ಬಿಜೆಪಿಯಲ್ಲಿ ಬಿ.ವೈ.ವಿಜಯೇಂದ್ರಗೆ ಡಿಮ್ಯಾಂಡೋ ಡಿಮ್ಯಾಂಡ್: ಪ್ರಚಾರಕ್ಕೆ ಕಳುಹಿಸುವಂತೆ ಅಮಿತ್ ಶಾ ಬಳಿ ಶಾಸಕರ ಮನವಿ

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರನ್ನು ಕಡೆಗಣಿಸಲಾಗಿದೆ ಎಂಬ ಮಾತಿಗಿಂತ ಬಿಎಸ್ವೈ ಬಿಜೆಪಿಗೆ ಅನಿವಾರ್ಯ ಎಂಬ ಮಾತೇ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದಕ್ಕೆ ಪೂರಕ ಎಂಬಂತೇ ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಅವರಿಗೆ ಬೇಡಿಕೆ ಹೆಚ್ಚಿದೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗೆಲ್ಲುವ ಉದ್ದೇಶಕ್ಕಾಗಿ ರಾಜ್ಯ ಬಿಜೆಪಿಯ ಹಾಲಿ ಶಾಸಕರು, ಟಿಕೇಟ್ ಆಕಾಂಕ್ಷಿಗಳು ನೇರವಾಗಿ ಹೈಕಮಾಂಡ್ ಬಳಿ ಬಿವೈವಿಜಯೇಂದ್ರಗಾಗಿ ಬೇಡಿಕೆ ಇಟ್ಟಿದ್ದಾರಂತೆ.

ಅದರಲ್ಲೂ ಪ್ರಮುಖವಾಗಿ ಹಳೆ ಮೈಸೂರು ಭಾಗದಲ್ಲಿ ಬಿವೈವಿಯನ್ನು ಉಸ್ತುವಾರಿ ನಾಯಕರನ್ನಾಗಿ ಮಾಡಿ ಎಂದು ಬಿಜೆಪಿ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿಯೂ ಮನವಿ ಮಾಡಿದ್ದಾರಂತೆ. ವಲಸಿಗ ಸಚಿವ ನಾರಾಯಣಗೌಡರು ನೇರವಾಗಿ ಅಮಿತ್ ಶಾ ಬಳಿ ಮನವಿ ಮಾಡಿದ್ದಾರಂತೆ. ಕಾಂಗ್ರೆಸ್ ಸೇರಲು ಮುಂದಾಗಿದ್ದ ನಾರಯಣಗೌಡರನ್ನು ಶಾ ಕರೆದು ಸಂಧಾನ ಮಾತುಕತೆ ನಡೆಸಿದ್ದರು. ಈ ವೇಳೆ ನಾನು ಪಕ್ಷದಲ್ಲಿ ಇರ್ತೇನೆ, ಆದರೆ ನನ್ನ ಕ್ಷೇತ್ರದಲ್ಲಿ ಗೆಲ್ಲಬೇಕು. ಅದಕ್ಕಾಗಿ ವಿಜಯೇಂದ್ರಗೆ ಮೈಸೂರು ಭಾಗದ ಉಸ್ತುವಾರಿ ಕೊಡಿ ಅವರಿಂದ ನಾನು ಅಲ್ಲದೇ ಉಳಿದವರು ಕೂಡ ಗೆಲ್ಲುತ್ತಾರೆ ಎಂದಿದ್ದಾರಂತೆ.

ಕೇವಲ ನಾರಾಯಣ ಗೌಡ ಮಾತ್ರವಲ್ಲ, ಶಾಸಕ ನಿರಂಜನ್ ಇದೇ ವಾದವನ್ನು ಮುಂದಿಟ್ಟಿದ್ದಾರೆ. ಗುಂಡ್ಲುಪೇಟೆ ಶಾಸಕರಾಗಿರುವ ನಿರಂಜನ್ ಕುಮಾರ್ ಕಳೆದ ಬಾರಿಯ ಚುನಾವಣೆ ಯಲ್ಲಿ ಯಡಿಯೂರಪ್ಪ ಅವರ ಶಕ್ತಿಯಿಂದ ಗೆದ್ದಿದ್ದರು. ಅಲ್ಲದೇ ಚಾಮರಾಜನಗರ ಜಿಲ್ಲೆಯ ಸ್ಥಳೀಯ ಮುಖಂಡರಿಂದ ಭಾರಿ ಭಾರಿ ಡಿಮ್ಯಾಂಡ್ ಬಂದಿದ್ದು, ಸಚಿವ ಸೋಮಣ್ಣ ಬೇಡ ವಿಜಯೇಂದ್ರ ಬೇಕೇ ಬೇಕು ಎಂದು ಬೇಡಿಕೆ ಇಟ್ಟಿದ್ದಾರಂತೆ. ಇದನ್ನೂ ಓದಿ : ಟಿಕೇಟ್ ಹಂಚಿದರೇ ಅಸಮಧಾನದ ಭೀತಿ: ಇಲ್ಲಿದೆ ಬಿಜೆಪಿಗೆ ತಲೆನೋವಾದ ಕ್ಷೇತ್ರಗಳ ಡಿಟೇಲ್ಸ್

ಕಳೆದ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಗೆಲ್ಲಿಸಿದ್ದ ವಿಜಯೇಂದ್ರ‌ ಹಳೆ ಮೈಸೂರು ಭಾಗದ ತಮ್ಮ ಸಮುದಾಯದ ನಾಯಕರ ಜೊತೆಗೂ ಸಂಪರ್ಕ ಹೊಂದಿದ್ದು, ಯುವ ಮತದಾರರರಿಂದ ಯುವ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್- ಜೆಡಿಎಸ್ ಅಭ್ಯರ್ಥಿ ಗಳ ವಿರುದ್ದ ತಮ್ಮದೇ ತಂತ್ರಗಾರಿಕೆ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಚಾಣಕ್ಯತನ ಇದೆ. ವಿಜಯೇಂದ್ರ‌ ಬೇಕೆಂದು ಆಕಾಂಕ್ಷಿ ಗಳು ಹೈಕಮಾಂಡ್ ಮೊರೆ ಹೋಗ್ತಿದ್ದಾರೆ.ಇದನ್ನೂ ಓದಿ : Aadhaar PAN Linking:ನಿಮ್ಮ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ? ಪರಿಶೀಲಿಸುವುದು ಹೇಗೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಹಾಸನದಲ್ಲಿ ಬಿಜೆಪಿಗೆ ನೆಲೆ ತಂದ ಶಾಸಕ ಪ್ರೀತಮ್ ಗೌಡ ಕೂಡ ವಿಜಯೇಂದ್ರ‌ ಪರ ಬ್ಯಾಟಿಂಗ್ ಮಾಡ್ತಿದ್ದು, ಹಾಸನದಲ್ಲಿ ಜೆಡಿಎಸ್ ನಾಯಕರ ಎದುರಿಸಲು ವಿಜಯೇಂದ್ರ‌ ಬೆಂಬಲ ಕೇಳಿದ್ದಾರಂತೆ. ಮಾರ್ಚ್ 31 ರಂದು ನಡೆಯೋ‌ ಬಿಜೆಪಿ ಸ್ಕ್ರೀನಿಂಗ್ ಕಮಿಟಿ ಅಂತಿಮ ಸಭೆಯ ವೇಳೆ ಎಲ್ಲ ಆಕಾಂಕ್ಷಿಗಳು ಸಾಮೂಹಿಕವಾಗಿ ವಿಜಯೇಂದ್ರ ಅವರಿಂದ ಕ್ಷೇತ್ರ ಪ್ರಚಾರಕ್ಕೆ ಮನವಿ ಮಾಡಲಿದ್ದಾರೆ ಎನ್ನಲಾಗ್ತಿದೆ. ಇದರಿಂದ ಈಗ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಬಳಿಕ ಬಿ.ವೈ.ವಿಜಯೇಂದ್ರ ಯುಗ ಆರಂಭವಾಗಿದೆ ಎಂಬ ಮಾತು ಕೇಳಿಬರ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಸ್ಟಾರ್‌ ಪ್ರಚಾರಕರ ಸಾಲಿನಲ್ಲಿ ವಿಜಯೇಂದ್ರ (B Y Vijayendra) ಅವರ ಹೆಸರು ಕೇಳಿಬಂದಿದೆ.

Comments are closed.