ಬೆಂಗಳೂರು : ಕೊರೊನಾ ಎರಡನೇ ರಾಜ್ಯದಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ. ಇದೀಗ ಕೊರೊನಾ ಹೊಸ ದಾಖಲೆಯನ್ನು ಬರೆದಿದೆ. ಇಷ್ಟು ದಿನ 6 ಸಾವಿರದಷ್ಟಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇದೀಗ 8 ಸಾವಿರದ ಅಂಚಿನಲ್ಲಿದೆ.

ರಾಜ್ಯದಲ್ಲಿ ಒಂದೇ ದಿನ 7,955 ಮಂದಿಗೆ ಸೋಂಕು ದೃಢಪಟ್ಟಿದೆ. 46 ಮಂದಿಯನ್ನು ಕೊರೊನಾ ವೈರಸ್ ಸೋಂಕು ಬಲಿ ಪಡೆದಿದೆ. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕಾಣಿಸಿ ಕೊಳ್ಳುತ್ತಿದೆ. ಬೆಂಗಳೂರಲ್ಲಿ 5,576 ಮಂದಿ ಸೋಂಕಿಗೆ ತುತ್ತಾಗಿದ್ದು, 29 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ ಮೈಸೂರಿನಲ್ಲಿ 283, ಕಲಬುರಗಿಯಲ್ಲಿ 211 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,48,085ಕ್ಕೆ ಏರಿಕೆಯಾಗಿದ್ದು, ಈಗಾಗಲೇ 9,77,169 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ದ್ದಾರೆ. ಇನ್ನು ರಾಜ್ಯದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 58,084ಕ್ಕೆ ಏರಿಕೆಯಾಗಿದ್ದು, 12,813 ಮಂದಿಯನ್ನು ಹೆಮ್ಮಾರಿ ಕೊರೊನಾ ಬಲಿ ಪಡೆದಿದೆ.