ರಾಜ್ಯದಲ್ಲಿ ಆರಂಭವಾಗುತ್ತಾ ಪ್ರಾಥಮಿಕ ಶಾಲೆ: ಇಲ್ಲಿದೆ ಲೇಟೆಸ್ಟ್ ಅಪ್ಡೇಟ್

ರಾಜ್ಯದಲ್ಲಿ ಕೊರೋನಾ ಮೂರನೆ ಅಲೆಯ ಭೀತಿಯ ನಡುವೆಯೇ ಶಾಲಾರಂಭದ ಪ್ರಸ್ತಾಪವೂ ಎದುರಾಗಿದ್ದು, ಈ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ. ಸರ್ಕಾರ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಿದೆ ಎಂಬ ಮಾತುಗಳು ಕೇಳಿಬಂದಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಗಣೇಶ ಚತುರ್ಥಿ ಹಬ್ಬ ಇರೋದರಿಂದ ಸದ್ಯ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಚಿಂತನೆ ಇಲ್ಲ ಎಂದಿದ್ದಾರೆ.

6 ಮತ್ತು 8 ನೇ ತರಗತಿ ಬೆನ್ನಲ್ಲೇ 1 ರಿಂದ 5 ನೇ ತರಗತಿಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿತ್ತು. ಆದರೆ ಸದ್ಯ ಈ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.

Dr. sudhakar said There no plan to start primary schools in karnataka

Comments are closed.