BJP Candidates List : ಬಿಜೆಪಿಯಲ್ಲಿ ಅಂತಿಮ ಹಂತಕ್ಕೆ ಟಿಕೇಟ್ ಸರ್ಕಸ್: ದೆಹಲಿ ತಲುಪಿದ ಪಟ್ಟಿ ಹಾಗೂ ಅಭ್ಯರ್ಥಿಗಳು

ಬೆಂಗಳೂರು : ಸಭೆ ಮೇಲೆ ಸಭೆ ನಡೆಸಿದ ರಾಜ್ಯ ಬಿಜೆಪಿಯಲ್ಲಿ ಈಗ ಅಭ್ಯರ್ಥಿಗಳ ಆಯ್ಕೆಯ ಅಂತಿಮ ಹಂತದ ಕಸರತ್ತು ಆರಂಭಗೊಂಡಿದೆ. ಸದ್ಯ ಅಂತಿಮಗೊಂಡಿರುವ ಪಟ್ಟಿ (BJP Candidates List) ದೆಹಲಿ ಯಲ್ಲಿದ್ದು ಶುಕ್ರವಾರದಿಂದ ಎರಡು ದಿನಗಳ ಕಾಲ ನಡೆಯುವ ಸಭೆಯಲ್ಲಿ ಪಟ್ಟಿಗೆ ಅಂತಿಮ ಮುದ್ರೆ ಬೀಳಲಿದೆ. ಹೀಗಾಗಿ ಬಿಜೆಪಿ ಟಿಕೇಟ್ ಆಕಾಂಕ್ಷಿಗಳ ದಂಡು ದೆಹಲಿಗೆ ದೌಡಾಯಿಸಿದೆ.

ಅಳೆದು ಸುರಿದು ತೂಗಿ ಒಂದೊಂದು ಕ್ಷೇತ್ರಕ್ಕೂ ಅಭ್ಯರ್ಥಿ ಆಯ್ಕೆ ಮಾಡ್ತಿರೋ ಬಿಜೆಪಿ ಏಪ್ರಿಲ್ 10 ರ ವೇಳೆಗೆ ಟಿಕೇಟ್ ಪಟ್ಟಿ ಅಂತಿಮಗೊಳಿಸಿ ಪ್ರಕಟಿಸೋ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೊನೆ ಕ್ಷಣದ ಸರ್ಕಸ್ ಜೋರಾಗಿದ್ದು ಇದುವರೆಗೂ ರಾಜ್ಯದಲ್ಲಿದ್ದ ರಾಜಕಾರಣ ಈಗ ದೆಹಲಿಗೆ ಶಿಫ್ಟ್ ಆಗಿದೆ. ಇಂದಿನಿಂದ ಎರಡು ದಿನಗಳ ಕಾಲ ದೆಹಲಿಯಲ್ಲಿ ಕೇಂದ್ರಿಯ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಇದಕ್ಕಾಗಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ವೈ ದೆಹಲಿಗೆ ತೆರಳಿದ್ದಾರೆ. ತಾಲೂಕು ಮಟ್ಟದಿಂದ ಹಲವು ಹಂತದಲ್ಲಿ ನಡೆದ ಸಭೆಯ ಫಲವಾಗಿ ಸಿದ್ಧಗೊಂಡ ಪಟ್ಟಿಯಲ್ಲಿ ಒಂದೊಂದು ಸ್ಥಾನಕ್ಕೆ ಮೂರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸ ಲಾಗಿದ್ದು, ಈಗ ದೆಹಲಿಯಲ್ಲಿ ಬಸವರಾಜ್ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಷಿ,ಅರುಣ ಸಿಂಗ್ ಸೇರಿದಂತೆ ರಾಜ್ಯ ಹಾಗೂ ಕೇಂದ್ರದ ನಾಯಕರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ (BJP Candidates List) ಅಂತಿಮಗೊಳ್ಳಲಿದೆ.

ಅಭ್ಯರ್ಥಿಗಳ ಆಯ್ಕೆಯಲ್ಲಿ ಗುಜರಾತ್ ಹಾಗೂ ಯುಪಿ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದ್ದು, ಇದರಂತೆ ಹಿರಿಯರ ಬದಲಾಗಿ ಯುವಕರಿಗೆ ಅವಕಾಶ ಕೊಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗ್ತಿದೆ. ಸದ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಸೂಕ್ಷ್ಮವಾದ ಹೆಜ್ಜೆಗಳನ್ನಿಟ್ಟಿದ್ದು, ಕೇವಲ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪ್ರಕಟಿಸಿದ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಲಿದೆ ಎನ್ನಲಾಗ್ತಿದೆ. ಇದನ್ನೂ ಓದಿ : Congress Candidate List : ಕಾಂಗ್ರೆಸ್‌ ಪಕ್ಷದ 42 ಅಭ್ಯರ್ಥಿಗಳ ಎರಡನೇ ಹಂತದ ಪಟ್ಟಿ ರಿಲೀಸ್‌

ಇನ್ನು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ದೆಹಲಿಗೆ ದೌಡಾಯಿಸಿದ್ದು, ಟಿಕೇಟ್ ಪಡೆದುಕೊಳ್ಳಲು ಅಂತಿಮ ಹಂತದ ಕಸರತ್ತುಗಳನ್ನು ಆರಂಭಿಸಿದ್ದಾರೆ. ಸ್ವತಃ ರಮೇಶ್ ಜಾರಕಿಹೊಳಿ ಕೂಡ ದೆಹಲಿಗೆ ತೆರಳಿದ್ದು, ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್ ಮೂಲಕ ಲಾಭಿ ಮಾಡಿಸಿ ತಮ್ಮ ಆಪ್ತ ಮಹೇಶ್ ಕುಮಟಳ್ಳಿಗೆ ಟಿಕೇಟ್ ಕೊಡಿಸುವ ಪ್ರಯತ್ನ ನಡೆಸಿದ್ದಾರಂತೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕುತೂಹಲ ಮೂಡಿಸಿದ್ದ ಬಿಜೆಪಿಯ ಟಿಕೇಟ್ ರಾಜಕಾರಣ ಈಗ ದೆಹಲಿಗೆ ಅಂಗಳ ತಲುಪಿದ್ದು ದೆಹಲಿಯಿಂದ ಟಿಕೇಟ್ ಗೆದ್ದು ಬರೋ ಶೂರ ಯಾರು ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ : ಕಸದ ಅಟೋ ಬಳಸಿ ಬಿಬಿಎಂಪಿ ಚುನಾವಣೆ ಜಾಗೃತಿ: ಮತದಾನ ಪ್ರಮಾಣ 65% ಏರಿಸೋ ಗುರಿ

Comments are closed.