ಮಂಗಳವಾರ, ಏಪ್ರಿಲ್ 29, 2025
Homekarnatakaಜೆಸಿಬಿ ಯಂತ್ರ ದುರಸ್ಥಿ ವೇಳೆಯಲ್ಲಿ ದುರಂತ : ಯಂತ್ರದಡಿ ಸಿಲುಕಿ ಚಾಲಕ, ಪೌರ ಕಾರ್ಮಿಕ ಸಾವು

ಜೆಸಿಬಿ ಯಂತ್ರ ದುರಸ್ಥಿ ವೇಳೆಯಲ್ಲಿ ದುರಂತ : ಯಂತ್ರದಡಿ ಸಿಲುಕಿ ಚಾಲಕ, ಪೌರ ಕಾರ್ಮಿಕ ಸಾವು

- Advertisement -

ವಿಜಯಪುರ : ಜೆಸಿಬಿ ದುರಸ್ಥಿಯ ವೇಳೆಯಲ್ಲಿ ಇಬ್ಬರು ಕಾರ್ಮಿಕರು ಜೆಸಿಬಿ ಯಂತ್ರಕ್ಕೆ ಸಿಲುಕಿ ಚಾಲಕ ಮತ್ತು ಪೌರಕಾರ್ಮಿಕ  ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ವಿಜಯಪುರದ ಇಂಡಿ ರಸ್ತೆಯಲ್ಲಿ ನಡೆದಿದೆ.

ಜೆಸಿಬಿಯಲ್ಲಿ ಸಿಲುಕಿ ಮೃತಪಟ್ಟವರನ್ನು 35 ವರ್ಷ ರಫೀಕ್ ಹಾಗೂ 50 ವರ್ಷ ಅಯೂಬ್ ಎಂದು ಗುರುತಿಸಲಾಗಿದೆ. ನಗರದ ಇಂಡಿ ರಸ್ತೆ ಬಳಿಯ ಇರುವ ಮಹಾನಗರ ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕದಲ್ಲಿ ಈ ಘಟನೆ ಜರುಗಿದೆ.

ಇದನ್ನೂ ಓದಿ: ಮನೆ ಬಿಟ್ಟು ಓಡಿ ಹೋಗಿದ್ದ 14 ವರ್ಷದ ಬಾಲಕಿಯ ಮೇಲೆ 13 ಮಂದಿಯಿಂದ ಅತ್ಯಾಚಾರ

ಜೆಸಿಬಿಯ ಹೈಡ್ರಾಲಿಕ್‍ನಲ್ಲಿ ದೋಷ ಕಂಟು ಬಂದಿದ್ದು ದುರಸ್ತಿಗಾಗಿ ಈ ಇಬ್ಬರೂ ಕೆಲಸದಲ್ಲಿ ತೊಡಗಿದ್ದರು. ಈ ಹಂತದಲ್ಲಿ ಜೆಸಿಬಿ ಯಂತ್ರ ಚಾಲನೆಗೊಂಡು, ಇಬ್ಬರೂ ಅದರ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ದಿ.ಹಾಸ್ಯನಟ ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದೌರ್ಜನ್ಯ

(Driver, civilian worker deaths under JCB machine repair time machine)

RELATED ARTICLES

Most Popular