Hotel Food: ಹೊಟೇಲ್ ಊಟ ತಿಂಡಿ ಪ್ರಿಯರಿಗೆ ಶಾಕ್: ಜನವರಿಯಿಂದ ಏರಿಕೆಯಾಗಲಿದೆ ಬೆಲೆ

ಬೆಂಗಳೂರು: ಗ್ಯಾಸ್ ಸಿಲೆಂಡರ್, ಅಡುಗೆ ಎಣ್ಣೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ, ಹೊಟೇಲ್ ಊಟ-ತಿಂಡಿ ಪ್ರಿಯರಿಗೆ ಶಾಕ್ ಎದುರಾಗಿದೆ. ಮುಂದಿನ ಜನವರಿಯಿಂದ ಊಟ-ತಿಂಡಿ ದರ ಏರಿಸಲು ಹೊಟೇಲ್ ಮಾಲೀಕರು ನಿರ್ಧರಿಸಿದ್ದಾರೆ.

ರಾಜ್ಯದ ಹೊಟೇಲ್ ಗಳಲ್ಲಿ ಸದ್ಯ ಮೂರು ತಿಂಗಳ ಕಾಲ ಇದೇ ಬೆಲೆ ಇರಲಿದ್ದು, 2022 ರ ಜನವರಿಯಿಂದ ಊಟ ತಿಂಡಿಯ ಬೆಲೆಯಲ್ಲಿ ಹಂತ ಹಂತವಾಗಿ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.

ಸದ್ಯ ಎರಡು ವರ್ಷಗಳಿಂದ ಕೊರೋನಾ ಪ್ರಭಾವದಿಂದ ಹೊಟೇಲ್ ಉದ್ಯಮ ಬೀದಿಗೆ ಬಂದಿದೆ. ಅದೇಷ್ಟೋ ಹೊಟೇಲ್ ಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಹೀಗಾಗಿ ಸದ್ಯ ಹೊಟೇಲ್ ಊಟ ತಿಂಡಿಯಲ್ಲಿ ಬೆಲೆ ಏರಿಕೆ ಪ್ರಸ್ತಾಪವಿಲ್ಲ.

ಲಾಕ್ ಡೌನ್ ತೆರವುಗೊಂಡ ಬಳಿಕ ನಿಧಾನಕ್ಕೆ ಹೊಟೇಲ್ ಉದ್ಯಮ ಚೇತರಿಸಿಕೊಳ್ಳುತ್ತಿದ್ದು, ಜನರು ನಿಧಾನವಾಗಿ  ಹೊಟೇಲ್ ಗಳತ್ತ ಮುಖಮಾಡುತ್ತಿದ್ದಾರೆ. ಹೀಗಾಗಿ ಮೂರು ತಿಂಗಳ ಕಾಲ ಬೆಲೆ ಏರಿಕೆ ಮಾಡದೇ ಜನರು ಹೊಟೇಲ್ ನತ್ತ ಬರುವಂತೆ ಮಾಡುವ ಪ್ಲ್ಯಾನ್ ಹೊಟೇಲ್ ಮಾಲೀಕರದ್ದು.

ಜನವರಿಯಿಂದ ಬೆಲೆ ಏರಿಕೆ ಆಧರಿಸಿ ಊಟ-ತಿಂಡಿ ದರ ಏರಿಸಲು ಹೊಟೇಲ್ ಮಾಲೀಕರ ಸಂಘ ನಿರ್ಧರಿಸಿದೆಯಂತೆ. ಕಳೆದ ಮಾರ್ಚ್ ನಲ್ಲೇ ಏರಿಕೆಯಾಗಬೇಕಿದ್ದ ಹೊಟೇಲ್ ಉತ್ಪನ್ನಗಳ ಬೆಲೆಯನ್ನು ಕೊರೋನಾ ಕಾರಣಕ್ಕೆ ತಡೆಹಿಡಿಯಲಾಗಿತ್ತಂತೆ.

ಹೀಗಾಗಿ ಈಗಾಗಲೇ ಅಡುಗೆ ಅನಿಲ್, ಪೆಟ್ರೋಲ್,ಡಿಸೇಲ್,ಅಡುಗೆ ಎಣ್ಣೆ, ಪ್ರಯಾಣ ದರ ಹೀಗೆ ಎಲ್ಲವೂ ಏರಿಕೆಯಾಗುತ್ತಿರೋದರಿಂದ ಕಂಗಾಲಾಗಿರೋ ಜನ ಸಾಮಾನ್ಯರಿಗೆ ಹೊಟೇಲ್ ಕೂಡ ಜೇಬಿಗೆ ಕತ್ತರಿ ಹಾಕೋ ಲಕ್ಷಣವಿದೆ.  

(shock to hotel food lovers.price hike from january)

Comments are closed.