ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಮಾನ್ಸೂನ್ ಪೂರ್ವ ಮಳೆಯಿಂದ ಭಾರಿ (Karnataka Heavy Rain Effect ) ಅನಾಹುತಗಳಾಗಿದ್ದು, ಜನ,ಜಾನುವಾರು, ಬೆಳೆ ನಾಶ ಸೇರಿದಂತೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ಮಧ್ಯೆ ರಾಜ್ಯದ ಮುಂಬರುವ ಮಳೆಯಬ್ಬರವನ್ನು ಎದುರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಆರ್. ಅಶೋಕ್ ಅವರು, ಜಿ.ಪಂ ಸಿಒಓ ಸೇರಿದಂತೆ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ. ಜೊತೆಗೆ ರಾಜ್ಯಕ್ಕೆ ಎನ್ ಡಿಆರ್ ಎಫ್ ತಂಡಗಳನ್ನು ಕರೆಸಲು ಸರ್ಕಾರ ಸಿದ್ಧವಾಗಿದೆ.
ಮಳೆ ಹಾಗೂ ಹವಾಮಾನ ಇಲಾಖೆಯಿಂದ ಇನ್ನೂ ಒಂದು ವಾರಗಳ ಕಾಲ ಮಳೆ ಸಾಧ್ಯತೆಯ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಮಾತ್ರವಲ್ಲ ಮಾನ್ಸೂನ್ ಪೂರ್ವ ಮಳೆಯಿಂದ ರಾಜ್ಯದಲ್ಲಿ ಆಗಿರುವ ನಷ್ಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾನ್ಸೂನ್ ಪೂರ್ವ ಮಳೆಯಿಂದ ರಾಜ್ಯದಲ್ಲಿ 204 ಹೆಕ್ಟೇರ್ ಕೃಷಿ ಹಾಗೂ 431 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿ ಉಂಟಾಗಿದೆ. 23 ಮನೆಗಳು ಸಂಪೂರ್ಣವಾಗಿ ಹಾನಿಯಾಗಿದ್ದು, ಇಲ್ಲಿವರೆಗೂ 9 ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದಲ್ಲದೇ, ಜಿಲ್ಲೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಕಂದಾಯ ಸಚಿವರು ಸೂಚನೆ ನೀಡಿದ್ದು, ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಪರಿಶೀಲನಾ ಸಭೆ ನಡೆಸುವಂತೆ ಸಚಿವರ ಮನವಿ ಮಾಡಿದ್ದಾರೆ. ಅಲ್ಲದೇ ಅಧಿಕಾರಿಗಳಿಗೆ ಆರ್.ಅಶೋಕ್, ಇನ್ನು 3-4 ತಿಂಗಳು ಕಾರ್ಯಚರಣೆ ವೇಗ ಹೆಚ್ಚಿಸಬೇಕು.ಎಲ್ಲೇ ಭೂಕುಸಿತ, ನೆರೆ ಬಂದರೂ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಹಾರವನ್ನು ತ್ವರಿತವಾಗಿ ನೀಡಬೇಕು. ಮನೆಹಾನಿ, ಪ್ರಾಣಹಾನಿ ಉಂಟಾದಾಗ 48 ಗಂಟೆಯಲ್ಲಿ ಪರಿಹಾರ ನೀಡಬೇಕು. ಕಂಟ್ರೋಲ್ ರೂಮ್ ಸದಾ ಆಕ್ಟೀವ್ ಆಗಿರಬೇಕು. ಕಾಳಜಿ ಕೇಂದ್ರದಲ್ಲಿ ಇಲಾಖೆ ಸೂಚಿಸಿದ ಪ್ರಕಾರವೇ ಊಟೋಪಚಾರ ವ್ಯವಸ್ಥೆ ಮಾಡಬೇಕು. ಈಗಿನಿಂದಲೇ ಎಲ್ಲ ರೀತಿಯ ರೂಪು ರೇಷೆ ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಅಲ್ಲದೇ ಜಿಲ್ಲೆಗಳಲ್ಲಿ ಎ ಲ್ಲೆಲ್ಲಿ ಭೂಕುಸಿತ ಆಗುವ ಸಾಧ್ಯತೆ ಇದೆಯೋ ಅಲ್ಲಿನ ಜನರ ಮನವೊಲಿಸಿ ಖುದ್ದು ಡಿಸಿಗಳೇ ಸ್ಥಳಾಂತರ ಮಾಡಿಸಬೇಕು. ಪ್ರಾಣಹಾನಿ ಆಗದಂತೆ ತಡೆಯುವುದು ನಮ್ಮ ಮೊದಲ ಆದ್ಯತೆ ಆಗಬೇಕಿದೆ. ಪ್ರತಿ ಜಿಲ್ಲೆಯಲ್ಲಿಯೂ ಎಲ್ಲ ರೀತಿಯ ಸಲಕರಣೆಗಳೊಂದಿಗೆ ಒಂದು ವಾಹನ ಸದಾ ಸಿದ್ಧವಾಗಿರಬೇಕು. ಇದರಿಂದ ರಸ್ತೆಯಲ್ಲಿ ಮರ ಬಿದ್ದಾಗ ತೆರವುಗೊಳಿಸಲು, ನೆರೆ ಹಾವಳಿ ಉಂಟಾದಾಗ ಕಾರ್ಯಚರಣೆ ನಡೆಸಲು ಅನುಕೂಲ ಆಗುತ್ತದೆ ಎಂದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : Red Alert holiday declared : ಶುಕ್ರವಾರ ಉಡುಪಿ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ : ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ
ಇದನ್ನೂ ಓದಿ : sslc result 2022 announced : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿದ ಬಾಲಕಿಯರು
Karnataka Heavy Rain Effect visit NDRF TEAM