ರಮ್ಯ ಫ್ಯಾನ್ಸ್ ಗೆ ಸಿಹಿಸುದ್ದಿ: ನೀನಾಸಂ ಸತೀಶ್ ಗೆ ಜೊತೆಯಾದ ಪದ್ಮಾವತಿ

ಸದ್ಯ ಸ್ಯಾಂಡಲ್ ವುಡ್ ಹಾಗೂ ರಾಜಕೀಯ ಎರಡರಿಂದಲೂ ದೂರ ಉಳಿದಿರುವ ನಟಿ ರಮ್ಯ ಫ್ಯಾನ್ಸ್ ಗೆ ಸಿಹಿಸುದ್ದಿ‌ನೀಡಿದ್ದಾರೆ. ನಟನೆಯಿಂದ ದೂರ ಉಳಿದಿದ್ದರೂ ಚಂದನವನದ ನಟನನ್ನು ಪ್ರೋತ್ಸಾಹಿಸಿರುವ ರಮ್ಯ ನೀನಾಸಂ ಪ್ರಯತ್ನಕ್ಕೆ ಕೈಜೋಡಿಸಿ ಸಂಭ್ರಮಿಸಿದ್ದಾರೆ.

ಹಲವು ವರ್ಷಗಳ ಬಳಿಕ ಸ್ಯಾಂಡಲ್ ವುಡ್ ಚಟುವಟಿಕೆಯಲ್ಲಿ ಪಾಲ್ಗೊಂಡ ರಮ್ಯ ನೀನಾಸಂ ಸತೀಶ್ ನಟಿಸುತ್ತಿರುವ ಪರಭಾಷೆ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ನಟಿಯರ ಬಳಿಕ ನಟ ನೀನಾಸಂ ಸತೀಶ್ ಕಾಲಿವುಡ್ ಗೆ ಹಾರಿದ್ದು ಪಗೈವನುಕು ಅರುಳ್ವಾಯ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಫರ್ಸ್ಟ್ ಲುಕ್ ನ್ನು ರಮ್ಯ ಬಿಡುಗಡೆ ಮಾಡಿದ್ದು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಇದನ್ನೂ ಓದಿ: ತಲೈವಿ ಚಿತ್ರತಂಡದ ಕನ್ನಡ ಪ್ರೀತಿ:ಗುಳಿ ಕೆನ್ನೆ ಬೆಡಗಿಗೆ ಸಿಕ್ತು ಸ್ಪೆಶಲ್ ಗಿಫ್ಟ್

ತುಂಬ ಉತ್ಸಾಹದಿಂದ ಲಾಂಚ್ ಮಾಡುತ್ತಿದ್ದೇನೆ. ಕನ್ನಡದ ನಮ್ಮ ಹೆಮ್ಮೆಯ ನಟ ಸತೀಶ್ ನೀನಾಸಂ ಅವರ ಪಗೈವನುಕು ಅರುಳ್ವಾಯ ಚಿತ್ರದ ಪೋಸ್ಟರ್ ನ್ನು ರಿಲೀಸ್ ಮಾಡಿದ್ದೇನೆ ಎಂದಿದ್ದಾರೆ. ಅಲ್ಲದೇ ಸತೀಶ್ ನೀನಾಸಂ ತಮಿಳಿನಲ್ಲಿ ನಟಿಸುತ್ತಿದ್ದಾರೆ. ನಮ್ಮ ನಟರು ಬೇರೆ ಭಾಷೆಯಲ್ಲಿ ಬೆಳೆಯುತ್ತಿರುವುದು ನಮ್ಮ ಹೆಮ್ಮೆ ಎಂದಿದ್ದಾರೆ.

ಇದನ್ನೂ ಓದಿ: ಶರ್ಟ್ ಬಟನ್ ಹಾಕಲು ಮರೆತ್ರಾ ಮೌನಿ ರಾಯ್?: ನಾಗಿನ್ ನಟಿಯ ಬೋಲ್ಡ್ ಅವತಾರ ವೈರಲ್

ಇನ್ನು ರಮ್ಯ ಪೋಸ್ಟ್ ಗೆ ನಟ ನೀನಾಸಂ ಸತೀಶ್ ಕೂಡ ಖುಷಿ ಹಂಚಿಕೊಂಡಿದ್ದು ನಿಮ್ಮ ಪ್ರೀತಿಗೆ ಆಭಾರಿ ನಿಮ್ಮ ಹಸ್ತದಿಂದ ಪೋಸ್ಟರ್ ಬಿಡುಗಡೆ ಮಾಡಿಸುತ್ತಿರುವುದಕ್ಕೆ ಖುಷಿಯಿದೆ ಎಂದಿದ್ದಾರೆ. ರಮ್ಯ ರಿಲೀಸ್ ಮಾಡಿರೋ ಪೋಸ್ಟರ್ ನಲ್ಲಿ ನಟ ಸತೀಶ್ ಸಿಗರೇಟ್ ಸೇದುತ್ತಿರುವ ಸಖತ್ ಸ್ಟೈಲಿಶ್ ಆಗಿದ್ದು ಗಮನಸೆಳೆಯುವಂತಿದೆ.

(Sandalwood actress Ramya promoting ninasam sathish’s new movie)

Comments are closed.