ಚುನಾವಣೆ ಮುಗಿದರೂ ಮುಗಿಯದ ಬಂಡಾಯದ ಭೀತಿ : ಬಿಜೆಪಿ ವಿರುದ್ದ ಮುನಿಸಿಕೊಂಡ ಉಡುಪಿ ಮಾಜಿ ಶಾಸಕ ರಘುಪತಿ ಭಟ್‌

Teachers and Graduates Constituencies Election -2024 :ಪದವೀಧರ‌ ಕ್ಷೇತ್ರದ ಚುನಾವಣೆಯ ಟಿಕೇಟ್‌ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಧಾನ ಭುಗಿಲೆದ್ದಿದ್ದು ಕರಾವಳಿಯ ಪ್ರಭಾವಿ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ರಘುಪತಿ ಭಟ್ ಹೈಕಮಾಂಡ್ ನಿರ್ಧಾರದ ಬಗ್ಗೆ ಕಿಡಿಕಾರಿದ್ದಾರೆ.‌

Teachers and Graduates Constituencies Election -2024 : ಉಡುಪಿ : ಮೊನ್ನೆ ಮೊನ್ನೆ ಲೋಕಸಭೆ ಚುನಾವಣೆ ಹಾಗೂ ಚುನಾವಣೆಯ ಟಿಕೇಟ್ ಹಂಚಿಕೆ ಅಸಮಧಾನ‌ ಎಲ್ಲವನ್ನೂ ಒಂದು ಹಂತಕ್ಕೆ ಸರಿಪಡಿಸಿಕೊಂಡ ಸಮಾಧಾನದಲ್ಲಿರೋ ಬಿಜೆಪಿಗೆ ಹೊಸ ಶಾಕ್ ಎದುರಾಗಿದೆ. ಪದವೀಧರ‌ ಕ್ಷೇತ್ರದ ಚುನಾವಣೆಯ ಟಿಕೇಟ್‌ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಧಾನ ಭುಗಿಲೆದ್ದಿದ್ದು ಕರಾವಳಿಯ ಪ್ರಭಾವಿ ಬಿಜೆಪಿ(BJP) ನಾಯಕ ಹಾಗೂ ಮಾಜಿ ಶಾಸಕ ರಘುಪತಿ ಭಟ್ (Ragupathi Bhat) ಹೈಕಮಾಂಡ್ ನಿರ್ಧಾರದ ಬಗ್ಗೆ ಕಿಡಿಕಾರಿದ್ದಾರೆ.‌ ಆ ಮೂಲಕ ಮತ್ತೊಮ್ಮೆ ಬಿಜೆಪಿ ಗೆ ಶಿಕ್ಷಕ ಪದವೀಧರ ಕ್ಷೇತ್ರದ ಚುನಾವಣೆಯಲ್ಲೂ ಅಸಮಧಾನ ಹಾಗೂ ಬಂಡಾಯದ ಭೀತಿ ಎದುರಾಗಿದೆ.

Teachers and Graduates Constituencies Election -2024 Former Udupi MLA Raghupathi Bhat Rebel for BJP High command Decision
Image Credit to Original Source

ಶನಿವಾರ ರಾಜ್ಯ ಬಿಜೆಪಿ ಕರ್ನಾಟಕ ಬಿಜೆಪಿ ರಾಜ್ಯದಲ್ಲಿ ನಡೆಯಲಿರುವ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ.

 • ಕರ್ನಾಟಕ ಈಶಾನ್ಯ ಪದವೀಧರರು
  ಶ್ರೀ ಅಮರನಾಥ ಪಾಟೀಲ್
 • ಕರ್ನಾಟಕ ನೈಋತ್ಯ ಪದವೀಧರರು
  ಡಾ. ಧನಂಜಯ ಸರ್ಜಿ
 • ಬೆಂಗಳೂರು ಪದವೀಧರರು
  ಶ್ರೀ ಎ.ದೇವೇಗೌಡ
  ಬೆಂಗಳೂರು ಪದವೀಧರ
 • ಕರ್ನಾಟಕ ಆಗ್ನೇಯ ಶಿಕ್ಷಕರು
  ಶ್ರೀ ವೈ.ಎ. ನಾರಾಯಣಸ್ವಾಮಿ
 • ಕರ್ನಾಟಕ ದಕ್ಷಿಣ ಶಿಕ್ಷಕ
  ಶ್ರೀ ಇ.ಸಿ. ನಿಂಗರಾಜು

ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಬಿಜೆಪಿಯ ಈ ಘೋಷಣೆಯ ಕೆಲವೇ ಗಂಟೆಗಳಲ್ಲಿ ಬಿಜೆಪಿಗೆ ಬಂಡಾಯ ಹಾಗೂ ಅಸಮಧಾನದ ತಲೆನೋವು ಎದುರಾಗಿದೆ. ಕರಾವಳಿ ಭಾಗದ ಪ್ರಭಾವಿ ನಾಯಕ ಹಾಗೂ ಮಾಜಿ ಶಾಸಕ ರಘುಪತಿ ಭಟ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಪಕ್ಷದ ವಿರುದ್ಧ ಅಸಮಧಾನ ಹೊರಗಹಾಕಿದ್ದಾರೆ. ಟಿಕೇಟ್ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಸುಧೀರ್ಘವಾದ ಪೋಸ್ಟ್ ಹಾಕಿರುವ ರಘುಪತಿ ಭಟ್, ಇದು ಕರಾವಳಿ ಭಾಗಕ್ಕೆ ಎಸಗಲಾಗುತ್ತಿರುವ ಅನ್ಯಾಯ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಪರಶುರಾಮ ಥೀಮ್‌ ಪಾರ್ಕ್‌ ಸುನಿಲ್‌ ಕುಮಾರ್‌ ಆಸ್ತಿಯಲ್ಲ, ಕಾರ್ಕಳದ ಆಸ್ತಿ, ಜನರೇ ತೀರ್ಮಾನ ಕೈಗೊಳ್ಳಿ : ಶಾಸಕ ಸುನಿಲ್‌ ಕುಮಾರ್‌

ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರೋ ರಘುಪತಿ ಭಟ್, ಪದವೀಧರ ಕ್ಷೇತ್ರದ ಟಿಕೆಟ್ ನ್ನು ಶಿವಮೊಗ್ಗದ ಅಭ್ಯರ್ಥಿಗೆ ನೀಡಲಾಗಿದೆ
ಇದು ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು,ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡದೇ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಭಾಗದ ವಿದ್ಯಾವಂತ ಮತದಾರರಿಗೆ ಅನ್ಯಾಯ ಮಾಡಿದಾಗಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.

Teachers and Graduates Constituencies Election -2024 Former Udupi MLA Raghupathi Bhat Rebel for BJP High command Decision
Image Credit to Original Source

ಅಲ್ಲದೇ ತಮಗೆ ಪಕ್ಷ ಹಾಗೂ ಹೈಕಮಾಂಡನ್ ಈ ನಿರ್ಧಾರದಿಂದ ಆಗಿರೋ ನೋವಿನ ಬಗ್ಗೆಯೂ ಪೋಸ್ಟ್ ಹಾಕಿರೋ ರಘುಪತಿ ಭಟ್,
ಬಿಜೆಪಿಯ ಈ ನಿಲುವಿಂದ ವಿಚಲಿತನಾಗಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಮಾಹಿತಿ ನೀಡದೇ, ನನ್ನನ್ನು ಬದಲಾವಣೆ ಮಾಡಿದ್ರು. ಆದರೂ‌ ವಿಚಲಿತನಾಗದೇ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ.ಆ ಸಂದರ್ಭದಲ್ಲಿ ಪದವೀಧರ ಕ್ಷೇತ್ರದ ಟಿಕೆಟ್ ನೀಡೋದಾಗಿ ಹಿರಿಯರು ಭರವಸೆ ‌ನೀಡಿದ್ದರು. ಈಗ ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರ ನೀಡದೇ ಅನ್ಯಾಯಕ್ಕೆ ನ್ಯಾಯ ಕೊಡುವರು ಯಾರು..? ಎಂದು ಭಟ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : IPL 2024: ಹಳೆ ಟಿವಿಗಳಲ್ಲಿ JioCinema ಮೂಲಕ ಉಚಿತವಾಗಿ ವೀಕ್ಷಿಸಿ ಐಪಿಎಲ್‌

ಕರಾವಳಿ ಭಾಗಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿರೋ ರಘುಪತಿ ಭಟ್ ಸೂಕ್ಷ್ಮವಾಗಿ ಬಂಡಾಯದ ಸೂಚನೆ ನೀಡಿದ್ದಾರೆ, ತಮಗೆ ವಿಧಾನಸಭಾ ಚುನಾವಣೆಯಲ್ಲಿ ಆದ ನೋವನ್ನು ವಿಧಾನಪರಿಷತ್ ಚುನಾವಣೆಯ ಟಿಕೇಟ್ ನೀರಿಕ್ಷೆಯಲ್ಲಿ ಮರೆತಿದ್ದೆ. ಆದರೆ ಈಗಲೂ ಅನ್ಯಾಯ ಮಾಡಲಾಗಿರೋದು ತಮ್ಮ ಮುಂದಿನ ಹಾದಿಯ ಬಗ್ಗೆ ಚಿಂತಿಸುವ ಸಮಯ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ಬಿಗ್‌ ರಿಲೀಫ್‌, ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಸರಕಾರ

ಅಲ್ಲದೇ ಇದು ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತ ಮತ್ತು ಪಕ್ಷದ ಅಭಿಮಾನಿಗಳು ಚಿಂತಿಸುವ ಕಾಲ,ಚರ್ಚಿಸೋಣ ನಿಮ್ಮ ಸಲಹೆ ನಿರೀಕ್ಷೆ ಯಲ್ಲಿ ಎಂದು ತಮ್ಮ ಅಭಿಮಾನಿ ಗಳಿಗೆ ರಘುಪತಿ ಭಟ್ ಕರೆ ನೀಡಿದ್ದು, ಬಿಜೆಪಿ ಟಿಕೇಟ್ ಹಂಚಿಕೆ ವಿಚಾರದಲ್ಲಿ ಪಕ್ಷ ನಿಷ್ಠರಿಗೆ ಅನ್ಯಾಯ ಮಾಡೋ ಮೂಲಕ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುತ್ತಿದೆ ಎಂಬ ಮಾತು ರಾಜಕೀಯ ವಲಯದಲ್ಲೇ ಕೇಳಿ ಬರ್ತಿದೆ.

Teachers and Graduates Constituencies Election -2024 Former Udupi MLA Raghupathi Bhat Rebel for BJP High command Decision

Comments are closed.