28, 2025
HomekarnatakaKarnataka New CM : ಚುನಾವಣೆಯ ನೆಪ : ವೈಫಲ್ಯಕ್ಕೆ ಬೊಮ್ಮಾಯಿ ತಲೆದಂಡ : ರಾಜ್ಯಕ್ಕೆ...

Karnataka New CM : ಚುನಾವಣೆಯ ನೆಪ : ವೈಫಲ್ಯಕ್ಕೆ ಬೊಮ್ಮಾಯಿ ತಲೆದಂಡ : ರಾಜ್ಯಕ್ಕೆ ಮತ್ತೆ ಹೊಸ ಸಿಎಂ

- Advertisement -

ಬೆಂಗಳೂರು : (Karnataka New CM) ರಾಜ್ಯದಲ್ಲಿ ಸಣ್ಣದಾಗಿ ಆರಂಭಗೊಂಡಿದ್ದ ಸಿಎಂ ಬದಲಾವಣೆ ವಿಚಾರ ಕೂಗು ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿ ಮರಳುತ್ತಿದ್ದಂತೆ ಬೊಮ್ಮಾಯಿ ಬದಲಾವಣೆ ಬಹುತೇಕ ಖಚಿತ ಎಂಬ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಖಚಿತ ಎಂಬಂಥ ಸ್ಥಿತಿ ಇದ್ದು, ಇನ್ನೊಂದೆಡೆ ಕಾಂಗ್ರೆಸ್ ಸರಣಿ ಟ್ವೀಟ್ ಗಳ ಮೂಲಕ ಸಿಎಂ ಬದಲಾವಣೆ ಖಚಿತ ಮೂರನೇ ಸಿಎಂ ಕಾಲ ಎಂದು ವ್ಯಂಗ್ಯವಾಡಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿಫಲ ರಾಗಿದ್ದಾರೆ ಎಂಬ ಮಾತು ಜೋರಾಗಿಯೇ ಕೇಳಿಬಂದಿದೆ. ಹೀಗಾಗಿ ಬಿಜೆಪಿ ವಲಯದಲ್ಲಿಯೇ ಸಿಎಂ ಬದಲಾವಣೆ ಮಾತು ಕೇಳಿಬಂದಿದೆ. ಮುಂದಿನ ಚುನಾವಣೆಯ ದೃಷ್ಟಿಯಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋದರೇ ಪಕ್ಷ ಬಹುಮತ ಪಡೆಯೋದು ಅನುಮಾನ. ಬೊಮ್ಮಾಯಿ ನೀರಿಕ್ಷಿತ ಪ್ರಮಾಣದಲ್ಲಿ ಜನಬೆಂಬಲವನ್ನಾಗಲಿ ಅಥವಾ ಶಾಸಕರ ಮೆಚ್ಚುಗೆಯನ್ನಾಗಲಿ ಗಳಿಸುವಲ್ಲಿ ಸಫಲವಾಗಿಲ್ಲ. ಹೀಗಾಗಿ ಚುನಾವಣೆಯ ಸಮಯ ಸಮೀಪಿಸುತ್ತಿರುವುದರಿಂದ ಪಕ್ಷ ಸಂಘ ನೆಯ ದೃಷ್ಟಿಯಿಂದ ಸಿಎಂ ಬದಲಾವಣೆ ಅನಿವಾರ್ಯ ಎಂದು ಬಿಜೆಪಿ ನಾಯಕರೇ ಅಭಿಪ್ರಾಯಿಸಿದ್ದಾರಂತೆ.

ಹೀಗಾಗಿ ಮುಂದಿನ ವಾರದ ವೇಳೆಗೆ ಸಿಎಂ ಬೊಮ್ಮಾಯಿ ರಾಜೀನಾಮೆ ನೀಡೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಆದರೆ ಬಿಜೆಪಿ ನಾಯಕರಾದ ಆರ್.ಅಶೋಕ್, ಆಶ್ವತ್ಥ ನಾರಾಯಣ್, ಉಮೇಶ್ ಕತ್ತಿ, ರೇಣುಕಾಚಾರ್ಯ ಸೇರಿದಂತೆ ಹಲವರು ಸಿಎಂ ಬದಲಾವಣೆ ಕೇವಲ ವದಂತಿ ಎನ್ನುತ್ತಿದ್ದಾರೆ. ಇನ್ನು ಬಿಜೆಪಿಯ ಈ ಆಂತರಿಕ ಬೆಳವಣಿಗೆಯ ಬಗ್ಗೆ ಕಾಂಗ್ರೆಸ್ ಪುಂಖಾನುಪುಂಕವಾಗಿ ಟ್ವೀಟ್ ಮಾಡಿದ್ದು, ಎಷ್ಟೇ ಪ್ರಯತ್ನಿಸಿದರೂ ಜನತಾ ಪರಿವಾರದವರನ್ನು ಸಂಘ ಪರಿವಾರಿಯಾಗಿ ಸ್ವೀಕರಿಸಲು ಒಪ್ಪಲೇ ಇಲ್ಲ.

ಆಡಿಸಿ ನೋಡು ಬೀಳಿಸಿ ನೋಡು ಎಂಬಂತಿದ್ದ ಸಿಎಂರನ್ನು ಈಗ ಬಿಜೆಪಿ ಬದಲಾಯಿಸಲು ಹೊರಟಿದೆ. ಇದು ನಿಮ್ಮ ವೈಫಲ್ಯಕ್ಕೋ ಅಥವಾ ಸಿಎಂ ಬದಲಾವಣೆಯ ಸಂಪ್ರದಾಯಕ್ಕೋ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಅಲ್ಲದೇ ಸಿಎಂ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಕತ್ತಿ ವರಸೆ ಆರಂಭವಾಗಿದೆ ಎಂದು ಕೂಡ ಕಾಂಗ್ರೆಸದ ವ್ಯಂಗ್ಯವಾಡಿದ್ದು, ನೀವು ಸಿಎಂ ಸ್ಥಾನದಿಂದ ಕೆಳಗೆ ಇಳಿಯಲು ದಿನಗಳನ್ನಲ್ಲ ಗಂಟೆಗಳನ್ನು ಎಣಿಸುತ್ತಿದ್ದೀರಿ ಎಂದು ಕಾಂಗ್ರೆಸ್ ಟಾಂಟ್ ನೀಡಿದೆ. ಮೂಲಗಳ ಮಾಹಿತಿ ಪ್ರಕಾರ ಸಿಎಂಗೂ ಈಗಾಗಲೇ ರಾಜೀನಾಮೆಗೆ ಸೂಚನೆ ನೀಡಲಾಗಿದೆಯಂತೆ. ಇದನ್ನು ಜೀರ್ಣಿಸಿಕೊಂಡು ರಾಜೀನಾಮೆಗೆ ಸಜ್ಜಾಗಲೆಂದೇ ಸಿಎಂ ಬೊಮ್ಮಾಯಿ ಕೊರೋನಾ ಕಾರಣ ನೀಡಿ ಮನೆಯಲ್ಲೇ ಉಳಿದುಕೊಂಡಿದ್ದಾರಂತೆ. ಒಟ್ಟಿನಲ್ಲಿ ಸದ್ಯದಲ್ಲೇ ಬಿಜೆಪಿ ತನ್ನ ಸಂಪ್ರದಾಯದಂತೆ ಸಿಎಂ ಬದಲಾವಣೆಗೆ ಸಿದ್ಧವಾಗ್ತಿದ್ದು, ಮುಂದಿನ ಚುನಾವಣೆ ಹೆಸರಿನಲ್ಲಿ ರಾಜ್ಯ ಒಂದೇ ಅವಧಿಯ ಸರ್ಕಾರದ ಮೂರನೇ ಸಿಎಂ ದರ್ಶನಕ್ಕೆ ಸಿದ್ಧವಾಗಬೇಕಿದೆ.

ಇದನ್ನೂ ಓದಿ : Siddaramaiah Congress PM candidate : ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ : ಪ್ರಧಾನಿ ಅಭ್ಯರ್ಥಿಯಾಗಿ ಸಿದ್ಧರಾಮಯ್ಯ

ಇದನ್ನೂ ಓದಿ : Siddramautsav program : ಸಿದ್ದರಾಮೋತ್ಸವದಿಂದ ನಡುಕ ಶುರುವಾಗಿದ್ದು ಬಿಜೆಪಿಗಲ್ಲ, ಕಾಂಗ್ರೆಸ್ಸಿಗರಿಗೆ : ಡಾ.ಸಿ.ಎನ್​ ಅಶ್ವತ್ಥ ನಾರಾಯಣ

Karnataka Election 2023 CM Basavaraj Bommai Failure, Karnataka New CM

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular