Aishwarya : ತಂದೆಗಾಗಿ ಮತಕೇಳದೇ ರಾಜ್ಯಕ್ಕಾಗಿ ಮತದಾನ ಮಾಡಿ ಎಂದ ಡಿ.ಕೆ.ಶಿವಕುಮಾರ್ ಪುತ್ರಿ‌ ಐಶ್ವರ್ಯಾ ವಿಡಿಯೋ ವೈರಲ್

ಬೆಂಗಳೂರು : ರಾಜ್ಯದಲ್ಲಿ ಮತದಾನ (Karnataka Election 2023) ಪ್ರಕ್ರಿಯೆಗೆ ದಿನಗಣನೆ ನಡೆದಿದೆ. ಪ್ರಚಾರದ ಭರಾಟೆ ಜೋರಾಗಿದೆ. ಕಣದಲ್ಲಿರೋ ಅಭ್ಯರ್ಥಿಯ ಪರ ಕುಟುಂಬಸ್ಥರು, ಬಂಧುಗಳು ,ಸ್ನೇಹಿತರು, ಸ್ಟಾರ್ ಗಳು ಹೀಗೆ ಎಲ್ಲರೂ ಪ್ರಚಾರ ನಡೆಸಿ ಮತಕೇಳ್ತಿದ್ದಾರೆ. ಆದರೆ ಕರ್ನಾಟಕದ ಖ್ಯಾತ ರಾಜಕಾರಣಿಯ ಮುದ್ದಿನ ಪುತ್ರಿ ಐಶ್ವರ್ಯಾ (Aishwarya) ಮಾತ್ರ ತಂದೆಯ ಪರವೂ ಮತ ಕೇಳದೇ , ಕೇವಲ ಮತದಾನ ಜಾಗೃತಿ ಮೂಡಿಸೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ರಾಜ್ಯದ ಪ್ರಭಾವಿ ರಾಜಕಾರಣಿ ಡಿ.ಕೆ.ಶಿವಕುಮಾರ್. ಸದ್ಯ ಸಿಎಂ ರೇಸ್ ನಲ್ಲಿರೋ ಡಿ.ಕೆ.ಶಿವಕುಮಾರ್ ರಾಜ್ಯದಾದ್ಯಂತ ಅಬ್ಬರದ ಪ್ರಚಾರ ನಡೆಸಿದ್ದಾರೆ. ಅವರ ಪತ್ನಿ ಉಷಾ,ಪುತ್ರ ಸೇರಿದಂತೆ ಎಲ್ಲರೂ ಅದ್ದೂರಿ ಪ್ರಚಾರ ನಡೆಸಿ ಕನಕಪುರದಲ್ಲಿ ಮನೆ ಮನೆಗೂ ಹೋಗಿ ಮತ ಕೇಳ್ತಿದ್ದಾರೆ. ಆದರೆ ಡಿಕೆಶಿ ಹಿರಿಯ ಪುತ್ರಿ ಹಾಗೂ ಕಾಫಿ ಉದ್ಯಮಿ ದಿ.ಸಿದ್ಧಾರ್ಥ್ ಹೆಗಡೆ ಸೊಸೆ ಐಶ್ವರ್ಯಾ ಡಿಕೆ ಹೆಗಡೆ ಮಾತ್ರ ವಿಭಿನ್ನತೆ ಮೆರೆದು ಅಚ್ಚರಿ ಮೂಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಐಶ್ವರ್ಯಾ, ಡಿ.ಕೆ.ಶಿವಕುಮಾರ್ ಒಡೆತನದ ಹಿಲ್ಸ್ ವೀವ್ಹ್ ರೆಸಿಡೆನ್ಸಿಯಲ್ ಸ್ಕೂಲ್‌ನ ಜವಾಬ್ದಾರಿ ಹೊತ್ತಿದ್ದಾರೆ. ಎಳೆ ವಯಸ್ಸಿನಲ್ಲೇ ಯುವ ಉದ್ಯಮಿಯಾಗಿ‌ ಗುರುತಿಸಿಕೊಂಡಿರೋ ಐಶ್ವರ್ಯಾ ಚುನಾವಣಾ ಪ್ರಕ್ರಿಯೆ ಹಾಗೂ ಮತದಾನದ ಬಗ್ಗೆ ಮಹತ್ವದ ಸಂದೇಶ ನೀಡಿದ್ದಾರೆ.

ಯಾವ ಹಿರೋಯಿನ್ ಕಡಿಮೆ ಇಲ್ಲದಂತ ಸೌಂದರ್ಯ ಹಾಗೂ ಬುದ್ಧಿವಂತಿಕೆ ಹಾಗೂ ವ್ಯವಹಾರ ಕೌಶಲ್ಯ ಹೊಂದಿದ ಐಶ್ವರ್ಯಾ (Aishwarya) , ಮತದಾನ ಮಾಡಿ ಎಂಬ ಸಂದೇಶ ನೀಡಿದ್ದಾರೆಯೇ ಹೊರತು ತಂದೆ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ ಎಂದು ಮನವಿ ಮಾಡಿಲ್ಲ. ದೇಶದ ದೊಡ್ಡ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ದೇಶದ ಎಕಾನಮಿಗೆ ರಾಜ್ಯದ ಕೊಡುಗೆ ದೊಡ್ಡದಿದೆ. ಜಿಡಿಪಿಯಲ್ಲಿ ರಾಜ್ಯದ ಕೊಡುಗೆ‌ ದೊಡ್ಡದಿದೆ. 8% ಜಿಡಿಪಿ ಕರ್ನಾಟಕದಿಂದ ಜನರೇಟ್ ಆಗುತ್ತೆ. 8% ಅಂದ್ರೆ 13.26 ಲಕ್ಷ ಕೋಟಿ ರೂಪಾಯಿ.

ಹೀಗಾಗಿ 13.26 ಲಕ್ಷ ಕೋಟಿ ರೂಪಾಯಿಯನ್ನು ನಿರ್ವಹಿಸಲು ಯಾವ ಪಕ್ಷ ಅಧಿಕಾರಕ್ಕೆ ಬರಬೇಕು. ಯಾವ ಸರ್ಕಾರಕ್ಕೆ ಅಧಿಕಾರ ಕೊಡಬೇಕು ಎಂಬುದನ್ನು ಆಯ್ಕೆ ಮಾಡಲು ನಾವು ಮೇ 10 ರಂದು ಮತದಾನ ಮಾಡಲೇಬೇಕೆಂದು ಐಶ್ವರ್ಯಾ ಜನರನ್ನು ಮನವಿ ಮಾಡಿದ್ದಾರೆ. ಡಿಕೆಶಿಯವರ ಅಕ್ರಮ ಆಸ್ತಿ ಗಳಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಐಶ್ವರ್ಯಾ ಹೆಸರು ಕೂಡ ಇದ್ದು, ಹಲವು ಪ್ರಕರಣಗಳಲ್ಲಿ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಸ್ವತಃ ಕಾಂಗ್ರೆಸ್ ಪಕ್ಷದ ಅಭಿಮಾನಿಯಾಗಿರುವ ಐಶ್ವರ್ಯಾ ಕಳೆದ ಭಾರಿ ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದಾಗ ಅವರನ್ನು ಭೇಟಿ ಮಾಡಿದ್ದರು.

ಹೀಗಿದ್ದರೂ ಕೂಡ ಐಶ್ವರ್ಯಾ ಯಾವುದೇ ಪಕ್ಷವನ್ನು ಹೀಗೆಳೆಯದೇ, ತಂದೆಯನ್ನು ಅಥವಾ ಕಾಂಗ್ರೆಸ್ ನ್ನು ಬೆಂಬಲಿಸುವಂತೆ ಮನವಿ ಮಾಡದೇ, ನಿಮ್ಮ ಇಷ್ಟದ ಅಭ್ಯರ್ಥಿಗೆ ಮತದಾನ ಮಾಡಿ. ಮತ ಹಾಕಲು ಮರೆಯಬೇಡಿ ಎಂದಷ್ಟೆ ಹೇಳಿರೋದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು ಐಶ್ವರ್ಯಾ ವಿಡಿಯೋ ಈಗ ವೈರಲ್ ಆಗಿದೆ.

ಇದನ್ನೂ ಓದಿ :ಸಿಲಿಕಾನ್‌ ಸಿಟಿಯಲ್ಲಿ ನಮೋಗೆ ಹೂಮಳೆ : ಹೇಗಿತ್ತು ಬೆಂಗಳೂರಲ್ಲಿ ಮೋದಿ ರೋಡ್‌ ಶೋ

ಇದನ್ನೂ ಓದಿ : ವಿಷಕಂಠನ ಸನ್ನಿಧಿಯಲ್ಲಿ ನಮೋ : ಪ್ರಧಾನಿ ಪ್ರದೋಷ ಪೂಜೆಯ ವಿಶೇಷತೇ ಏನು ಗೊತ್ತಾ ?

Comments are closed.