18 ವರ್ಷ ಮೇಲ್ಪಟ್ಟವರಿಗೆ ತಮ್ಮ ಧರ್ಮವನ್ನು ಆಯ್ದುಕೊಳ್ಳುವ  ಆರ್ಹತೆಯಿದೆ : ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ : 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿ ತನ್ನ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಪೂರ್ಣ ಪ್ರಮಾಣದಲ್ಲಿ ಅರ್ಹರು ಎಂದು ಸುಪ್ರೀಂ ಕೋರ್ಟ್ ಮಹತ್ಚದ ಆದೇಶ ಹೊರಡಿಸಿದೆ.

ಧಾರ್ಮಿಕ ಬಲತ್ಕಾರದ ಮತಾಂತರ ಹಾಗೂ ಮಾಟ, ಮಂತ್ರವನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ‌ ನಡೆಸಿದ ಸುಪ್ರೀಂ ಕೋರ್ಟ್ ವಜಾಗೊಳಿಸಿ ಅದೇಶ ಹೊರಡಿಸಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಆರ್.ಎಫ್ ನಾರಿಮನ್, ಬಿ.ಆರ್.ಗವಾಯಿ ಮತ್ತು ಹೃಷಿಕೇಶ್ ರಾಯ್ ನೇತೃತ್ವದ ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನ ನಡೆಸಿದೆ. ಸಂವಿಧಾನ ವಿಧಿ 32ರ ಅಡಿಯಲ್ಲಿ ಯಾವ ರೀತಿಯ ರಿಟ್ ಅರ್ಜಿಯನ್ನು ಹಾಕಿದ್ದೀರಿ, ನೀವು ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ನೀವು ಹೀಗೆ ಅರ್ಜಿ ಹಾಕಿ ವಾದ ಮಾಡುವುದಕ್ಕೆ ನೀವೇ ಹೊಣೆಗಾರರು ಎಂದು ಅರ್ಜಿದಾರರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದೆ.

18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿವರು ತಮ್ಮ ಧರ್ಮವನ್ನು ತಾವೇ ಆಯ್ಕೆ ಮಾಡಿಕೊಳ್ಳಲು ಶಕ್ತ. ಹೀಗಾಗಿ ಆತನ ಇಚ್ಚೆಯಂತೆ ಧರ್ಮ ವನ್ನು ಆಯ್ಕೆ ಮಾಡಲು ಬಿಡದಿರಲು ಯಾವುದೇ ಕಾರಣವಿಲ್ಲ ಎಂದು ಸುಪ್ರೀಂ ಕೋರ್ಟ್ ಆಭಿಪ್ರಾಯಪಟ್ಟಿದೆ.

Comments are closed.