ವಾಹನ ಮಾಲೀಕರಿಗೆ ಶಾಕ್‌ ! ಇನ್ಮುಂದೆ ರಸ್ತೆಗೆ ಇಳಿಯುವಂತಿಲ್ಲ 10, 15 ವರ್ಷ ಹಳೆಯ ಡೀಸೆಲ್‌, ಪೆಟ್ರೋಲ್‌ ವಾಹನ

ದೆಹಲಿ : ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನರು ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆದರೆ ವಾಯು ಮಾಲಿನ್ಯಕ್ಕೆ ಪ್ರಮುಖವಾಗಿ ಕಾರಣವಾಗ್ತಿರೋದು ವಾಹನಗಳು ಹೊರ ಸೂಸುವ ಹೊಗೆ. ಅದ್ರಲ್ಲೂ ಮಹಾನಗರಗಳಲ್ಲಿ ಪರಿಶುದ್ದ ಗಾಳಿ ಸಿಗದೆ, ಹಣಕೊಟ್ಟು ಆಮ್ಲಜನಕ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕು ಸರಕಾರ ಇದೀಗ ಹೊಸ ಕಾನೂನು ಜಾರಿಗೆ ತಂದಿದ್ದು,ಇನ್ಮುಂದೆ ಹಳೆಯ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ.

ಪ್ರತಿ ವರ್ಷ ವಾಯುಮಾಲಿನ್ಯ ಮಿತಿಮೀರುವ ಪರಿಣಾಮ ‘ವಿಷ ಅನಿಲ ಕೊಠಡಿ’ ಯಂತಾಗಿದೆ ರಾಷ್ಟ್ರ ರಾಜಧಾನಿ ದೆಹಲಿ. ದೆಹಲಿಯ ಸಾರಿಗೆ ಇಲಾಖೆ (ಡಿಟಿಡಿ) ಹೊಸ ಯೋಜನೆ ಶುರುಮಾಡಿದೆ. 10 ವರ್ಷಕ್ಕೂ ಹಳೆಯದಾದ ಡೀಸೆಲ್‌ ಚಾಲಿತ ವಾಹನಗಳು ಹಾಗೂ 15 ವರ್ಷಕ್ಕೂ ಹಳೆಯ ಪೆಟ್ರೋಲ್‌ ರಸ್ತೆಗೆ ಇಳಿಯುವಂತಿಲ್ಲ‌ ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ. ಇದು ಕೇಂದ್ರ ಸರ್ಕಾರದ ಸಾರಿಗೆ ಸ್ಕ್ರ್ಯಾಪಿಂಗ್‌ ಪಾಲಿಸಿ ಅನ್ವಯ ಜಾರಿಗೆ ಬಂದಿದೆ. ಈಗಾಗಲೇ ಹೊಸ ಪಾಲಿಸಿಯನ್ನು ಎಲ್ಲ ರಾಜ್ಯಗಳಲ್ಲೂ ಜಾರಿಗೆ ಕೇಂದ್ರ ಮುಂದಾಗಿದೆ.

ಇದನ್ನೂ ಓದಿ: Hybrid Flying Car: ರಸ್ತೆಗುಂಡಿ, ಟ್ರಾಫಿಕ್ ಕಿರಿ ಕಿರಿಯೇ ಇಲ್ಲ: ಸದ್ಯದಲ್ಲೇ ಬರಲಿದೆ ಹಾರುವ ಕಾರು

ಸ್ಕ್ರ್ಯಾಪ್‌ ನೀತಿ ಆಯ್ಕೆಗೆ ವಾಹನಗಳ ಮಾಲೀಕರಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ವಾಯುಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಸಲುವಾಗಿ ಪ್ರಮುಖವಾಗಿ ವಾಣಿಜ್ಯ ಬಳಕೆಯ ಡೀಸೆಲ್‌ ಚಾಲಿತ ಹಳೆಯ ವಾಹನಗಳನ್ನು ರಸ್ತೆಗೆ ಇಳಿಯದಂತೆ ತಡೆಯುವುದು ಈ ನೀತಿಯ ಉದ್ದೇಶವಾಗಿದೆ. ಒಂದು ವೇಳೆ ಹಳೆಯ ವಾಹನಗಳನ್ನು ಮಾಲೀಕರು ರಸ್ತೆಗೆ ಇಳಿಸಲೇಬೇಕಾದಲ್ಲಿ ಸಾರಿಗೆ ಇಲಾಖೆಯ ಆಟೊಮೇಟೆಡ್‌ ಪರೀಕ್ಷೆಯಲ್ಲಿ ವಾಹನ ‘ಪಾಸ್‌’ ಆಗಬೇಕು. ಜತೆಗೆ ಹೊಸ ವಾಹನ ಖರೀದಿ ಬಳಿಕ 15 ವರ್ಷ ಕಳೆದ ಮೇಲೆ ಮಾಡಲಾಗುವ ‘ಫಿಟ್‌ನೆಸ್‌ ಪರೀಕ್ಷೆ’, ‘ಎಮಿಷನ್‌ ಟೆಸ್ಟ್‌’ ಗಳಲ್ಲಿ ಕೂಡ ವಾಹನವು ಪಾಸ್‌ ಆಗಲೇಬೇಕಿದೆ.

ಇದನ್ನೂ ಓದಿ: ಭಾರತದಲ್ಲಿದೆ ವಿಶ್ವದ ಅತಿ ಎತ್ತರದ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ

ಇದನ್ನು ಮಾಡಿಸದೆಯೇ ಅಸಡ್ಡೆ ಮಾಡಿ ಹಳೆಯ ವಾಹನವು ರಸ್ತೆಗೆ ಇಳಿದಲ್ಲಿ, 1988ರ ಮೋಟಾರ್‌ ವಾಹನಗಳ ಕಾಯಿದೆ ಅಡಿಯಲ್ಲಿ ಭಾರಿ ದಂಡ ತೆರಬೇಕಾದೀತು. ಸ್ಕ್ರ್ಯಾಪ್‌ ಮಾಡಲಾದ ವಾಹನದ ಸರ್ಟಿಫಿಕೇಟ್‌ ಪಡೆದು ಹೊಸ ವಾಹನ ಖರೀದಿಗೆ ಮುಂದಾದಲ್ಲಿ ಕೆಲವು ಕಾರು ತಯಾರಿಕೆ ಕಂಪನಿಗಳು ಭರ್ಜರಿ ಕೊಡುಗೆಗಳನ್ನು ಕೂಡ ನೀಡುತ್ತಿವೆ. ಹಳೆಯ ವಾಹನಗಳನ್ನು ಮಹೀಂದ್ರಾ ಕಂಪನಿಯು 8 ರಿಂದ 80 ಸಾವಿರ ರೂ.ಗಳವರೆಗೆ ಖರೀದಿಸುತ್ತಿದೆ ಕೂಡ. ಸರ್ಕಾರದ ಈ ನಿಯಮವನ್ನು ಎಲ್ಲರೂ ಪಾಲಿಸಿದರೆ ವಾಯು ಮಾಲಿನ್ಯವನ್ನು ಸ್ವಪ್ತವಾದರು ಕಡಿಮೆ ಮಾಡಹುದು.

(Shocking News! A 10, 15 year old diesel and a petrol vehicle can not go down the road)

Comments are closed.