ಭಾನುವಾರ, ಏಪ್ರಿಲ್ 27, 2025
Homebusinessಗೃಹಲಕ್ಷ್ಮೀ ಹಣ ಇನ್ನೂ ಬಂದಿಲ್ವಾ ? ಸರಕಾರದ ಈ ನಂಬರ್‌ಗೆ ಮೆಸೇಜ್‌ ಮಾಡಿದ್ರೆ ಜಮೆ ಆಗುತ್ತೆ...

ಗೃಹಲಕ್ಷ್ಮೀ ಹಣ ಇನ್ನೂ ಬಂದಿಲ್ವಾ ? ಸರಕಾರದ ಈ ನಂಬರ್‌ಗೆ ಮೆಸೇಜ್‌ ಮಾಡಿದ್ರೆ ಜಮೆ ಆಗುತ್ತೆ ಹಣ

- Advertisement -

ಬೆಂಗಳೂರು : ರಾಜ್ಯ ಸರ್ಕಾರ ಚುನಾವಣೆಗೂ ಮುನ್ನ ಘೋಷಿಸಿದಂತೆ ಕರ್ನಾಟಕ ( Karnataka) ರಾಜ್ಯದಲ್ಲಿ ಮಹಿಳಾ ಮತದಾರರನ್ನು ಸೆಳೆಯುವಂತ ಗೃಹಲಕ್ಷ್ಮೀ (Gruhalakshmi Scheme) ಯೋಜನೆಯನ್ನು ಜಾರಿಗೊಳಿಸಿದೆ. ಪ್ರತಿಯೊಬ್ಬ ಮನೆಯ ಯಜಮಾನಿಗೆ 2000 ರೂಪಾಯಿ ಸಹಾಯಧನ ನೀಡುವ ಈ ಯೋಜನೆಗೆ ರಾಜ್ಯದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 1.1 ಕೋಟಿ ಮಹಿಳೆಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ಯೋಜನೆ ಜಾರಿಯಾಗಿ ಒಂದು ವಾರ ಕಳೆದರೂ ಲಕ್ಷಾಂತರ ಮಹಿಳೆಯರ ಬ್ಯಾಂಕ್ ಖಾತೆಗೆ (‌Bank Account) ಹಣ ಬಂದಿಲ್ಲ. ಇಷ್ಟಕ್ಕೂ ಗೃಹಲಕ್ಷ್ಮೀ ಖಾತೆಗೆ ಹಣ ಬಾರದೇ ಇದ್ದ ಮಹಿಳೆಯರು ಏನು ಮಾಡ್ಬೇಕು ಎಂಬ ಆತಂಕಕ್ಕೆ ಇಲ್ಲಿದೆ ಉತ್ತರ.

ನೀವು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿನಾ ? ಯೋಜನೆ ಜಾರಿಯಾಗಿ ಒಂದು ವಾರ ಕಳೆದರೂ ನಿಮ್ಮ ಅಕೌಂಟ್ ಗೆ ಹಣ ಬಂದಿಲ್ಲ ಅನ್ನೋ ಆತಂಕ ನಿಮ್ಮನ್ನು ಕಾಡ್ತಿದ್ಯಾ? ಹಾಗಿದ್ದರೇ ನಿಮ್ಮ ಖಾತೆಯ ಚಾಲ್ತಿ, ಗೃಹಲಕ್ಷ್ಮೀಗೆ ನಿಮ್ಮ ಅರ್ಜಿ ಸ್ವೀಕಾರವಾಗಿದ್ಯಾ? ಅಥವಾ ನಿಮ್ಮ ಪಡಿತರ ಚೀಟಿ, ಬ್ಯಾಂಕ್ ಅಕೌಂಟ್, ಆಧಾರ ನಂಬರ್ ಮಿಸ್ ಮ್ಯಾಚ್ ಆಗಿದ್ಯಾ ಈ ಎಲ್ಲದರ ಮಾಹಿತಿ ನೀಡಲು ಇಲಾಖೆ ಸಹಾಯವಾಣಿ ನಂಬರ್ ವೊಂದನ್ನು ನೀಡಿದೆ.

Gruhalakshmi scheme Application Status check SMS
Image Credit Original Source

ಗೃಹಲಕ್ಷ್ಮೀ ಯೋಜನೆಯ ಹಣ ಬಂದಿರೋದಿಕ್ಕೆ ಮಹಿಳೆಯರು ಖುಷಿ ಆಗಿದ್ದರೇ, ಲಕ್ಷಾಂತರ ಮಹಿಳೆಯರು ಹಣ ಬಾರದೇ ಬೇಸರದಲ್ಲಿದ್ದಾರೆ. ಹೀಗಾಗಿ ಮಹಿಳೆಯರ ಅರ್ಜಿಯ ಸ್ಟೇಟಸ್ ಪರಿಶೀಲಿಸಲು ಸಹಾಯವಾಣಿ ನಂಬರ್ ನೀಡಲಾಗಿದೆ. 8147500500 ಈ ನಂಬರ್ ಗೆ ನಿಮ್ಮ ರಜಿಸ್ಟರ್ಡ್ ಮೊಬೈಲ್ ನಂಬರ್ ನಿಂದ ಒಂದು ಮೆಸೆಜ್ ಕಳುಹಿಸಿ.

8147500500 ನಂಬರ್ ಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ನ್ನು ಮೆಸೆಜ್ ಮಾಡಿ. ಹೀಗೆ ಮೆಸೆಜ್ ಮಾಡಿದ ತಕ್ಷಣ ನಿಮ್ಮ ಪಡಿತರ ಚೀಟಿ ಸಂಖ್ಯೆ ಆಧರಿಸಿ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಭವಿಷ್ಯ ಏನಾಗಿದೆ ಎಂಬ ಮಾಹಿತಿಯ ಸಂದೇಶ ಬರಲಿದೆ.

ಇದನ್ನೂ ಓದಿ : ಅನ್ನಭಾಗ್ಯ ಯೋಜನೆಯಲ್ಲಿ ಭಾರೀ ಬದಲಾವಣೆ : ಈ ಕುಟುಂಬಗಳಿಗಿಲ್ಲ ಹೆಚ್ಚುವರಿ ಅಕ್ಕಿಯ ಹಣ

ಅಲ್ಲದೇ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಅರ್ಜಿಯ ಸ್ಥಿತಿ ಏನಾಗಿದೆ ? ಯಾವುದಾದರೂ ಗೊಂದಲವಿದ್ಯಾ ? ಅಥವಾ ನೀವು ಕೊಟ್ಟ ಮಾಹಿತಿಗಳಲ್ಲಿ ಏನಾದ್ರು ತಪ್ಪುಗಳಿದ್ಯಾ ಎಂಬುದರ ಬಗ್ಗೆಯೂ ಈ ನಂಬರ್ ಮೆಸೆಜ್ ನಲ್ಲಿ ಮಾಹಿತಿ ಸಿಗಲಿದೆ. ನಿಮ್ಮ ಅರ್ಜಿ ಅಸ್ವೀಕೃತವಾಗಿದ್ದರೇ,  ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆಯೂ ಮಾಹಿತಿ ಬರಲಿದೆ

Gruhalakshmi scheme Application Status check SMS
Image Credit : original Source

ರಾಜ್ಯದಲ್ಲಿ ಒಟ್ಟು 1.28 ಫಲಾನುವಿಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 1.11 ಕೋಟಿ ಮಹಿಳೆಯರು ಮಾತ್ರ ನೋಂದಣಿಯನ್ನು ಮಾಡಿಸಿ ಕೊಂಡಿದ್ದಾರೆ. ಹೀಗಾಗಿ ಸರ್ಕಾರ ಗೃಹಲಕ್ಷ್ಮೀ ನೋಂದಣಿಗೆ ಯಾವುದೇ ಡೆಡ್ ಲೈನ್ ನೀಡಿಲ್ಲ. ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ ಯಾವಾಗ ಬೇಕಾದರೂ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ : ನಿಮಗಿನ್ನೂ ಗೃಹಲಕ್ಷ್ಮೀ ಯೋಜನೆ ಹಣ ಬಂದಿಲ್ವಾ?! ಹಣ ಪಡೆಯೋಕೆ ಏನು ಮಾಡ್ಬೇಕು? ಇಲ್ಲಿದೆ ಡಿಟೇಲ್ಸ್

ಇನ್ನೊಂದೆಡೆ ಹಲವರು ಮನೆ ಯಜಮಾನಿ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಪಡಿತರ ಚೀಟಿಯಲ್ಲಿ ಮನೆ ಯಜಮಾನಿ ಹೆಸರನ್ನು ತಿದ್ದುಪಡಿ ತರಲು ಸಪ್ಟೆಂಬರ್ 1 ರಿಂದ 10 ರವರೆಗೆ ಅವಕಾಶ ನೀಡಲಾಗಿತ್ತು. ಈಗ ಅವಧಿಯನ್ನು ಸಪ್ಟೆಂಬರ್ 14 ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಅವಧಿ ಮುಗಿಯುವ ಮುನ್ನ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗಿದೆ.

Gruhalakshmi scheme Application Status check SMS

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular