ಕರ್ನಾಟಕ ಚುನಾವಣೆ : ಬಿಜೆಪಿ ಸೋಲಿಗೆ ಈ 18 ಕಾರಣಗಳು

ಬೆಂಗಳೂರು : ( Karnataka Election )ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಬಹುತೇಕ ಪೂರ್ಣಗೊಂಡಿದೆ. ರಾಜ್ಯದಲ್ಲಿ ಅಡಳಿತರೂಢ ಬಿಜೆಪಿ ಹೀನಾಯ ಸೋಲು ಕಂಡಿದೆ. ಕಾಂಗ್ರೆಸ್‌ ಪಕ್ಷ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಿದೆ. ಅಷ್ಟಕ್ಕೂ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣಗಳ ಕುರಿತು ಹಲವು ಚರ್ಚೆಗಳು ನಡೆಯುತ್ತಿವೆ. ನಿಜಕ್ಕೂ ಬಿಜೆಪಿ ಸೋಲಿಗೆ ಕಾರಣವಾಗಿರುವ ಅಂಶಗಳು ಯಾವುವು ಅನ್ನೋದನ್ನು ನೋಡೋದಾದ್ರೆ.

1. Karnataka Election 2 : ಅತಿಯಾದ ಆತ್ಮವಿಶ್ವಾಸ :

ರಾಜ್ಯದಲ್ಲಿ ಬಿಜೆಪಿ ಸರಕಾರದ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸರಕಾರದ ವಿರುದ್ದ ದುರಾಡಳಿತದ ಆರೋಪ ಕೇಳಿಬಂದಿತ್ತು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಅನ್ನೋ ಬಿಜೆಪಿ ನಾಯಕರ ಅತಿಯಾದ ಆತ್ಮವಿಶ್ವಾಸವೇ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿದೆ.

2. ಹೈಕಮಾಂಡ್ ನಾಯಕರ ಮೇಲೆ ಅತಿಯಾದ ಅವಲಂಬನೆ :

ಕರ್ನಾಟಕದ ಚುನಾವಣೆಯ ಟಿಕೆಟ್‌ ಹಂಚಿಕೆ, ಚುನಾವಣೆಯ ತಾಲೀಮು ಎಲ್ಲವೂ ಕರ್ನಾಟಕದಲ್ಲಿಯೇ ನಡೆಯುತ್ತಿತ್ತು. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿಯೇ ಎಲ್ಲವೂ ನಡೆಯುತ್ತಿತ್ತು. ಆದ್ರೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬರುತ್ತಲೇ ಹೈಕಮಾಂಡ್‌ ಪದ್ದತಿ ಶುರುವಾಗಿತ್ತ. ಯಾವುದೇ ನಿರ್ಧಾರ ಕೈಗೊಳ್ಳಲು ಹೈಕಮಾಂಡ್‌ ಸಮ್ಮತಿ ಅತ್ಯಗತ್ಯವಾಗಿತ್ತು. ಆದರೆ ಇದು ಕರ್ನಾಟಕದ ಮಟ್ಟಿಗೆ ಬಾರೀ ಹೊಡೆತವನ್ನು ಕೊಟ್ಟಿತ್ತು. ಚುನಾವಣೆ ಘೋಷಣೆಯಾದ ನಂತರದಲ್ಲಿ ಟಿಕೆಟ್‌ ಘೋಷಣೆ ಮಾಡಿರುವುದು ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿದೆ.

3. ರಾಜ್ಯದಲ್ಲಿ ಕೈ ಹಿಡಿಯದ ನಮೋ ವರ್ಚಸ್ಸು, ನಮೋ ರೋಡ್ ಶೋಗಳು

ಈ ಬಾರಿಯ ಚುನಾವಣೆಯಲ್ಲಿ ಸರಕಾರದ ವಿರುದ್ದ ಯಾವುದೇ ಆರೋಪಗಳಿದ್ದರೂ ಕೂಡ ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ಶೋ ಈ ಬಾರಿ ಬಿಜೆಪಿಗೆ ಗೆಲುವು ತಂದುಕೊಡಲಿದೆ ಅನ್ನೋ ಲೆಕ್ಕಾಚಾರ ಫಲಿಸಲಿಲ್ಲ. ಅದ್ರಲ್ಲೂ ನರೇಂದ್ರ ಮೋದಿ ಅವರ ವರ್ಚಸ್ಸು ಕೇವಲ ಲೋಕಸಭಾ ಚುನಾವಣೆಗೆ ಮಾತ್ರವೇ ಮೀಸಲು ಅನ್ನೋ ರೀತಿಯಲ್ಲಿ ಕರ್ನಾಟಕದ ಮತದಾರರು ವರ್ತಿಸಿದ್ದಾರೆ. ಇದು ಬಿಜೆಪಿಯ ಸೋಲಿಗೆ ಕಾರಣ ಎನ್ನಬಹುದಾಗಿದೆ.

4. ಫಲ‌ ಕೊಡದ ಚಾಣಕ್ಯ ಅಮಿತ್ ಶಾ ತಂತ್ರಗಾರಿಕೆ

ದೇಶದ ಯಾವುದೇ ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿಯೂ ಅಮಿತ್‌ ಶಾ ರಾಜಕೀಯ ತಂತ್ರಗಾರಿಕೆ ಫಲಕೊಡುತ್ತಿತ್ತು. ಗುಜರಾತ್‌ ಮಾದರಿಯನ್ನೇ ಈ ಬಾರಿ ಕರ್ನಾಟಕದಲ್ಲಿ ಪ್ರಯೋಗಿಸಲಾಗಿತ್ತು. ಹಾಲಿ ಶಾಸಕರಿಗೆ ಟಿಕೆಟ್‌ ಕೈತಪ್ಪಿಸಿ, ಹೊಸಬರಿಗೆ ಟಿಕೆಟ್‌ ನೀಡಿರುವುದು ಬಿಜೆಪಿ ಪಾಲಿಗೆ ಮುಳುವಾಗಿದೆ. ಉತ್ತರ ಭಾರತದ ರೀತಿಯಲ್ಲೇ ಅಮಿತ್‌ ಶಾ ಕರ್ನಾಟಕದಲ್ಲಿ ತಂತ್ರಗಾರಿಕೆ ನಡೆಸಿರುವುದು ಚುನಾವಣೆಯಲ್ಲಿ ಫಲಕೊಡಲಿಲ್ಲ.

5. ರಾಜ್ಯದಲ್ಲಿ ಅತಿಯಾದ ಪ್ರಯೋಗ ಅಸ್ತ್ರಗಳು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಾರದೇ ಇದ್ದಾಗ ಆಪರೇಷನ್‌ ಕಮಲದ ಮೂಲಕ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರವನ್ನು ಕೈಹಿಡಿದಿತ್ತು. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರವನ್ನು ರಚಿಸಿದ್ದರು. ಆದರೆ ತದನಂತರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಬಸವರಾಜ್‌ ಬೊಮ್ಮಾಯಿ ಅವರಿಗೆ ಪಟ್ಟ ಕಟ್ಟಲಾಯಿತಾದ್ರೂ ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟನೆ ಮಾಡುವಲ್ಲಿ ಬೊಮ್ಮಾಯಿ ವೈಫಲ್ಯ ಅನುಭವಿಸಿದ್ದಾರೆ.

6. 20 ಹಾಲಿಗಳಿಗೆ ಟಿಕೆಟ್ ಮಿಸ್ ನಿರ್ಧಾರ. 75 ಹೊಸಬರಿಗೆ ಟಿಕೆಟ್

ಪ್ರಮುಖವಾಗಿ ಹಾಲಿ ಶಾಸಕರಿಗೆ ಈ ಬಾರಿಯ ಚುನಾವಣೆಯಲ್ಲಿ ಟಕೆಟ್‌ ಮಿಸ್‌ ಆಗಿರುವುದು ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣ. ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ, ಗೂಳಿಹಟ್ಟಿ ಶೇಖರ್‌, ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವರು ನಾಯಕರಿಗೆ ಈ ಬಾರಿ ಟಿಕೆಟ್‌ ನೀಡಿರಲಿಲ್ಲ. ಸಂಘಪರಿವಾರದ ನಾಯಕರಾಗಿದ್ದ ಜಗದೀಶ್‌ ಶೆಟ್ಟರ್‌ ಅವರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿರುವುದು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದೆ. 20 ಹಾಲಿಗಳಿಗೆ ಟಿಕೆಟ್ ನೀಡದೇ 75 ಹೊಸಬರಿಗೆ ಟಿಕೆಟ್ ಕೊಟ್ಟಿರುವುದು ಬಿಜೆಪಿಗೆ ಕೈ ಹಿಡಿಯಲಿಲ್ಲ. ಬಹುತೇಕ ಹೊಸಬರು ಈ ಬಾರಿಯ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ.

7. ಬಿ.ಎಸ್.ಯಡಿಯೂರಪ್ಪ ಕಡೆಗಣನೆ ಎಫೆಕ್ಟ್‌

ಬರಿಗಾಲಲ್ಲಿ ರಾಜ್ಯವನ್ನು ಸುತ್ತಿ ಬಿಜೆಪಿ ಪಕ್ಷ ಸಂಘಟನೆಯನ್ನು ಮಾಡಿದ್ದ ಬಿ.ಎಸ್.ಯಡಿಯೂರಪ್ಪ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕರ್ನಾಟಕದಲ್ಲಿ ಬಿಜೆಪಿಯನ್ನು ಪ್ರಬಲ ಪಕ್ಷವಾಗಿ ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಆದರೆ ಇಂತಹ ನಾಯಕನನ್ನು ಬಿಜೆಪಿ ಕಡೆಗಣನೆ ಮಾಡಿರುವುದು, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯುವಾಗ ಬಿ.ಎಸ್.ಯಡಿಯೂರಪ್ಪ ಕಣ್ಣೀರಿಟ್ಟಿರುವುದು ಬಿಜೆಪಿ ಪಾಲಿಗೆ ಮುಳುವಾಗಿ ಪರಿಣಮಿಸಿದೆ.

8. ಜಗದೀಶ್‌ ಶೆಟ್ಟರ್, ಸವದಿ ಸೇರಿ ಲಿಂಗಾಯತ ನಾಯಕರ ಕಡೆಗಣನೆ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ಜಗದೀಶ್‌ ಶೆಟ್ಟರ್‌ ಅವರನ್ನು ಪಕ್ಷದಿಂದ ಕೈಬಿಡುವ ಕುರಿತ ಆಡಿಯೋ, ಜೊತೆಗೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಕೀಯದಿಂದ ತೆರೆಮರೆಗೆ ಸರಿಸಿದ ಬಳಿಕ ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಸೇರಿದಂತೆ ಹಲವು ಲಿಂಗಾಯಿತ ನಾಯಕರನ್ನು ಬಿಜೆಪಿ ಕಡೆಗಣನೆ ಮಾಡಿತ್ತು. ಇದರಿಂದಾಗಿ ಲಿಂಗಾಯಿತ ಸಮುದಾಯ ಕೆರಳುವಂತೆ ಮಾಡಿದೆ. ಇದು ಸ್ಪಷ್ಟವಾಗಿ ಬಿಜೆಪಿಯ ಮೇಲೆ ಪರಿಣಾಮವನ್ನುಂಟು ಮಾಡಿದೆ.

9. ವೀರಶೈವ ಲಿಂಗಾಯತ ಮತವರ್ಗದ ವಿಭಜನೆ

ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್‌ ಅವರು ಲಿಂಗಾಯಿತ ಮತಗಳ ಅಗತ್ಯವಿಲ್ಲ ಅನ್ನೋ ಹೇಳಿಕೆಯ ಜೊತೆಗೆ ಲಿಂಗಾಯಿತ ನಾಯಕರ ಕಡೆಗಣನೆಯಿಂದಾಗಿ ವೀರಶೈವ ಹಾಗೂ ಲಿಂಗಾಯಿತ ಸಮುದಾಯದ ಮತಗಳ ವಿಭಜನೆಗೆ ಕಾರಣವಾಗಿತ್ತು. ಜೊತೆಗೆ ವೀರಶೈವ ಹಾಗೂ ಲಿಂಗಾಯಿತ ಸಮುದಾಯದ ನಡುವಿನ ಬಿರುಕು ಮೂಡಿರುವುದು ಬಿಜೆಪಿ ಹೊಡೆತ ಕೊಟ್ಟಿದೆ.

10. Karnataka Election: ರಾಜ್ಯ ನಾಯಕರನ್ನು ಪರಿಗಣಿಸದ ಹೈಕಮಾಂಡ್ ನಾಯಕರ ಧೋರಣೆ

ಕರ್ನಾಟಕದಲ್ಲಿ ಯಾವುದೇ ರಾಜಕೀಯ ನಿರ್ಧಾರ ಕೈಗೊಳ್ಳಬೇಕಾದ್ರೂ ಕೂಡ ಹೈಕಮಾಂಡ್‌ ನಾಯಕರ ಒಪ್ಪಿಗೆ ಪಡೆಯಲೇ ಬೇಕು ಅನ್ನೋ ಕಟ್ಟಪ್ಪಣೆಯನ್ನು ಕರ್ನಾಟಕದ ಮತದಾರರು ಒಪ್ಪಿದಂತೆ ಕಾಣಿಸುತ್ತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಘೋಷಣೆ ಮಾಡುವ ಸಂದರ್ಭದಲ್ಲಿ ಕರ್ನಾಟಕದ ಯಾವುದೇ ನಾಯಕರು ಸುದ್ದಿಗೋಷ್ಠಿ ಯಲ್ಲಿ ಇರದೇ ಇರುವುದು ಸಹಜವಾಗಿ ಬಿಜೆಪಿ ಕಾರ್ಯಕರ್ತರು, ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಜೊತೆಗೆ ಹೈಕಮಾಂಡ್‌ ನಾಯಕರು ಈ ಬಾರಿ ಟಿಕೆಟ್‌ ನೀಡುವ ಸಂದರ್ಭದಲ್ಲಿ ರಾಜ್ಯ ನಾಯಕರನ್ನು ಪರಿಗಣಿಸದೇ ಇರುವುದು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಬಾರೀ ಹೊಡೆತ ಕೊಟ್ಟಿದೆ.

11. ಆಡಳಿತ ವಿರೋಧಿ ಅಲೆಯ ಎಫೆಕ್ಟ್‌

ರಾಜ್ಯದಲ್ಲಿನ ಬಿಜೆಪಿ ಸರಕಾರದ ವಿರುದ್ದದ ಆರೋಪ, ಆಡಳಿತ ವಿರೋಧಿ ಅಲೆಯ ಎಫೆಕ್ಟ್‌ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೊಡೆತ ಕೊಟ್ಟಿದೆ. ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳು ಇದೇ ಕಾರಣಕ್ಕೆ ಕಾಂಗ್ರೆಸ್‌ ಪಾಲಾಗಿದೆ.

12. 40% ಕಮೀಷನ್ ಆರೋಪ, ಬೆಲೆ ಏರಿಕೆ ಪರಿಣಾಮ

ರಾಜ್ಯ ಸರಕಾರದ ವಿರುದ್ದ ಕೇಳಿಬಂದಿರುವ 40% ಕಮಿಷನ್‌ ಆರೋಪವನ್ನು ಮತದಾರ ಪ್ರಭುಗಳು ಗಂಭೀರವಾಗಿ ಪರಿಗಣಿಸಿದಂತಿದೆ. ಜೊತೆಗೆ ಕೊರೊನಾ ಹೊಡೆತದ ಬೆನ್ನಲ್ಲೇ ಗ್ಯಾಸ್‌, ಪೆಟ್ರೋಲ್‌ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಜನರು ಬೇಸತ್ತು ಹೋಗಿದ್ದಾರೆ. ತಮ್ಮ ಆಕ್ರೋಶವನ್ನು ಇದೀಗ ಮತದಾರರು ಚುನಾವಣೆಯಲ್ಲಿ ವ್ಯಕ್ತಪಡಿಸಿದಂತಿದೆ. ಇದನ್ನೂ ಓದಿ : Karnataka Election Result 2023 : 95 ಬಿಜೆಪಿ ಶಾಸಕರ ಪೈಕಿ 61 ಶಾಸಕರಿಗೆ ಸೋಲು

13. ಒಕ್ಕಲಿಗ ಮತವರ್ಗದ ವಿಶ್ವಾಸ ಗಳಿಸಿಕೊಳ್ಳುವಲ್ಲಿ ವಿಫಲ

ಬಿಜೆಪಿಯಲ್ಲಿ ಹಲವು ಒಕ್ಕಲಿಗ ನಾಯಕರಿದ್ದರೂ ಕೂಡ ಬಿಜೆಪಿ ಒಕ್ಕಲಿಗರ ವಿಶ್ವಾಸವನ್ನು ಗಳಿಸುವಲ್ಲಿ ವಿಫಲವಾಗಿದೆ. ಒಕ್ಕಲಿಗ ಮುಖಂಡ ಡಿಕೆ ಶಿವಕುಮಾರ್‌ ಅವರ ಮೇಲಿನ ನಿರಂತರವಾದ ದಾಳಿ, ಒಕ್ಕಲಿಗ ನಾಯಕರನ್ನು ಬಿಜೆಪಿ ಕಡೆಗಣನೆ ಮಾಡಿರುವುದು ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ಕೊಟ್ಟಿದೆ.

14. ಹಿಂದುತ್ವದ ಅಜೆಂಡಾ ಮೇಲೂ ಅವಲಂಬನೆ, ಕೈಕೊಟ್ಟ ಹಿಂದುತ್ವದ ಅಜೆಂಡಾ

ಈ ಬಾರಿಯ ಚುನಾವಣೆಯನ್ನು ಹಿಂದುತ್ವದ ಆಧಾರದ ಮೇಲೆಯೇ ನಡೆಸಲು ಮುಂದಾಗಿದ್ದ ಬಿಜೆಪಿ ಭಜರಂಗದಳ ನಿಷೇಧದ ಅಸ್ತ್ರವನ್ನು ಪ್ರಯೋಗಿಸಿತ್ತು. ಆದರೆ ಕರಾವಳಿ ಕರ್ನಾಟಕವನ್ನು ಹೊರತು ಪಡಿಸಿದ್ರೆ ಉಳಿದ ಭಾಗಗಳಲ್ಲಿ ಹಿಂದುತ್ವದ ಅಜೆಂಡಾ ಬಿಜೆಪಿಗೆ ವರ್ಕೌಟ್‌ ಆಗಲಿಲ್ಲ.

15. ಎಚ್ಡಿಕೆ ಬಿಟ್ಟ ಪೇಶ್ವೆ ಬ್ರಾಹ್ಮಣ ವರ್ಸಸ್ ಲಿಂಗಾಯತ ಬಣದ ಎಫೆಕ್ಟ್

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹರಿಬಿಟ್ಟ ಪೇಶ್ವೆ ಬ್ರಾಹ್ಮಣ ವರ್ಸಸ್ ಲಿಂಗಾಯತ ಬಣದ ಎಫೆಕ್ಟ್ ಬಿಜೆಪಿಗೆ ಮುಳುವಾಗಿದೆ. ಬಿಜೆಪಿ ಲಿಂಗಾಯಿತರನ್ನು ಕಡೆಗಣನೆ ಮಾಡಿ ಬ್ರಾಹ್ಮಣ ಸಮುದಾಯದ ನಾಯಕರಿಗೆ ಮಣೆ ಹಾಕುತ್ತಿದೆ ಅನ್ನೋ ಆರೋಪಗಳು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

16. ಸಿಎಂ ಬೊಮ್ಮಾಯಿ ನಾಯಕತ್ವ ಗುಣ ಇಲ್ಲದಿರುವುದು, ಬೊಮ್ಮಾಯಿ ಸರ್ಕಾರದ ವೈಫಲ್ಯ

ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಂತಹ ನಾಯಕ ಬಿಜೆಪಿಯಲ್ಲಿ ಮತ್ತೊಬ್ಬರು ಸಿಗೋದಕ್ಕೆ ಸಾಧ್ಯವಿಲ್ಲ. ಬಿ.ಎಸ್.ಯಡಿಯೂರಪ್ಪ ಅವರ ನಂತರದಲ್ಲಿ ಅಧಿಕಾರವನ್ನು ಕೈಗೆತ್ತಿಕೊಂಡ ಬಸವರಾಜ್‌ ಬೊಮ್ಮಾಯಿ ಅವರಿಗೆ ನಾಯಕತ್ವದ ಗುಣದ ಕೊರತೆ, ಜೊತೆಗೆ ಬೊಮ್ಮಾಯಿ ಸರಕಾರದ ಸಾಲು ಸಾಲು ವೈಫಲ್ಯಗಳಿಂದಾಗಿಯೇ ಬಿಜೆಪಿಗೆ ಸೋಲಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಬಿಜೆಪಿ ಸೋಲಿಗೆ ಸುದೀಪ್ ಹೊಣೆ ? ಆರೋಪಕ್ಕೆ ಬೊಮ್ಮಾಯಿ ಖಡಕ್ ರಿಯಾಕ್ಷನ್

17. ಬಂಡಾಯ ಶಮನ ಮಾಡುವಲ್ಲಿ ಬಿಜೆಪಿ ನಾಯಕರ ವೈಫಲ್ಯ

ಟಿಕೆಟ್‌ ಹಂಚಿಕೆ ವೇಳೆಯಲ್ಲಿ ಎದ್ದಿರುವ ಬಂಡಾಯವನ್ನು ಶಮನ ಮಾಡುವಲ್ಲಿ ಬಿಜೆಪಿ ನಾಯಕರು ವೈಫಲ್ಯ ಅನುಭವಿಸಿದ್ದಾರೆ. ಚುನಾವಣೆ ಘೋಷಣೆಯಾದ ನಂತರದಲ್ಲಿ ಹಿರಿಯ ಶಾಸಕರಿಗೆ ಟಿಕೆಟ್‌ ವಂಚಿಸಿರುವುದು, ಸುದ್ದಿಗೋಷ್ಠಿಯನ್ನು ನೋಡಿ ಟಿಕೆಟ್‌ ಸಿಗದೇ ಇರುವುದನ್ನು ಕಂಡು ನಾಯಕರು ಕಣ್ಣೀರು ಸುರಿಸಿರುವುದು ಬಿಜೆಪಿಗೆ ಮುಳುವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಹಲವರು ನಾಯಕರು ಬಂಡಾಯ ಎದ್ದಿರುವುದು ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದೆ.

18. ಸಚಿವರ ನಿಷ್ಕ್ರಿಯತೆ, ವೈಫಲ್ಯ

ಕೊರೊನಾ ಅವಧಿಯಿಂದಲೂ ಬಿಜೆಪಿಯ ಹಲವು ಸಚಿವರ ಕಾರ್ಯವೈಖರಿಯ ಬಗ್ಗೆ ಖುದ್ದು ಬಿಜೆಪಿ ಶಾಸಕರೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸಚಿವ ನಿಷ್ಕ್ರೀಯತೆ, ವೈಫಲ್ಯ ಚುನಾವಣೆಯ ಮೇಲೆ ಪರಿಣಾಮ ಬೀರಿದಂತಿದೆ. ಸರ್ಕಾರದ ಅವಧಿಯಲ್ಲಿ ಕೇಳಿಬಂದ ಕಮೀಷನ್ ಆರೋಪ, ಪಿಎಸ್ಐ ಅಕ್ರಮ ಪ್ರಕರಣ, ಬಿಟ್‌ಕಾಯಿನ್ ಹಗರಣ ಆರೋಪ, ಡ್ರಗ್ ಪ್ರಕರಣ, ಕೋವಿಡ್ ಸಂದರ್ಭದ ನಾನಾ ಆರೋಪಗಳ ಎಫೆಕ್ಟ್

Karnataka Election 2023 These 18 Reasons for BJP’ Defeat

Comments are closed.