ಪುನೀತ್ ರಾಜ್‌ಕುಮಾರ್ ಹೆಸರು ಬಳಸಿದ್ರೇ ಜೋಕೆ: ಪ್ರತಾಪ್ ಸಿಂಹಗೆ ಪ್ರಕಾಶ್ ರಾಜ್ ಎಚ್ಚರಿಕೆ ‌

ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ಕಣ ರಂಗೇರುತ್ತಿದ್ದಂತೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಮತಬೇಟೆಗೆ ಇಳಿದಿದ್ದಾರೆ. ಈ ಮಧ್ಯೆ ಪ್ರಚಾರ ಕಣಕ್ಕೆ ಸ್ಟಾರ್ ಗಳು ಧುಮುಕುತ್ತಿದ್ದಂತೆ ವಾದ ವಿವಾದಗಳು ಆರಂಭಗೊಂಡಿದೆ. ಒಂದೆಡೆ ವರುಣಾದಲ್ಲಿ ಸಿದ್ಧು ಪರ ಶಿವಣ್ಣ ಕ್ಯಾಂಪೇನ್ ನಡೆಸಿದ್ದರೇ, ಶಿವಣ್ಣ ಕ್ಯಾಂಪೇನ್ ಗೆ ಪ್ರತಾಪ್ ಸಿಂಹ್ ಟ್ವೀಟ್ ನಲ್ಲಿ ಕುಟುಕಿದ್ದಾರೆ. ಈ ವಿವಾದಕ್ಕೆ ಅಪ್ಪು ಎಳೆತಂದಿದ್ದಕ್ಕೆ ಬಹುಬಾಷಾ ನಟ ಪ್ರಕಾಶ್ ರಾಜ್ (Prakash Raj) ಪ್ರತಾಪ್ ಸಿಂಹ್ ಗೆ ಎಚ್ಚರಿಕೆ ನೀಡಿದ್ದಾರೆ.

ಮಾಜಿಸಿಎಂ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಸಿದ್ಧರಾಮಯ್ಯ ಪರ ನಟ ಶಿವಣ್ಣ ಚುನಾವಣಾ ಪ್ರಚಾರ ನಡೆಸಿದ್ದಾರೆ.‌ವರುಣಾ ಕ್ಷೇತ್ರದಲ್ಲಿ ಸಿದ್ದು ಪರ ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ರೋಡ್ ಶೋ ಮೂಲಕ ಪ್ರಚಾರ ನಡೆಸಿದ್ದರು. ಇದೇ ವಿಚಾರಕ್ಕೆ ಶಿವಣ್ಣ ಹಾಗೂ ಗೀತಾ ಪೋಟೋ ಹಂಚಿಕೊಂಡ ಸಿದ್ಧರಾಮಯ್ಯನವರು ಸೋಷಿಯಲ್ ಮೀಡಿಯಾದಲ್ಲಿ ಡಾ.ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡು ಧನ್ಯವಾದ ಹೇಳಿದ್ದರು. ಆದರೆ ಶಿವಣ್ಣ ಪ್ರಚಾರ ಬಿಜೆಪಿ ಸಂಸದ ಪ್ರತಾಪ್ ಸಿಂಹ್ ಅವರನ್ನು ಕಂಗೆಡಿಸಿದಂತಿದ್ದು, ಪ್ರತಾಪ್ ಸಿಂಹ್ ವಿವಾದಾತ್ಮಕ ಟ್ವೀಟ್ ವೊಂದನ್ನು ಮಾಡಿದ್ದಾರೆ.

ಈ ಹಿಂದೆ ಸೋಮಣ್ಣ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಆಸ್ಪತ್ರೆ ನಿರ್ಮಿಸಿದ್ದರು. ಆ ವೇಳೆ ರಾಘಣ್ಣನವರು ಸೋಮಣ್ಣರನ್ನು ಶ್ಲಾಘಿಸಿದ್ದರು. ಆದರೆ ಈಗ ಶಿವಣ್ಣ ಸಿದ್ಧರಾಮಯ್ಯನವರ ಪರ ಕ್ಯಾಂಪೇನ್ ಮಾಡಿದ್ದಾರೆ. ಅವರವರ ಭಾವ ಭಕುತಿಗೆ… ಎಂದು ಪ್ರತಾಪ್ ಸಿಂಹ್ ಟ್ವೀಟ್ ಮಾಡಿದ್ದರು. ಸಂಸದ ಪ್ರತಾಪ್ ಸಿಂಹ ಶಿವಣ್ಣ ಪ್ರಚಾರದ ವಿಚಾರಕ್ಕೆ ವಿನಾಕಾರಣ ಪುನೀತ್ ರಾಜ್ ಕುಮಾರ ಹೆಸರನ್ನು ಎಳೆತಂದಿದ್ದು ಈಗ ಸ್ಯಾಂಡಲ್ ವುಡ್ ನಟ-ನಟಿಯರ ಕೆಂಗಣ್ಣಿಗೆ ಗುರಿಯಾಗಿದೆ.

ಈ ವಿಚಾರಕ್ಕೆ ಖಡಕ್ ರಿಯಾಕ್ಷನ್ ನೀಡಿರೋ ಬಹುಭಾಷಾ ನಟ ಪ್ರಕಾಶ್ ರೈ (Prakash Raj) , ಛೀ ಛೀ ನಿಮ್ಮ ಹೊಲಸು ರಾಜಕೀಯಕ್ಕೆ ನಮ್ಮೆಲ್ಲರ ಅಪ್ಪು ಹೆಸರನ್ನು ಯಾಕೆ ಎಳೆದು ತರ್ತಿರ. ಪ್ರತಾಪ್ ಸಿಂಹ್ ಅವರೇ, ಛಿ ಛೀ ಇದು ತುಂಬಾ ದೊಡ್ಡ ತಪ್ಪು ಎಂದಿದ್ದಾರೆ. ಇನ್ನು ಹಲವರು ಪ್ರತಾಪ್ ಸಿಂಹ್ ಅವರಿಗೆ ನಿಮ್ಮ ಪ್ರಕಾರ ಸುದೀಪ್ ಪ್ರಚಾರ ಮಾಡ್ತಿರೋದು ಸರಿನಾ? ಸಿದ್ಧರಾಮಯ್ಯನವರ ಪರ ಶಿವಣ್ಣ ಕ್ಯಾಂಪೇನ್ ಮಾಡಿದ್ರೇ ನಿಮಗೇನು ಕಷ್ಟ ಎಂದು ಪ್ರಶ್ನಿಸಿದ್ದಾರೆ. ಇತ್ತೀಚಿಗೆ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಶಿವಣ್ಣ ರಾಜ್ಯದಾದ್ಯಂತ ಹಲವು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಅಪ್ಪು ವಿಚಾರ ಸೇರಿಸಿ ಪ್ರತಾಪ್ ಸಿಂಹ ಮಾಡಿರೋ ಟ್ವೀಟ್ ಮಾತ್ರ ಈಗ ಹೊಸ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಮಣಿಪುರ ಹಿಂಸಾಚಾರ: ಕಂಡಲ್ಲಿ ಗುಂಡಿಕ್ಕಲು ರಾಜ್ಯಪಾಲರ ಸಮ್ಮತಿ

ಇದನ್ನೂ ಓದಿ : ಬಜರಂಗದಳ ನಿಷೇಧದಿಂದ ಹಿಂದುತ್ವಕ್ಕೆ ಧಕ್ಕೆ, ಕಾಂಗ್ರೆಸ್‌ಗೆ ಪ್ರಣಾಳಿಕೆ ತಂತು ಪ್ರಾಣಸಂಕಟ

Comments are closed.