ಬೆಳಗಾವಿ : ಪತಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದ ತಪ್ಪಿಗೆ ಪತ್ನಿಗೆ ಇನ್ನಿಲ್ಲದ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ 4 ತಿಂಗಳ ಗರ್ಭಿಣಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಪಾಪಿ ಪತಿಯನ್ನು ಅರೆಸ್ಟ್ ಮಾಡುತ್ತಲೇ ಪತ್ನಿ ಸಾವಿನ ನಿಜಬಣ್ಣ ಬಿಚ್ಚಿಟ್ಟಿದ್ದಾನೆ.
ಬೆಳಗಾವಿ ಜಿಲ್ಲೆಯ ಖಂಜರ್ ಗಲ್ಲಿಯ ನಿವಾಸಿಯಾಗಿರುವ ಮುಸ್ಕಾನ್ ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ಮಹಿಳೆ. ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಮುಸ್ಕಾನ್ ಅವರನ್ನು ಬೆಳಗಾವಿಯ ಶಹಾಪುರದ ಆಳವಣಗಲ್ಲಿಯ ರೋಹಿಮ್ ಎಂಬಾತನ ಜೊತೆಗೆ ಮದುವೆ ಮಾಡಿ ಕೊಡಲಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು.
ದಿನ ಕಳೆಯುತ್ತಿದ್ದಂತೆಯೇ ಪತಿ ರೋಹಿಮ್ ನಿಜಬಣ್ಣ ಬಯಲಾಗಿತ್ತು. ಮುಸ್ಕಾನ್‌ಳ ದೂರದ ಸಂಬಂಧಿಯ ಜೊತೆಗೆ ರೋಹಿಮ್ ಅಕ್ರಮ ಸಂಬಂಧ ಹೊಂದಿರುವ ಆರೋಪ ಕೇಳಿಬಂದಿತ್ತು. ಈ ಕುರಿತು ಮುಸ್ಕಾನ್ ಪತಿಯನ್ನು ಪ್ರಶ್ನಿಸಿದ್ದಾಳೆ. ಇಷ್ಟಕ್ಕೆ ಸಿಟ್ಟಾದ ರೋಹಿತ್ ನಿತ್ಯವೂ ಗಾಂಜಾ ಸೇವಿಸಿ ಗರ್ಭಣಿ ಪತ್ನಿಗೆ ಕಿರುಕುಳ ನೀಡೋದಕ್ಕೆ ಶುರು ಮಾಡಿದ್ದಾನೆ. ಇದೇ ಕಾರಣದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ರೋಹಿಮ್ ವಿರುದ್ದ ವರದಕ್ಷಿಣೆ ಕಿರುಕುಳ, ಚಿತ್ರಹಿಂಸೆ, ದೈಹಿಕ ಹಿಂಸೆ, ಆತ್ಮಹತ್ಯೆ ಪ್ರಚೋದನೆ ಅಡಿಯಲ್ಲಿ ಪ್ರಕರಣದ ದಾಖಲಿಸಿದ್ದಾರೆ. ಈ ಕುರಿತು ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ : 42 ವರ್ಷದ ಕಾಮುಕ ಅರೆಸ್ಟ್
ಇದನ್ನೂ ಓದಿ : ಇಪತ್ತು ರೂಪಾಯಿ ವಿಚಾರಕ್ಕೆ ಸ್ನೇಹಿತನ ಕೊಲೆ : ಮೂವರ ಬಂಧನ
(4 months pregnant suicide: Husband’s legit face exposed in Belagavi)