ಬೆಂಗಳೂರು : ಕೃಷಿ ಕಾಯ್ಡಯನ್ನು ವಿರೋಧಿಸಿ ರೈತ ಸಂಘ ಕರೆ ನೀಡಿರುವ ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಹಲವು ಸಂಘಟನೆಗಳು ಬೆಂಬಲ ನೀಡಿದ್ರೆ, ಇನ್ನೂ ಹಲವು ಸಂಘಟನೆಗಳು ಕೇವಲ ಬಾಹ್ಯ ಬೆಂಬಲವನ್ನಷ್ಟೇ ನೀಡಿವೆ. ಹಾಗಾದ್ರೆ ನಾಳೆ ಏನೆಲ್ಲಾ ಇರುತ್ತೆ, ಏನು ಇರಲ್ಲ ಅನ್ನೋ ಮಾಹಿತಿ ಇಲ್ಲಿದೆ.
ದೇಶದಾದ್ಯಂತ ನಾಳೆ ಭಾರತ್ ಬಂದ್ ಆಚರಿಸಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾಗಿದೆ. ಮುಖ್ಯವಾಗಿ ರೈತ ಸಂಘ, ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ, ದಲಿತ ಸಂಘಟನೆಗಳು, ಕಾರ್ಮಿಕ ಸಂಘಗಳ ಯೂನಿಯನ್, ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕನ್ನಡ ಒಕ್ಕೂಟ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ನಾಳೆಯ ಬಂದ್ ಗೆ ಬೆಂಬಲವನ್ನು ಸೂಚಿಸಿದೆ.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಾಳೆ ರಾಜ್ಯದಲ್ಲಿ ನಡೆಯಲಿರುವ ಭಾರತ್ ಬಂದ್ ಗೆ ಈಗಾಗಲೇ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಹಲವು ಕಡೆಗಳಲ್ಲಿ ಪ್ರತಿಭಟನಾ ಜಾಥ ಮಾಡಲು ಫ್ಲ್ಯಾನ್ ರೂಪಿಸಲಾಗಿದ್ದು, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ನಾಳೆ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ. ಅಲ್ಲದೇ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯೂ ಬಂದ್‌ಗೆ ಬೆಂಬಲ ಸೂಚಿಸಲಾಗಿದೆ. ಆದರೆ ಕರಾವಳಿ ಜಿಲ್ಲೆಗಳಲ್ಲಿ ನಾಳೆಯ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಲಿದೆ.
ಇನ್ನು ರಾಜ್ಯ ಹೋಟೆಲ್ ಮಾಲೀಕರ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘ, ಲಾರಿ ಮಾಲೀಕರ ಸಂಘ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು, ಖಾಸಗಿ ಶಾಲೆ ಹಾಗೂ ಕಾಲೇಜುಗಳ ಒಕ್ಕೂಟ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಬೆಂಗಳೂರು ವಕೀಲರ ಸಂಘ, ಬಿಎಂಆರ್‌ಸಿಎಲ್ ನೌಕರರು, ಎಪಿಎಂಸಿ ವರ್ತಕರ ಸಂಘಗಳು ನಾಳೆಯ ಬಂದ್‌ಗೆ ಬೆಂಬಲವನ್ನು ನೀಡಿಲ್ಲ. ಹೀಗಾಗಿ ನಾಳೆಯ ಬಂದ್ ಅಷ್ಟೊಂದು ಪ್ರಮಾಣದಲ್ಲಿ ಎಫೆಕ್ಟ್ ರಾಜ್ಯಕ್ಕೆ ತಟ್ಟುವ ಸಾಧ್ಯತೆ ತೀರಾ ಕಡಿಮೆ.
ನಾಳೆ ಶಾಲೆ, ಕಾಲೇಜುಗಳು ಎಂದಿನಂತೆ ನಡೆಯಲಿದ್ದು, ಸರಕಾರಿ ಹಾಗೂ ಖಾಸಗಿ ಬಸ್ಸುಗಳು ಕೂಡ ಸಂಚಾರವನ್ನು ನಡೆಸಲಿದೆ. ಆಟೋ, ಟ್ಯಾಕ್ಸಿಗಳು ರಸ್ತೆಗೆ ಇಳಿಯುವುದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿಯೂ ಸಮಸ್ಯೆಯಾಗುವ ಸಾಧ್ಯತೆ ತೀರಾ ಕಡಿಮೆ. ಇನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಬಲವಂತವಾಗಿ ಬಂದ್ ಮಾಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಭಾರತ್ ಬಂದ್ ಬೇಕಿತ್ತಾ ಅನ್ನೋ ಕುರಿತು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ : ಕೈ ಕಾರ್ಯಕರ್ತರಿಂದ ರೈಡ್ ಫಾರ್ ಯೂನಿಟಿ ರಾಲಿ: ರಾಜ್ಯ ಸರಕಾರ ವಿರುದ್ದ ಆಕ್ರೋಶ
ಇದನ್ನೂ ಓದಿ : ಸುಳ್ಳು ಹೇಳುವುದಕ್ಕೂ ಇತಿಮಿತಿ ಇರಬೇಕು : ಸಿದ್ದು ವಿರುದ್ದ ಕುಮಾರಸ್ವಾಮಿ ವಾಗ್ದಾಳಿ
(Bharat Bandh tomorrow : What’s in Karnataka)