BL Santhosh : ಹಿರಿಯರಿಗೆ ಕೋಕ್, ಕುಟುಂಬ ರಾಜಕಾರಣಕ್ಕೆ ಬ್ರೇಕ್ : ಟಿಕೇಟ್ ಹಂಚಿಕೆ ಬಿ.ಎಲ್.ಸಂತೋಷ್ ಹೆಗಲಿಗೆ

ಬೆಂಗಳೂರೂ : ರಾಜ್ಯ ಬಿಜೆಪಿಯಲ್ಲಿ ಈಗ ಎಲ್ಲವೂ ಬದಲಾಗಿದೆ.ಒಂದಿಷ್ಟು ಅಚ್ಚರಿಯ ನಿರ್ಧಾರಗಳ ಜೊತೆ ಬಿಜೆಪಿ ಹೈಕಮಾಂಡ್ ರಾಜ್ಯದ ನಾಯಕರಿಗೆ ಶಾಕ್ ನೀಡುತ್ತಿದೆ. ಅದರಲ್ಲೂ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಪ್ಲ್ಯಾನ್ ಮಾಡಿರೋ ಬಿಜೆಪಿ ಹೈಕಮಾಂಡ್ ಅದಕ್ಕಾಗಿ ಬಿಜೆಪಿಯ ಕಟ್ಟಾಳು ಬಿ.ಎಲ್.ಸಂತೋಷ್ (BL Santhosh) ಅವರನ್ನೇ ಸೇನಾನಿಯಾಗಿಸಿದೆ. ಹೈಕಮಾಂಡ್ ಸ್ಪೆಶಲ್ ರಣತಂತ್ರದ ಜೊತೆ ಬಿ.ಎಲ್.ಸಂತೋಷ್ ಕರುನಾಡಿನ ಚುನಾವಣಾ ಕಣಕ್ಕಿಳಿದಿದ್ದಾರೆ.

ಹೌದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಕರ್ನಾಟಕದ ರಾಜಕಾರಣದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರತಿ ಜಿಲ್ಲೆ, ತಾಲೂಕು ಗಳಲ್ಲಿ ಬಿಜೆಪಿ ನಾಯಕರ, ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಅಲ್ಲಲ್ಲಿ ಕ್ಲೋಸ್ ಡೋರ್ ಸಭೆಗಳನ್ನು ನಡೆಸುವ ಮೂಲಕ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ. ಮಾತ್ರವಲ್ಲ ಸಂಘಟನೆಯ ಪ್ರಮುಖರ ಸಭೆ ನಡೆಸುತ್ತ ಬಿಜೆಪಿಯ ಎರಡನೆ ಹಂತದ ನಾಯಕರನ್ನ ಚುನಾವಣೆಗೆ ಅಣಿಗೊಳಿಸುತ್ತಿದ್ದಾರೆ.

ಈ ಭಾರಿ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲೂ ಗುಜರಾತ್ ಹಾಗೂ ಯುಪಿ ಮಾದರಿಯ ಟಿಕೇಟ್ ಹಂಚಿಕೆ ಹಾಗೂ ಚುನಾವಣಾ ಪ್ಲ್ಯಾನ್ ಗಳನ್ನು ಅನುಸರಿಸಲು ಸಿದ್ಧತೆ ನಡೆಸಿದೆ. ಅದಕ್ಕಾಗಿ ಬಿ.ಎಲ್.ಸಂತೋಷ್ ಖುದ್ದು ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡ್ತಿದ್ದು, ಯಾವ ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುವ ಕುದುರೆ? ಯಾರಿಗೆ ಜನರ ಬೆಂಬಲ ಇದೆ,ಇಲ್ಲ, ಯಾರಿಂದ ಪಕ್ಷದ ಸೀಟುಗಳ ಸಂಖ್ಯೆ ಹೆಚ್ಚಬಹುದು ಎಂಬ ಮಾಹಿತಿ ಪಡೆಯುತ್ತಿದ್ದಾರೆ. ಉತ್ತರದ ರಾಜ್ಯಗಳಂತೆ ರಾಜ್ಯದಲ್ಲೂ ಈ ಭಾರಿ ಹೊಸ ಹಾಗೂ ಯುವ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡೋ ಸಾಧ್ಯತೆಗಳಿದ್ದು, ಬಹುತೇಕ ಸೀನಿಯರ್ಸ್ ಗೆ ಗೇಟ್ ಪಾಸ್ ನೀಡೋ ಸಾಧ್ಯತೆ ಇದೆ.

ಮಾತ್ರವಲ್ಲ ಕುಟುಂಬ ರಾಜಕರಣಕ್ಕೂ ಬ್ರೇಕ್ ಹಾಕಿ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಮನ್ನಣೆ ನೀಡೋ ಸಾಧ್ಯತೆ ಹೆಚ್ಚಿದೆ. ಮೂಲಗಳ ಮಾಹಿತಿ ಪ್ರಕಾರ ಬಿಜೆಪಿಯಲ್ಲಿ ಈಗ ಬಹುತೇಕ ಟಿಕೆಟ್ ಫೈನಲ್ ಮಾಡುವುದೆ ಬಿ.ಎಲ್.ಸಂತೋಷ್.‌ಹೀಗಾಗಿ ಸೋಲು ಗೆಲುವಿನ ಹೊಣೆ ಕೂಡ ಅವರೇ ಹೊರಬೇಕಾಗುತ್ತದೆ. ಇದೇ ಕಾರಣಕ್ಕೆ ಬಿ‌.ಎಲ್.ಸಂತೋಷ್ ಕೋಲಾರದಿಂದ ಆರಂಭಿಸಿ, ಬೀದರ್ ಕಲ್ಬುರ್ಗಿವರೆಗೂ ಬಿ.ಎಲ್.ಎಸ್ ಖುದ್ದು ಪ್ರಯಾಣ ಮಾಡ್ತಿದ್ದು ವಿಧಾನಸಭೆ ಚುನಾವಣೆ ಜೊತೆಯಲ್ಲೆ ಲೋಕಸಭಾ ಚುನಾವಣೆಯ ಟಿಕೇಟ್ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ ಎನ್ನಲಾಗ್ತಿದೆ.

ವಿಧಾನಸಭಾ ಹಾಗೂ ಲೋಕಸಭಾ ಎರಡೂ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಲೋಕಲ್ ಲೆಕ್ಕಾಚಾರ ಮೀರಿದ ಹೈಕಮಾಂಡ್ ತಾಳಮೇಳಕ್ಕೆ ಶೃತಿ ಹೊಂದಿಸಲು ಸಂತೋಷ್ ಕಣಕ್ಕಿಳಿದಿದ್ದು, ಬಿಜೆಪಿಗೆ ಇದು ಎಷ್ಟರ ಮಟ್ಟಿಗೆ ಪ್ಲಸ್ ಆಗತ್ತೆ ಕಾದುನೋಡಬೇಕಿದೆ.

ಇದನ್ನೂ ಓದಿ : ಬಿಜೆಪಿ ಕೋರ್ ಕಮಿಟಿ ಸಭೆ: ಬಹುಮತ ಪಡೆಯಲು ABCD ಸೂತ್ರ!

ಇದನ್ನೂ ಓದಿ : ಕಾಪುಗೆ ಗುರ್ಮೆ, ಉಡುಪಿಗೆ ಪ್ರಮೋದ್‌, ಬೈಂದೂರಿಗೆ ಕೊಡ್ಗಿ ಏನಿದು ಬಿಜೆಪಿ ಲೆಕ್ಕಾಚಾರ ?

Karnataka MLA Election 2023 BJP Ticket Distribution BL Santhosh

Comments are closed.